Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ವಿಶ್ವಕಪ್ ಪ್ರಚಾರ: ಭಾರತದ ಧ್ವಜದಲ್ಲಿ ಅಶೋಕ ಚಕ್ರವೇ ಕಾಣೆ!

Hockey Women's world cup : ಭಾರತದ ಧ್ವಜದಲ್ಲಿ ಅಶೋಕ ಚಕ್ರವೇ ಕಾಣೆ! | Oneindia Kannada
FIH Goofs Up With Indian National Flag, Omits Ashoka Chakra

ಲಂಡನ್, ಜುಲೈ 19: ಜುಲೈ 21ರ ಶನಿವಾರದಿಂದ ಇಂಗ್ಲೆಂಡ್ ನ ಲಂಡನ್ ನಲ್ಲಿ 2018ರ ಇಂಟರ್ ನ್ಯಾಷನಲ್ ಫೆಡರೇಶನ್ ವನಿತಾ ಹಾಕಿ ವಿಶ್ವಕಪ್ ಪಂದ್ಯಾಟ ಚಾಲನೆಗೊಳ್ಳುವುದರಲ್ಲಿದೆ. ಹೀಗಾಗಿ ಇದರ ಪ್ರಚಾರ ಭರದಿಂದ ಸಾಗುತ್ತಿದೆ. ಆದರೆ ಪ್ರಚಾರದ ವೇಳೆ ಭಾರತ ಧ್ವಜದಲ್ಲಿ ಅಶೋಕ ಚಕ್ರವೇ ಕಾಣಿಸದ ಸಂಗತಿ ನಡೆದಿದೆ.

ವಿವಿಧ 16 ತಂಡಗಳು ಪಾಲ್ಗೊಳ್ಳಲಿರುವ ಈ ಪಂದ್ಯಾಟದ ಪ್ರಚಾರಾರ್ಥವಾಗಿ ಭಾರತದ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಅವರನ್ನು ಆಹ್ವಾನಿಸಲಾಗಿತ್ತು. ಲಂಡನ್ ನ ಥೀಮ್ಸ್ ನದಿಯ ಸಮೀಪ 16 ಬೃಹತ್ ಚೆಂಡುಗಳ ಒಳಗೆ ಆಯಾ ರಾಷ್ಟ್ರಗಳ ಧ್ವಜವನ್ನು ಸೇರಿಸಿ ಚೆಂಡುಗಳ ಮಧ್ಯೆ ರಾಂಪಾಲ್ ಅವರನ್ನು ನಿಲ್ಲಿಸಿದ್ದ ಚಿತ್ರವನ್ನು ಪ್ರಚಾರಾರ್ಥವಾಗಿ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.

ಪ್ರಚಾರಕ್ಕಾಗಿ ಹೀಗೆ ಹರಿಯಬಿಟ್ಟಿರುವ ಚಿತ್ರದಲ್ಲೊಂದು ಪ್ರಮಾದವಾಗಿದೆ. ಚೆಂಡಿನ ಒಳಗಿರುವ ಭಾರತ ಧ್ವಜದದಲ್ಲಿ ಭಾರತದ ರಾಷ್ಟ್ರೀಯ ಹೆಮ್ಮೆಯ ದ್ಯೋತಕವಾದ ಅಶೋಕ ಚಕ್ರವೇ ಕಾಣೆಯಾಗಿತ್ತು. ಬರೀ ಕೇಸರಿ, ಬಿಳಿ, ಹಸಿರು ತ್ರಿವರ್ಣ ಮಾತ್ರವೇ ಅಲ್ಲಿತ್ತು.

ಟೂರ್ನಮೆಂಟ್ ಸಲುವಾಗಿ ಈಗಾಗಲೇ ಲಂಡನ್ ನಲ್ಲಿರುವ ಭಾರತದ ಆಟಗಾರರು ಅಥವಾ ಅಥವಾ ಅಧಿಕಾರಿಗಳು ಈ ಬಗ್ಗೆ ಕಾರ್ಯಕ್ರಮ ಆಯೋಜಕರ ಗಮನ ಸೆಳೆದು ತಿದ್ದಿಕೊಳ್ಳಲು ತಿಳಿಸಿದ್ದಾರೋ ಇಲ್ಲವೋ ತಿಳಿದುಬಂದಿಲ್ಲ. ಆದರೆ ಪಂದ್ಯಾಟ ನಡೆಯುವ ತಾಣದ ಸುತ್ತಮುತ್ತ ಎಲ್ಲಿಯೂ ಇಂಥ ಪ್ರಮಾದ ಮರು ಘಟಿಸದಂತೆ ಹಾಕಿ ಇಂಡಿಯಾ ನೋಡಿಕೊಳ್ಳಬೇಕಾದ ಅಗತ್ಯವಿದೆ.

ಭಾರತದ ವನಿತಾ ತಂಡ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಇದು ಏಳನೇಬಾರಿಗೆ ಸ್ಪರ್ಧಿಸುತ್ತಿದ್ದು, 1974ರ ಆರಂಭಿಕ ಪಂದ್ಯಾಟದಲ್ಲಿ ನಾಲ್ಕನೇ ಸ್ಥಾನಿಯಾಗಿ ಹೊರಹೊಮ್ಮಿತ್ತು. ಜುಲೈ 21ರಿಂದ 5 ಆಗಸ್ಟ್ ವರೆಗೆ ನಡೆಯಲಿರುವ 14ನೇ ಆವೃತ್ತಿಯ ಈ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ(ಜು. 21)ದಲ್ಲಿ ಭಾರತ ತಂಡ ಆತಿಥೆಯ ಇಂಗ್ಲೆಂಡ್ ಸವಾಲು ಸ್ವೀಕರಿಸಲಿದೆ.

Story first published: Thursday, July 19, 2018, 19:03 [IST]
Other articles published on Jul 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+