
ಭುವನೇಶ್ವರ್, ಡಿಸೆಂಬರ್ 4: ಭುವನೇಶ್ವರ್ ನ ಕಳಿಂಗ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 4) ನಡೆದ ಪುರುಷರ ಹಾಕಿ ವಿಶ್ವಕಪ್ 14ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಚೀನಾ ತಂಡ 1-1ರ ಸಮಬಲ ಸಾಧಿಸಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು ಇದೇ ಮೊದಲು.
ಪಂದ್ಯದ ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಗೋಲ್‌ಗಾಗಿ ಪೈಪೋಟಿ ನಡೆಸಿದವು. ಮೊದಲ ಕ್ವಾರ್ಟರ್ ಮತ್ತು ದ್ವಿತೀಯ ಕ್ವಾರ್ಟರ್ ನಲ್ಲಿ ಗೋಲ್ ದಾಖಲಾಗಿರಲಿಲ್ಲ. ಆದರೆ ತೃತೀಯ ಕ್ವಾರ್ಟರ್ ನಲ್ಲಿ ಚೀನಾ ಗೋಲ್ ಖಾತೆ ತೆರೆಯಿತು.
ಚೀನಾದ ಗುವೋ ಜಿನ್ ಅವರು 43ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆದರೆ ಅದಾಗಿ ಮರುಕ್ಷಣವೇ ಐರ್ಲೆಂಡ್ ಕೂಡ ಗೋಲ್ ಬಾರಿಸಿ ಅಂತರವನ್ನು 1-1ಕ್ಕೆ ಸರಿದೂಗಿಸಿತು. ಐರ್ಲೆಂಡ್‌ನ ಅಲನ್ ಸೊತರ್ನ್ನೆ 44ನೇ ನಿಮಿಷದಲ್ಲಿ ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.