
ಎಂ.ಪಿ ಗಣೇಶ್ ಹಿನ್ನೆಲೆ
ಎಂ.ಪಿ ಗಣೇಶ್ ಅವರು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ 1946ರಲ್ಲಿ ಜನಿಸಿದರು ಮತ್ತು ಈ ಜಿಲ್ಲೆಯು ಹಾಕಿ ಆಟಗಾರರನ್ನು ಹುಟ್ಟುಹಾಕುವ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಆದಾಗ್ಯೂ ಎಂ.ಪಿ ಗಣೇಶ್ ಆರಂಭದಲ್ಲಿ ಫುಟ್ಬಾಲ್ ಆಟಗಾರನಾಗಿ ಕ್ರೀಡಾ ಜೀವನ ಪ್ರಾರಂಭಿಸಿದ್ದರು. ಅವರು ಆಟದಲ್ಲಿ ಸಾಕಷ್ಟು ಪ್ರವೀಣರಾಗಿದ್ದರು ಮತ್ತು 1960ರಿಂದ 1964ರವರೆಗೆ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದರು.
ಆದಾಗ್ಯೂ, ಎಂ.ಪಿ ಗಣೇಶ್ ಭಾರತೀಯ ಸೇನೆಗೆ ಸೇರಿದ ನತರ ಅವರ ಜೀವನಕ್ಕೆ ತಿರುವು ಸಿಕ್ಕಿತು. ಅವರು ಸೈನ್ಯದಲ್ಲಿ ಹಾಕಿ ಆಡಲು ಪ್ರಾರಂಭಿಸಿದರು ಮತ್ತು ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸುತ್ತಿದ್ದರು. ಎಂ.ಪಿ ಗಣೇಶ್ ಅವರು ಶೀಘ್ರದಲ್ಲೇ ಭಾರತ ರಾಷ್ಟ್ರೀಯ ತಂಡಕ್ಕಾಗಿ ಆಡಲು ಆಯ್ಕೆಯಾದರು. 1970 ರಲ್ಲಿ ದೇಶಕ್ಕಾಗಿ ಪದಾರ್ಪಣೆ ಮಾಡಿದರು.
ನಮ್ಮೂರ ಪ್ರತಿಭೆ: ಭಾರತ ಕಬಡ್ಡಿ ತಂಡದ ನಾಯಕಿಯಾಗಿ ಮಿಂಚಿದ ತುಳುನಾಡ ಪ್ರತಿಭೆ ಮಮತಾ ಪೂಜಾರಿ

ಎಂ.ಪಿ ಗಣೇಶ್ ಮಹತ್ವದ ಹಾಕಿ ಸಾಧನೆಗಳು
ಎಂ.ಪಿ ಗಣೇಶ್ 1970 ಮತ್ತು 1974ರ ಅವಧಿಯಲ್ಲಿ ಕ್ರಮವಾಗಿ ಬ್ಯಾಂಕಾಕ್ ಮತ್ತು ಟೆಹ್ರಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು. ಅದು ಭಾರತೀಯ ಹಾಕಿಯ ವೈಭವದ ದಿನಗಳಾಗಿದ್ದವು.
1971ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಮೊಟ್ಟಮೊದಲ ವಿಶ್ವಕಪ್‌ನಲ್ಲಿ ಕಂಚು ಗೆದ್ದ ತಂಡದ ಭಾಗವಾಗಿದ್ದ ಎಂ.ಪಿ ಗಣೇಶ್ ಅವರು 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿ ಆಡಿದರು ಮತ್ತು 1973ರ ವಿಶ್ವಕಪ್‌ನಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸಿದರು. ಆಮ್ಸ್ಟರ್ಡ್ಯಾಮ್ ವಿರುದ್ಧ ನಿಕಟ ಹೋರಾಟದಲ್ಲಿ ಸೋತ ಭಾರತ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.
ಅವರ ಆಟದ ದಿನಗಳು ಮುಗಿದ ನಂತರ ಎಂ.ಪಿ ಗಣೇಶ್ ಯಶಸ್ವಿಯಾಗಿ ಭಾರತೀಯ ಹಾಕಿ ತಂಡಕ್ಕೆ ತರಬೇತಿ ನೀಡಿದರು. ಅವರು ಬರ್ಲಿನ್ ಒಲಿಂಪಿಕ್ಸ್, 1989 ಬರ್ಲಿನ್ ಚಾಂಪಿಯನ್ಸ್ ಟ್ರೋಫಿ ಮತ್ತು 1990ರ ಕರಾಚಿಯಲ್ಲಿ ನಡೆದ ವಿಶ್ವಕಪ್ ಸಮಯದಲ್ಲಿ ಭಾರತೀಯ ಹಾಕಿ ತಂಡದ ಕೋಚ್ ಆಗಿದ್ದರು.
ನಮ್ಮೂರ ಪ್ರತಿಭೆ: 1984ರಲ್ಲೇ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಕರ್ನಾಟಕದ ಕ್ರೀಡಾಪಟು ವಂದನಾ ರಾವ್

ಕ್ರೀಡಾ ನಿರ್ವಾಹಕರಾಗಿ ಎಂ.ಪಿ ಗಣೇಶ್ ವೃತ್ತಿಜೀವನ
ಎಂ.ಪಿ ಗಣೇಶ್ ಕರ್ನಾಟಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದಾಗ ಕ್ರೀಡಾ ಆಡಳಿತದಲ್ಲಿ ಅವರ ಅವಧಿ ಪ್ರಾರಂಭವಾಯಿತು. ಅವರು ಹಂತಹಂತವಾಗಿ ಕ್ರೀಡಾ ಆಡಳಿತದಲ್ಲಿ ಏರಿಕೆ ಕಂಡರು ಮತ್ತು ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕರು, SAI (ದಕ್ಷಿಣ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. SAI ನಿಂದ ನಿವೃತ್ತರಾದ ನಂತರ, ಎಂ.ಪಿ ಗಣೇಶ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ ನಿಯೋಜನೆಯನ್ನು ವಹಿಸಿಕೊಂಡರು.
ಎಂ.ಪಿ ಗಣೇಶ್ ಅವರು ಕರ್ನಾಟಕದಿಂದ ಹೊರಹೊಮ್ಮಿದ ದೊಡ್ಡ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ಪ್ರತಿಭಾವಂತ ಕ್ರೀಡಾಪಟುವಾಗಿರಲಿಲ್ಲ, ಅವರ ಆಡಳಿತದ ಕುಶಾಗ್ರಮತಿಯು ಭಾರತೀಯ ಕ್ರೀಡೆಗಳಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದೆ.


Click it and Unblock the Notifications
