ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮೂರ ಪ್ರತಿಭೆ: 1984ರಲ್ಲೇ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಕರ್ನಾಟಕದ ಕ್ರೀಡಾಪಟು ವಂದನಾ ರಾವ್

Nammura Pratibhe: Karnatakas sprinter Vandana Raos introduction and achievements short details

1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸದ್ದು ಮಾಡಿತ್ತು. ಇದಾದ ನಂತರದ ವರ್ಷದಲ್ಲಿಯೇ ಲಾಸ್ ಏಂಜಲ್ಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ವನಿತೆಯರು 4 x 400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಫೈನಲ್ ತಲುಪಿ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದರು.

ಈ ಬಾರಿಯ ಟಿ20 ವಿಶ್ವಕಪ್ ಮುಕ್ತಾಯವಾದ ನಂತರ ನಿವೃತ್ತಿ ಹೊಂದಲಿದ್ದಾರೆ ಈ 6 ಸ್ಟಾರ್ ಕ್ರಿಕೆಟಿಗರು!ಈ ಬಾರಿಯ ಟಿ20 ವಿಶ್ವಕಪ್ ಮುಕ್ತಾಯವಾದ ನಂತರ ನಿವೃತ್ತಿ ಹೊಂದಲಿದ್ದಾರೆ ಈ 6 ಸ್ಟಾರ್ ಕ್ರಿಕೆಟಿಗರು!

ಈ ಸ್ಪರ್ಧೆಯಲ್ಲಿ ಖ್ಯಾತ ಕ್ರೀಡಾಪಟು ಪಿಟಿ ಉಷಾ, ಶೈನಿ ಅಬ್ರಹಾಮ್ ವಿಲ್ಸನ್, ಎಂ ಡಿ ವಲ್ಸಮ್ಮ ಮತ್ತು ಕರ್ನಾಟಕದ ವಂದನಾ ರಾವ್ ಭಾಗಿಯಾಗಿದ್ದರು. ಈ ನಾಲ್ವರ ತಂಡ 1984ರ ಲಾಸ್ ಏಂಜಲ್ಸ್ ಒಲಿಂಪಿಕ್ಸ್ ಕ್ರೀಡಾಕೂಟದ ರಿಲೇ ವಿಭಾಗದಲ್ಲಿ ಫೈನಲ್ ತಲುಪುವುದರ ಮೂಲಕ ಅದೇ ಮೊಟ್ಟಮೊದಲ ಬಾರಿಗೆ ದಿನಪತ್ರಿಕೆಗಳ ಪ್ರಮುಖ ಪುಟದಲ್ಲಿ ಮಹಿಳಾ ಕ್ರೀಡಾಪಟುಗಳ ಬಗ್ಗೆ ಸುದ್ದಿ ಪ್ರಕಟವಾಗುವ ಹಾಗೆ ಮಾಡಿದ್ದರು. ಹೀಗೆ ಅತ್ಯುನ್ನತ ಮೈಲಿಗಲ್ಲನ್ನು ತಲುಪಿದ ಈ ತಂಡ ಫೈನಲ್ ಸುತ್ತಿನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾಗಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಕ್ರೀಡಾಕೂಟದಿಂದ ಹೊರ ನಡೆದಿತ್ತು. 1988ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕೂಡ ಭಾಗವಹಿಸಿದ್ದ ವಂದನಾ ರಾವ್ 7ನೇ ಸ್ಥಾನವನ್ನು ಪಡೆದುಕೊಂಡಿದ್ದರು. ವಂದನಾ ರಾವ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯನ್ನು ಕೂಡಾ ಮಾಡಿದ್ದಾರೆ.

ವಂದನಾ ರಾವ್ ಕಿರುಪರಿಚಯ

ವಂದನಾ ರಾವ್ ಕಿರುಪರಿಚಯ

ಕರ್ನಾಟಕದ ವಂದನಾ ರಾವ್ 1963ರಲ್ಲಿ ಜನಿಸಿದ್ದರು ಹಾಗೂ ಬ್ರಾಹ್ಮಣ ಕುಟುಂಬದವರಾಗಿದ್ದು, ತನ್ನ ಶಾಲಾ ದಿನಗಳಲ್ಲಿ ಕ್ರೀಡೆಯ ಕಡೆ ಹೆಚ್ಚಿನ ಗಮನವನ್ನು ಹರಿಸಿದ್ದರು. ತನ್ನ ಎಂಟನೇ ತರಗತಿಯ ದೈಹಿಕ ಶಿಕ್ಷಣ ತರಗತಿಯ ವೇಳೆ ಓಟದಲ್ಲಿ ಭಾಗವಹಿಸುವ ಮೂಲಕ ಆಸಕ್ತಿಯನ್ನು ತೋರಿದ ವಂದನಾ ರಾವ್ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ದಾಖಲೆಯನ್ನು ಮುರಿದು ಹಾಕಿದ್ದರು. ಅಂದು ಶಾಲಾ ದಿನಗಳಲ್ಲಿ ಶುರುವಾದ ವಂದನಾ ರಾವ್ ಅವರ ಓಟ ಅಂತರರಾಷ್ಟ್ರೀಯ ಮಟ್ಟದವರೆಗೆ ತಲುಪಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಹಾಕಿ ಒಲಿಂಪಿಕ್ ಕ್ರೀಡಾಪಟು ಜೋಕ್ವಿಮ್ ಕರ್ವಾಲೋ ಅವರನ್ನು ವಿವಾಹವಾಗಿರುವ ವಂದನಾ ರಾವ್ ಸದ್ಯ ಮುಂಬೈ ನಗರದಲ್ಲಿ ಸರಳ ಜೀವನವನ್ನು ಸಾಗಿಸುತ್ತಿದ್ದಾರೆ.

ವಂದನಾ ರಾವ್ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಕೂಟಗಳು

ವಂದನಾ ರಾವ್ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಕೂಟಗಳು

1982 ಏಷ್ಯನ್ ಗೇಮ್ಸ್

1984 ಬೇಸಿಗೆ ಒಲಿಂಪಿಕ್ಸ್

1985 ಏಷ್ಯನ್ ಟ್ರ್ಯಾಕ್ ಎನ್ ಫೀಲ್ಡ್

1985 IAAF ವಿಶ್ವಕಪ್

1986 ಫೋರ್ ನೇಷನ್ಸ್ ಮತ್ತು ಏಷ್ಯನ್ ಗೇಮ್ಸ್

1987 ಏಷ್ಯನ್ ಟ್ರ್ಯಾಕ್ ಎನ್ ಫೀಲ್ಡ್ ಮತ್ತು ವಿಶ್ವ ಚಾಂಪಿಯನ್‌ಶಿಪ್

1988 ಸಮ್ಮರ್ ಒಲಿಂಪಿಕ್ಸ್

ವಂದನಾ ರಾವ್‌ಗೆ ಸಂದಿತ್ತು ಅರ್ಜುನ ಪ್ರಶಸ್ತಿ ಗೌರವ

ವಂದನಾ ರಾವ್‌ಗೆ ಸಂದಿತ್ತು ಅರ್ಜುನ ಪ್ರಶಸ್ತಿ ಗೌರವ

ವಂದನಾ ರಾವ್ ಅವರ ಸಾಧನೆಗೆ 1984ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು ಹಾಗೂ 1987ರಲ್ಲಿ ವಂದನಾ ರಾವ್ ಅವರಿಗೆ ಅರ್ಜುನ ಪ್ರಶಸ್ತಿ ಕೂಡಾ ದೊರಕಿತ್ತು.

Story first published: Saturday, July 16, 2022, 23:03 [IST]
Other articles published on Jul 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X