For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನಕ್ಕೆ ಸೋಲುಣಿಸಿ ಕಂಚಿನ ಪದಕ ಗೆದ್ದ ಭಾರತ

Asian Champions Trophy, Hockey: India won against Pakistan by 4-3 Finish with Bronze

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತೀಯ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಹಾಕಿ ಟೂರ್ನಿಯಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿದ್ದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ರೋಚಕ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 4-3 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ವಿಜೇತ ತಂಡಗಳಾಗಿದ್ದವು.

ಭಾರತ ಈ ಬಾರಿಯ ಏಷ್ಯನ್ ಚಾಂಪಿಯನ್ಸ್ ಟೂರ್ನಿಯಲ್ಲಿಯೂ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ಹಂತದಲ್ಲಿ ಜಪಾನ್ ವಿರುದ್ಧ 3-5 ಅಂತರದಿಂದ ಸೋಲು ಅನುಭವಿಸಿದ ಕಾರಣ ಫೈನಲ್‌ಗೇರಲು ವಿಫಲವಾಗಿತ್ತು. ಹೀಗಾಗಿ ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನದ ವಿರುದ್ಧ ಪೈಪೋಟಿ ನಡೆಸಿದೆ. ಈ ಜಿದ್ದಾಜಿದ್ದಿನ ಸೆಣೆಸಾಟದಲ್ಲಿ ಭಾರತ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಭಾರತ ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಗೋಲು ಸಿಡಿಸಿದ್ದರು. ನಂತರ 45ನೇ ನಿಮಿಷದಲ್ಲಿ ಸುಮಿತ್, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಹಾಗೂ 57ನೇ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್ ಗೋಲು ಗಳಿಸಿದ್ದರು. ಇನ್ನು ಪಾಕಿಸ್ತಾನದ ಪರವಾಗಿ 10ನೇ ನಿಮಿಷದಲ್ಲಿ ಅರ್ಫಾಜ್ 33ನೇ ನಿಮಿಷದಲ್ಲಿ ಅಬ್ದುಲ್ ರಾಣಾ ಹಾಗೂ 57ನೇ ನಿಮಿಷದಲ್ಲಿ ಅಹ್ಮದ್ ನದೀಮ್ ಗೋಲು ಗಳಿಸಿದ್ದರು.

ಇದು ಪಾಕಿಸ್ತಾನದ ವಿರುದ್ಧ ಈ ಬಾರಿಯ ಈ ಟೂರ್ನಿಯಲ್ಲಿ ಭಾರತ ಸಾಧಿಸುತ್ತಿರುವ ಎರಡನೇ ಗೆಲುವು ಎಂಬುದು ಗಮನಾರ್ಹ ಅಂಶ. ಅದಕ್ಕೂ ಮುನ್ನ ರೌಂಡ್ ರಾಬಿನ್ ಸುತ್ತಿನಲ್ಲಿಯೂ ಪಾಕಿಸ್ತಾನವನ್ನು ಎದುರಿಸಿದ್ದ ಭಾರತ 3-1 ಅಂತರದಿಂದ ಗೆಲುವು ಸಾಧಿಸಿತ್ತು.

ಇನ್ನು ರೌಂಡ್ ರಾಬಿನ್ ಸುತ್ತಿನಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡಿ ಅಜೇಯವಾಗಿ ಸೆಮಿಫೈನಲ್ ಹಂತಕ್ಕೆ ತಲುಪಿತ್ತು. ಹೀಗಾಗಿ ಈ ಟೂರ್ನಿಯಲ್ಲಿ ಸಹಜವಾಗಿಯೇ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಆಘಾತಕಾರಿ ರೀತಿಯಲ್ಲಿ 3-5 ಅಂತರದಿಂದ ಸೋಲು ಕಂಡು ಫೈನಲ್ ಹಂತಕ್ಕೆ ಪ್ರವೇಶ ಪಡೆಯಲು ವಿಫಲವಾಯಿತು.

ಅದಕ್ಕೂ ಮುನ್ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ತಂಡ ಎದುರಾಗಿದ್ದು ಈ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಭರ್ಜರಿ 6-0 ಅಂತರದಿಂದ ಭಾರತ ಗೆದ್ದು ಲೀಗ್ ಹಂತದಲ್ಲಿ ಅಗ್ರ ಸ್ಥಾನಿಯಾಗಿ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ರೌಂಡ್ ರಾಬಿನ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ 3 ಗೆಲುವು ಹಾಗೂ ಒಂದು ಡ್ರಾ ಸಾಧಿಸಿತ್ತು ಭಾರತ. ಆದರೆ ನಾಕ್‌ಔಟ್ ಪಂದ್ಯದಲ್ಲಿ ಜಪಾನ್ ವಿರುದ್ಧ ಸೋಲು ಅನುಭವಿಸುವ ಮೂಲಕ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಆದರೆ ಇದೀಗ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದೆ.

ಇನ್ನು ಈ ಟೂರ್ನಿಯಲ್ಲಿ ಜಪಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಎರಡು ತಂಡಗಳ ನಡುವಿನ ಅಂತಿಮ ಹಣಾಹಣಿ ಬುಧವಾರ ನಡೆಯಲಿದ್ದು ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರುವ ಆಟಗಾರರು ಯಾರು ಎಂಬ ಕುತೂಹಲಕ್ಕೆ ಉತ್ತರ ದೊರೆಯಲಿದೆ.

Story first published: Thursday, December 23, 2021, 9:58 [IST]
Other articles published on Dec 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+