ಹಾಕಿ ವಿಶ್ವಕಪ್: ಇಂಗ್ಲೆಂಡ್ vs ಚೀನಾ ರೋಚಕ ಪಂದ್ಯ 'ಡ್ರಾ'ದೊಂದಿಗೆ ಅಂತ್ಯ

ಭುವನೇಶ್ವರ್, ನವೆಂಬರ್ 30: ಭುವನೇಶ್ವರ್ ನ ಕಳಿಂಗ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 30) ನಡೆದ ಪುರುಷರ ಹಾಕಿ ವಿಶ್ವಕಪ್ ಬಿ ಗ್ರೂಪ್‌ನ ಪಂದ್ಯದಲ್ಲಿ ಚೀನಾ ಮತ್ತು ಇಂಗ್ಲೆಂಡ್ ತಂಡಗಳು 2-2ರ ಸಮಬಲ ಸಾಧಿಸಿವೆ.
1986ರ ರನ್ನರ್ಸ್ ತಂಡ ಇಂಗ್ಲೆಂಡ್ ಗೆಲ್ಲುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಚೀನಾ ಉತ್ತಮ ಪೈಪೋಟಿ ಮೂಲಕ ಪಂದ್ಯದ ಫಲಿತಾಂಶವನ್ನು ಹಿಡಿದಿಟ್ಟುಕೊಂಡಿತು. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಚೀನಾದ ಕ್ಸಿಯಾಪಿಂಗ್ ಗು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು.
ಅದಾಗಿ 14ನೇ ನಿಮಿಷದಲ್ಲಿ ಇಂಗ್ಲೆಂಡ್ ನಿಂದ ಮಾರ್ಕ್ ಗ್ಲೆಘೋರ್ನ್ ಗೋಲ್ ಬಾರಿಸಿ ಅಂತರವನ್ನು 1-1ಕ್ಕೆ ತಂದರು. 48ನೇ ನಿಮಿಷದಲ್ಲಿ ಇಂಗ್ಲೆಂಡ್ ನ ಯಾಮ್ ಅನ್ಸೆಲ್ ಅವರಿಂದ ಎರಡನೇ ಗೋಲ್ ದಾಖಲಾಯಿತು. ಆದರೆ ಅದಾಗಿ ಕೆಲ ಕ್ಷಣದಲ್ಲೇ ಚೀನಾ ಕೂಡ ಗೋಲ್ ಬಾರಿಸಿ ಸಮಬಲ ಸಾಧಿಸಿತು.
Story first published: Friday, November 30, 2018, 23:22 [IST]
Other articles published on Nov 30, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications