Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ

Asian champions trophy 2021: India won against Pakistan by 3-1

ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತಕ್ಕೆ ಇಂದು ಬದ್ಧ ಎದುರಾಳಿ ಪಾಕಿಸ್ತಾನ ಸವಾಲೊಡ್ಡಿತ್ತು. ಈ ಪಮದ್ಯದಲ್ಲಿ ಮನ್‌ಪ್ರೀತ್‌ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಪಾಕಿಸ್ತಾನದ ವಿರುದ್ಧ ಭರ್ಜರಿ 3-1 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಹರ್ಮನ್‌ಪ್ರೀತ್ ಸಿಂಗ್ ಹಾಗೂ ಆಕಾಶ್ ದೀಪ್ ಸಿಂಗ್ ಅವರ ಗೋಲುಗಳ ನೆರವಿನಿಂದ ಭಾರತ ತಂಡ ಪಾಕಿಸ್ತಾನವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಹರ್ಮನ್‌ಪ್ರೀತ್ ಸಿಂಗ್ ಭಾರತದ ಪರವಾಗಿ ಮೊದಲ ಗೋಲು ದಾಖಲಿಸುವ ಮೂಲಕ ಮೊದಲಾರ್ಧಕ್ಕೂ ಮುನ್ನ ಭಾರತ 1-0 ಅಂತರದಿಂದ ಮುನ್ನಡೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಭಾರತದ ಪರವಾಗಿ ಆಕಾಶ್‌ದೀಪ್ ಸಿಂಗ್ ಎರಡನೇ ಗೋಲು ಗಳಿಸಲು ಯಶಸ್ವಿಯಾದರು. ನಂತರ ಪಾಕಿಸ್ತಾನ ತಂಡ ಕೂಡ ಒಮದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಗೋಲುಗಳ ಅಂತರವನ್ನು 2-1ಕ್ಕೆ ತಗ್ಗಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.

ಅಂತಿಮ ಘಟ್ಟದಲ್ಲಿ ಭಾರತ ತಂಡದ ಆಟಗಾರರು ಮತ್ತಷ್ಟು ಆಕ್ರಮಣಕಾರಿ ಆಟವಾಡಲು ಮುಂದಾದರು. ಇದರಲ್ಲಿ ಭಾರತ ತಂಡ ಯಶಸ್ಸು ಸಾಧಿಸಿತು. ಹರ್ಮನ್‌ಪ್ರೀತ್ ಮತ್ತೊಂದು ಗೋಲನ್ನು ಭಾರತದ ಪರವಾಗಿ ದಾಖಲಿಸಿದರು. ಈ ಮೂಲಕ ಭಾರತ ಮೂರನೇ ಗೋಲನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು.

ಅಂತಿಮ ಹಂತದಲ್ಲಿ ಪಾಕಿಸ್ತಾನ ತಂಡ ಮೇಲುಗೈ ಸಾಧಿಸಲು ಭಾರೀ ಪ್ರಯಯತ್ನವನ್ನು ನಡೆಸಿತು. ಆದರೆ ಹರ್ಮನ್‌ಪ್ರೀತ್ ಅವರ ಎರಡನೇ ಗೋಲು ಪಾಕಿಸ್ತಾನ ತಂಡಕ್ಕೆ ಅವಕಾಶ ನಿಡಲಿಲ್ಲ. ಈ ಮೂಲಕ ಭಾರತದ ವಿರುದ್ಧ ಮುನ್ನಡೆ ಸಾಧಿಸುವ ಪಾಕಿಸ್ತಾನದ ಪ್ರಯತ್ನ ವಿಫಲವಾಯಿತು. ಇನ್ನು ಭಾರತದ ಪರವಾಗಿ ಹರ್ಮನ್ ಪ್ರೀತ್ ಸಿಂಗ್ ಹಾಗೂ ಆಕಾಶ್‌ ದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದರು. ಇನ್ನು ವರುಣ್ ಕುಮಾರ್ ಕೂಡ ರಕ್ಷಣಾ ವಿಭಾಗದಲ್ಲಿ ನೀಡಿದ ಪ್ರದರ್ಶನ ಗಮನಸೆಳೆಯಿತು. ಶಿಲಾನಂದ್ ಲಾಕ್ರ ಕೂಡ ಅದ್ಭುತ ಆಟವನ್ನು ಪ್ರದರ್ಶಿಸಿದರು.

ಇನ್ನು ಈ ಗೆಲುವಿನೊಮದಿಗೆ ಭಾರತ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ ಒಂದು ಡ್ರಾ ಸಾಧಿಸಿದೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಗೋಲಿನ ಸುರಿಮಳೆಗೈದಿತ್ತು. ಆತಿಥೇಯ ಬಾಂಗ್ಲಾದೇಶದ ವಿರುದ್ಧ ಭಾರತ ಭರ್ಜರಿ 9-0 ಅಂತರದಿಂದ ಗೆಲುವು ಸಾಧಿಸಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ಕಣಕ್ಕಿಳಿದಿರುವ ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತೀಯ ಹಾಕಿ ತಂಡದ ಪರವಾಗಿ ಈ ಟೂರ್ನಿಯಲ್ಲಿ ಕೆಲ ಹೊಸ ಆಟಗಾರರು ಆವಕಾಶ ಪಡೆದಿದ್ದಾರೆ. ಇನ್ನು ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಕೊರಿಯಾ ತಂಡವನ್ನು ಎದುರಿಸಿತ್ತು. ಆ ಪಂದ್ಯ 2-2 ಅಂತರದಿಂದ ಡ್ರಾಗೊಂಡಿತ್ತು.

ಭಾರತದ ಸ್ಕ್ವಾಡ್ ಹೀಗಿದೆ: ಶಾನ್ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರಾ, ಹರ್ಮನ್‌ಪ್ರೀತ್ ಸಿಂಗ್, ಗುರಿಂದರ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ದಿಪ್ಸನ್ ಟಿರ್ಕಿ, ವರುಣ್ ಕುಮಾರ್, ನಿಲಮ್ ಸಂಜೀಪ್ ಕ್ಸೆಸ್, ಮನ್‌ದೀಪ್ ಮೋರ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಜಸ್ಕರನ್ ಸಿಂಗ್, ಸುಮಿತ್, ರಾಜ್‌ಕುಮಾರ್ ಪಾಲ್, ಆಕಾಶದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್ಪ್ರೀತ್ ಸಿಂಗ್, ಗುರ್ಸಾಹಿಬ್ಜಿತ್ ಸಿಂಗ್, ಶಿಲಾನಂದ್ ಲಾಕ್ರಾ

Story first published: Friday, December 17, 2021, 23:33 [IST]
Other articles published on Dec 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+