For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಹಾಕಿಯಲ್ಲಿ ದೇಶಕ್ಕೆ ಕೀರ್ತಿ ತಂದ ಕೊಡಗಿನ ಕುವರ ಎಸ್‌ವಿ ಸುನಿಲ್

Nammura Pratibhe: Indian Hockey player S.V Sunil life story and his achivement

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಗೆ ಕೊಡಗಿನ ಕೊಡುಗೆ ಅಪಾರವಿದೆ. ಕೊಡಗಿನಿಂದ ಬಂದ ಅನೇಕ ಪ್ರತಿಭೆಗಳು ಹಾಕಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದು ನಾಡಿನ ಹಾಗೂ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಹಾಕಿ ಕೊಡಗಿನ ಸಂಸ್ಕೃತಿಯಲ್ಲಿ ಬೆರೆತುಕೊಂಡಿರುವ ಕ್ರೀಡೆಯಾಗಿದ್ದು ಇದೇ ಕಾರಣದಿಂದಾಗಿ ಅನೇಕ ಹಾಕಿ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಸಾಧನೆ ಮಾಡಿದ್ದಾರೆ.

ಅಂಥಾ ಆಟಗಾರರ ಪೈಕಿ ಇದೇ ಕೊಡಗಿನ ಹಾಕಿ ಆಟಗಾರ ಎಸ್‌ವಿ ಸುನಿಲ್ ಕೂಡ ಒಬ್ಬರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಸುಮಾರು ಒಂದೂವರೆ ದಶಕಗಳ ಕಾಲ ಪ್ರತಿನಿಧಿಸಿರುವ ಎಸ್‌ವಿ ಸುನಿಲ್ ಕಳೆದ ವರ್ಷ ತಮ್ಮ ಸುದೀರ್ಘ ಕಾಲದ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರಾದರೂ ನಿವೃತ್ತಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಇಂದಿನ ನಮ್ಮೂರ ಪ್ರತಿಭೆ ವಿಶೇಷ ಮಾಲಿಕೆಯಲ್ಲಿ ಕನ್ನಡಿಗ ಎಸ್‌ವಿ ಸುನಿಲ್ ಅವರ ಸಾಧನೆಯನ್ನು ಮೆಲುಕು ಹಾಕೋಣ.

ಬಡತನದಲ್ಲಿ ಅರಳಿದ ಪ್ರತಿಭೆ

ಬಡತನದಲ್ಲಿ ಅರಳಿದ ಪ್ರತಿಭೆ

1989 ಮೇ 6ರಂದು ವಿಠಲಾಚಾರ್ಯ ಹಾಗೂ ಶಾಂತಾ ದಂಪತಿಯ ಪುತ್ರನಾಗಿ ಕೊಡಗು ಜಿಲ್ಲೆಯಲ್ಲಿ ಜನಿಸಿದ ಸುನಿಲ್ ತಮ್ಮ ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ತಂದೆ ಬಡಗಿ ಕೆಲಸ ಮಾಡುತ್ತಿದ್ದರೆ ಸೋದರ ಅಕ್ಕಸಾಲಿಗ ವೃತ್ತಿಯನ್ನು ಮಾಡುತ್ತಿದ್ದರು. ಬಡತನದಲ್ಲೇ ಬೆಳೆದ ಸುನಿಲ್‌ಗೆ ತಮ್ಮ ಭಾಗದ ಸಂಸ್ಲೃತಿಯ ಭಾಗವಾಗಿರುವ ಹಾಕಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಬಿದಿರಿನ ಕೋಲನ್ನು ಹಾಕಿ ಸ್ಟಿಕ್ಕನ್ನಾಗಿ ಮಾಡಿಕೊಂಡು ಸುನಿಲ್ ತಮ್ಮ ಆರಂಭಿಕ ದಿನಗಳಲ್ಲಿ ಹಾಕಿ ಮೇಲಿನ ಒಲವನ್ನು ಬೆಳೆಸಿಕೊಂಡಿದ್ದರು. ಇದುವೇ ನಂತರ ಅವರನ್ನು ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯುವಂತಾಗಲು ಕಾರಣವಾಯಿತು.

ಅವಕಾಶಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗಿದ ಸುನಿಲ್

ಅವಕಾಶಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗಿದ ಸುನಿಲ್

ಹಾಕಿಯಲ್ಲಿ ಸುನಿಲ್ ಹೊಂದಿದ್ದ ಕೌಶಲ್ಯ ಅವರಿಗೆ ಹೆಚ್ಚಿನ ಅವಕಾಶವನ್ನು ಒದಗಿಸಿತ್ತು. 14 ವರ್ಷದವರಾಗಿದ್ದಾಗ ಬೆಂಗಳೂರಿನ ಬಾಯ್ಸ್ ಸ್ಪೋರ್ಟ್ಸ್ ಕಂಪನಿಯಲ್ಲಿ ತರಬೇತಿಗೆ ಆಯ್ಕೆಯಾದರು. ಮುಂದೆ 2005ರಲ್ಲಿಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸರ್ವೀಸ್ ಕಾರ್ಪ್ಸ್‌ಗೆ ಆಯ್ಕೆಯಾದರು. ಅಲ್ಲಿ ಅವರು ಇಂಟರ್-ಸರ್ವೀಸ್ ಲೀಗ್‌ನಲ್ಲಿ ಹಾಕಿ ಆಟಗಾರರಾಗಿ ಮಿಂಚಿದರು. ನಂತರ 2007 ರಲ್ಲಿ ಪ್ರೀಮಿಯರ್ ಹಾಕಿ ಲೀಗ್‌ ಆರಂಭವಾದಾಗ ಚೆನ್ನೈ ವೀರನ್ಸ್ ಪರವಾಗಿ ಆಡುವ ಅವಕಾಶ ಗಳಿಸಿಕೊಂಡರು. ಹೀಗೆ ಹಾಕಿ ಆಟಗಾರನಾಗಿ ವೃತ್ತಿ ಜೀವಕ್ಕೆ ಮತ್ತೊಂದು ದೊಡ್ಡ ತಿರುವು ದೊರೆಯಿತು. ನಂತರ ಸುನಿಲ್ ಎಲ್ಲೂ ಹಿಂದಿರುಗಿ ನೋಡಲೇ ಇಲ್ಲ.

2007ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ

2007ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ

ಪ್ರೀಮಿಯರ್ ಹಾಕಿ ಲೀಗ್‌ನಲ್ಲಿಯೂ ಮಿಂಚಲು ಆರಂಭಿಸಿದ್ದ ಎಸ್‌ವಿ ಸುನಿಲ್ ನಂತರ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿಲ್ಲ. 2007ರಲ್ಲಿ ಚೆನ್ನೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಸುನಿಲ್ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಮೊದಲ ಗೋಲು ಬಾರಿಸಿದ್ದ ಸುನಿಲ್ ಆ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಾಧನೆ ಮಾಡಿ ಮಿಂಚಿದ್ದರು.

14 ವರ್ಷಗಳ ವೃತ್ತಿ ಜೀವನದ ಸಾಧನೆ

14 ವರ್ಷಗಳ ವೃತ್ತಿ ಜೀವನದ ಸಾಧನೆ

ಹೀಗೆ ಭಾರತ ತಂಡದಲ್ಲಿ ಮಿಂಚಲು ಆರಂಭಿಸಿದ ಸುನಿಲ್ ನಂತರ ತಂಡದ ಅವಿಭಾಜ್ಯ ಅಂಗವಾದರು. ಅಂತಾರಾಷ್ಟ್ರೀಯ ಹಾಕಿಯಲ್ಲಿ ಒಟ್ಟು 264 ಪಂದ್ಯಗಳನ್ನು ಆಡಿರುವ ಸಾಧನೆ ಮಾಡಿರುವ ಸುನಿಲ್ ಹೆಸರಿನಲ್ಲಿ 72 ಗೋಲುಗಳಿದೆ. 2012, 2016ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 2021ರ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು. 2011ರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿನ್ನ, 2012ರ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಬೆಳ್ಳಿ ಗೆದ್ದ ತಂಡದ ಭಾಗವಾಗಿದ್ದರು. 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ, 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು, 2017ರ ಏಷ್ಯಾ ಕಪ್‌ನಲ್ಲಿ ಚಿನ್ನ, 2016 ಹಾಗೂ 2018ರ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು ಸುನಿಲ್. ಸುನಿಲ್ ಅವರ ಈ ಸಾಧನೆಗೆ 2017ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. 2021ರ ಅಕ್ಟೋಬರ್‌ನಲ್ಲಿ ಸುದೀರ್ಘ 14 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಸುನಿಲ್ ವಿದಾಯ ಘೋಷಿಸಿ ಮತ್ತೆ ನಿವೃತ್ತಿಯನ್ನು ಘೋಷಿಸಿದ್ದರು. ಆದರೆ ಮತ್ತೆ ನಿವೃತ್ತಿ ವಾಪಾಸ್ ಪಡೆದು ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ

Story first published: Wednesday, May 25, 2022, 16:33 [IST]
Other articles published on May 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+