ಹಾಕಿ ವಿಶ್ವಕಪ್: ಬೆಲ್ಜಿಯಂ ಎದುರು ಹೀನಾಯ ಸೋಲು, ಪಾಕ್ ಸ್ಪರ್ಧೆ ಅಂತ್ಯ!

ಭುವನೇಶ್ವರ್, ಡಿಸೆಂಬರ್ 11: ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 11) ನಡೆದ ಪುರುಷರ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ ಎದುರು ಪಾಕಿಸ್ತಾನ ತಂಡ 5-0ಯ ಹೀನಾಯ ಸೋಲನುಭವಿಸಿದೆ. ಈ ಮೂಲಕ ಪಾಕ್ ಸ್ಪರ್ಧೆ ಅಂತ್ಯಗೊಂಡಂತಾಗಿದೆ.
ಪಂದ್ಯ ಆರಂಭಗೊಂಡ 10ನೇ ನಿಮಿಷದಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. 13ನೇ ನಿಮಿಷಲ್ಲಿ ಥಾಮಸ್ ಬ್ರೈಲ್ಸ್ ಎರಡನೇ ಗೋಲ್ ಬಾರಿಸಿ ಮುನ್ನಡೆ ಹೆಚ್ಚಿಸಿಕೊಂಡರು. ಪಾಕಿಸ್ಥಾನವೂ ಈ ವೇಳೆ ಉತ್ತಮ ಆಟವನ್ನೇ ಪ್ರಸರ್ಶಿಸಿತು. ಆದರೆ ಗೋಲ್ ದಾಖಲಿಸಲು ಅದರಿಂದಾಗಲಿಲ್ಲ.
ಪಂದ್ಯ ಮುಂದುವರೆದಂತೆ ಬೆಲ್ಜಿಯಂನ ಗೋಲ್ ಸಂಖ್ಯೆ ಹೆಚ್ಚುತ್ತಾ ಹೋಯ್ತು. ಸೆಡ್ರಿಕ್ ಚಾರ್ಲಿಯರ್ ಅವರು 27ನೇ ನಿಮಿಷದಲ್ಲಿ ತಂಡದ ಪರ 3ನೇ ಗೋಲ್ ಬಾರಿಸಿದರು. ಸೆಬಾಸ್ಟಿಯನ್ ಅವರು 35ನೇ ನಿಮಿಷದಲ್ಲಿ 4ನೇ ಗೋಲ್ ಕೊಡುಗೆ ಕೊಟ್ಟರು. ಟಾಮ್ ಬೂಮ್ ಅವರಿಂದ 53ನೇ ನಿಮಿಷದಲ್ಲಿ 5ನೇ ಗೋಲ್ ಸಿಡಿಯಿತು.
ಅಂತೂ ವಿಶ್ವ ರ್ಯಾಂಕಿಂಗ್‌ನ 13ನೇ ಸ್ಥಾನಿಗ ಪಾಕಿಸ್ತಾನಕ್ಕೆ 3ನೇ ಶ್ರೇಯಾಂಕಿತ ಬೆಲ್ಜಿಯಂ ಎದುರು ಒಂದೇ ಒಂದು ಗೋಲ್ ಬಾರಿಸಲಾಗಲಿಲ್ಲ. ಡಿಸೆಂಬರ್ 14ರ ಗುರುವಾರ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಬೆಲ್ಜಿಯಂ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications