ಯೋ-ಯೋ ಟೆಸ್ಟ್: 29ರ ಹರೆಯದ ಕೊಹ್ಲಿಗಿಂತ 32ರ ಸರ್ದಾರ್ ಫಿಟ್!

ನವದೆಹಲಿ, ಆಗಸ್ಟ್ 16: ವಿರಾಟ್ ಕೊಹ್ಲಿ ಗೆ ಫಿಟ್ನೆಸ್ ಗೀಳಿರೋದು ಹೆಚ್ಚಿನವರಿಗೆ ಗೊತ್ತಿರೋದೆ. ಭಾರತ ತಂಡದ ಉಳಿದ ಆಟಗಾರರಿಗೆ ಹೋಲಿಸಿದರೆ ಕೊಹ್ಲಿ ಫಿಟ್ನೆಸ್ ನಲ್ಲಿ ಭರ್ಜರಿ ಮುನ್ನಡೆಯಲ್ಲಿದ್ದಾರೆ. ಆದರೆ ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರು ಯೊ-ಯೋ ಟೆಸ್ಟ್ ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ ಗಮನ ಸೆಳೆದಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಯೋ-ಯೋ ಟೆಸ್ಟ್ ನಲ್ಲಿ ಪಾಸಾಗಲೇಬೇಕೆಂಬ ಮಾನದಂಡವಿದೆ. ಇದರಲ್ಲಿ ಕೊಹ್ಲಿ 19 ಅಂಕ ಪಡೆದು ಗುರುತಿಸಿಕೊಂಡಿದ್ದರು. ಆದರೆ 32ರ ಹರೆಯದ ಹಾಕಿ ಮಿಡ್ ಫೀಲ್ಡರ್ ಸರ್ದಾರ್ 21.4 ಅಂಕಗಳಿಂದ ಕೊಹ್ಲಿಯನ್ನು ಸರಿಗಟ್ಟುವ ಮೂಲಕ ತಾನು ಕೊಹ್ಲಿಗಿಂತ ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಆಟಗಾರನೊಬ್ಬ ಯೋ-ಯೋ ಟೆಸ್ಟ್ ನಲ್ಲಿ ಕನಿಷ್ಠ 16.1 ಅಂಕ ಪಡೆಯಬೇಕೆಂಬ ಮಾನದಂಡವನ್ನು ಬಿಸಿಸಿಐ ವಿಧಿಸಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಅಲ್ಲಿ ಆಟಗಾರನೊಬ್ಬ ಕನಿಷ್ಠ 19 ಪಾಯಿಂಟ್ ಗಳಿಸಲೇಬೇಕು.
ಅಂದ್ಹಾಗೆ ಸರ್ದಾರ್ ಈ ರೀತಿಯ ಹುಚ್ಚು ಪಾಯಿಂಟ್ ಗಳಿಸಲು ಹಿನ್ನೆಲೆಯಿದೆ. ಚುರುಕು ಮತ್ತು ವೇಗಕ್ಕೆ ಸಂಬಂಧಿಸಿ ಸರ್ದಾರ್ ಹಿಂದಿದ್ದಾರೆಂದು ಪರಿಗಣಿಸಿ ಅವರನ್ನು ಹಾಕಿ ತಂಡದಿಂದ ಕೈ ಬಿಡಲಾಗಿತ್ತು. ಇದರಿಂದ ಕಿಡಿ ಹತ್ತಿಸಿಕೊಂಡ ಸರ್ದಾರ್ ನಾಲ್ಕು ತಿಂಗಳ ಕಾಲ ಮೈದಾನದಲ್ಲಿ ಬೆವರು ಹರಿಸಿದ್ದರು. ಈಗ ಭರ್ಜರಿ ಫಿಟ್ ನಲ್ಲಿರುವುದನ್ನೂ ತೋರಿಸಿಕೊಟ್ಟಿದ್ದಾರೆ. ಮುಂಬರುವ ಜಕಾರ್ತಾ ಏಷ್ಯನ್ ಗೇಮ್ಸ್ ಗಾಗಿ ಭಾರತದ ಹಾಕಿ ತಂಡಕ್ಕೆ ಸರ್ದಾರ್ ಸೇರಿಕೊಳ್ಳುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications