ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌: ಡೆಲ್ಲಿ-ಗೋವಾ ಪಂದ್ಯ ಡ್ರಾನಲ್ಲಿ ಅಂತ್ಯ

Delhi vs GOA

ಗುರುವಾರ ಗೋವಾದ ಮಪುಸಾದ ಪೆಡ್ಡೆಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 12ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಗೋವಾ ಮತ್ತು ದೆಹಲಿ ತಂಡಗಳ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾ ಸಾಧಿಸಿವೆ.

ಮೊದಲ ಕ್ವಾರ್ಟರ್ ಡೆಲ್ಲಿ ಆಟಗಾರ ಅಫ್ರಿದಿಯ ಗೋಲಿನೊಂದಿಗೆ ಪ್ರಾರಂಭವಾಯಿತು ಮತ್ತು ಇದಕ್ಕೆ ವಿರುದ್ಧವಾಗಿ ಗೋವಾ ತಮ್ಮ ಆಕ್ರಮಣಕಾರಿ ಹೋರಾಟವನ್ನ ತೋರಿಸಿತು. ಆದರೆ ಗೋವಾ ಇದ್ಯಾವುದಕ್ಕೆ ಜಗ್ಗದೆ ಹಾರ್ಡ್‌ಕೋರ್ ರಕ್ಷಣೆಯನ್ನು ಹೊಂದಿತ್ತು ಮತ್ತು ಸೆಕೆಂಡ್‌ ಕ್ವಾರ್ಟರ್‌ನ ಉದ್ದಕ್ಕೂ ದೆಹಲಿಯನ್ನು ತಮ್ಮ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯುವಲ್ಲಿ ಯಶಸ್ವಿಯಾಯಿತು.

ಮೂರನೇ ಕ್ವಾರ್ಟರ್‌ನಲ್ಲೂ ಎರಡು ರಾಜ್ಯಗಳ ತಂಡಗಳು ಸಮಬಲ ಸಾಧಿಸಿದರ ಪರಿಣಾಮ ಯಾವುದೇ ಗೋಲು ದಾಖಲಾಗಲಿಲ್ಲ. ಆದ್ರೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಗೋವಾದ ಆನಂದ್ ಕುಮಾರ್ ಅವರು ಡೆಲ್ಲಿ ಡಿಫೆನ್ಸ್ ಅನ್ನು ಕೆಡವುವಲ್ಲಿ ಯಶಸ್ವಿಯಾದರು ಮತ್ತು ಸ್ಕೋರ್ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿ ಅಮೋಘ ಗೋಲು ಗಳಿಸಿದರು.

Delhi vs GOA

ಎರಡನೇ ದಿನದ ಎರಡನೇ ಪಂದ್ಯವು ನೆಕ್ ಟು ನೆಕ್ ಆಕ್ಷನ್ ಅನ್ನು ಒಳಗೊಂಡಿತ್ತು, ಏಕೆಂದರೆ ಮಹಾರಾಷ್ಟ್ರವು ಅಸ್ಸಾಂ ವಿರುದ್ಧ ಕಠಿಣ ಪೈಪೋಟಿ ಎದುರಿಸಿತು. ಈಶಾನ್ಯ ರಾಜ್ಯವು ಸ್ವಯಂ ಗಂಗುರ್ಡೆ ಮೂಲಕ ತಮ್ಮ ಖಾತೆಯನ್ನು ತೆರೆಯಿತು. ಆದ್ರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಮಹಾರಾಷ್ಟ್ರದ ತಂಡವು ಆರಂಭಿಕ ಗೋಲು ದಾಖಲಿಸಿದ ಪರಿಣಾಮ ಸ್ಕೋರ್‌ಬೋರ್ಡ್ ಸಮಗೊಂಡಿತು.

ಹಾಕಿ ಏಷ್ಯಾ ಕಪ್ 2022: ಪ್ರಥಮ ಪಂದ್ಯದಲ್ಲೇ ಭಾರತ - ಪಾಕ್ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿಹಾಕಿ ಏಷ್ಯಾ ಕಪ್ 2022: ಪ್ರಥಮ ಪಂದ್ಯದಲ್ಲೇ ಭಾರತ - ಪಾಕ್ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿ

ಸೆಕೆಂಡ್ ಕ್ವಾರ್ಟರ್‌ನಲ್ಲಿ ಅಸ್ಸಾಂ ತಂಡವನ್ನು ಮತ್ತೊಮ್ಮೆ ಅಗ್ರಸ್ಥಾನಕ್ಕೆ ತಂದಿತು, ಸ್ಕೋರ್‌ಬೋರ್ಡ್ 2 - 1 ರಿಂದ ಅವರ ಪರವಾಗಿ ಓಡುತ್ತಿದ್ದಂತೆ ಅಸ್ಸಾಮಿ ತಂಡವು ಕಠಿಣ ಹೋರಾಟದ ಎರಡನೇ ಕ್ವಾರ್ಟರ್ ಕೊನೆಗೊಂಡಿತು. 3 ಕ್ವಾರ್ಟರ್‌ನಲ್ಲಿ ಆರಂಭಿಕ ಗೋಲಿನ ಮೂಲಕ ಕ್ರಿಸ್ಟಿಯಾನೊ ಕೊರ್ರಿಯಾ ಮಹಾರಾಷ್ಟ್ರ ತಂಡಕ್ಕೆ ಸಮಬಲ ತಂದುಕೊಟ್ಟರು. 3ನೇ ಕ್ವಾರ್ಟರ್‌ನ ಕೊನೆಯಲ್ಲಿ ಮಹಾರಾಷ್ಟ್ರ ನಾಯಕ ಪ್ರದೀಪ್ ರೆಡ್ಡಿ ಅವರು ತಮ್ಮ ತಂಡವನ್ನು ನಿರ್ಣಾಯಕ ಗೋಲಿನತ್ತ ಮುನ್ನಡೆಸಿದರು, ಇದು ಪಂದ್ಯದ ಅಂತಿಮ ಗೋಲು ಆಗಿ ಕೊನೆಗೊಂಡಿತು. ಮಹಾರಾಷ್ಟ್ರ 3-2ರಿಂದ ಪಂದ್ಯ ಗೆದ್ದಿತು.

Story first published: Thursday, May 5, 2022, 22:40 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X