ಟೋಕಿಯೋ ಒಲಿಂಪಿಕ್ಸ್: ಭಾರತೀಯ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ ರಾಣಿ ರಾಂಪಾಲ್

ನವದೆಹಲಿ, ಜೂನ್ 22: ಟೋಕಿಯೋ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿದ್ದು ಇನ್ನು ಸರಿಯಾಗಿ ಒಂದು ತಿಂಗಳಷ್ಟೇ ಬಾಕಿಯಿದೆ. ಎಲ್ಲಾ ಕ್ರೀಡಾಪಟುಗಳು ತಮ್ಮ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ನಾಯಕಿಯನ್ನು ಹೆಸರಿಸಲಾಗಿದೆ.
ಭಾರತೀಯ ಹಾಕಿ ತಂಡದ ಸ್ಟ್ರೈಕರ್ ರಾಣಿ ರಾಂಪಾಲ್ ಅವರನ್ನು ನಾಯಕಿಯಾಗಿ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಇಬ್ಬರನ್ನು ಉಪನಾಯಕಿಯರನ್ನಾಗಿ ಹೆಸರಿಸಿದ್ದು ದೀಪ್ ಗ್ರೇಸ್ ಎಕ್ಕಾ ಹಾಗೂ ಸವಿತಾ ಅವರು ಆಯ್ಕೆಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23 ರಿಂದ ಆರಂಭವಾಗಿ ಆಗಸ್ಟ್ 8ರ ವರೆಗೆ ನಡೆಯಲಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ 16 ಆಟಗಾರ್ತಿಯರ ಭಾರತೀಯ ಮಹಿಳಾ ಹಾಕಿ ತಂಡವನ್ನು ಕಳೆದವಾರವೇ ಘೋಷನೆ ಮಾಡಲಾಗಿತ್ತು. ಆದರೆ ನಾಯಕಿ ಹಾಗೂ ಉಪನಾಯಕಿಯನ್ನು ಹೆಸರಿಸಲಾಗಿರಲಿಲ್ಲ. ಹಾಗಿದ್ದರೂ ರಾಣಿ ರಾಂಪಾಲ್ ಅವರೇ ನಾಯಕಿಯಾಗುವ ನಿರೀಕ್ಷೆ ಹೆಚ್ಚಾಗಿತ್ತು. ಈಗ ಅದು ನಿಜವಾಗಿದೆ.
ಈ ಬಗ್ಗೆ ರಾಣಿ ರಾಂಪಾಲ್ ಪ್ರತಿಕ್ರಿಯೆ ನೀಡಿದ್ದು ಒಲಿಂಪಿಕ್ಸ್‌ನಂತಾ ವೇದಿಕೆಯನ್ನು ತಂಡವನ್ನು ಮುನ್ನಡೆಸಲು ಸಿಕ್ಕ ಅವಕಾಶಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮುನ್ನಡೆಸಲು ಅವಕಾಶ ದೊರೆತಿರುವುದು ದೊಡ್ಡ ಗೌರವವಾಗಿದೆ. ತಂಡದ ಅನುಭವಿ ಸಹ ಆಟಗಾರ್ತಿಯರೊಂದಿಗೆ ಈ ಹಿಂದೆ ತಂಡವನ್ನು ಮುನ್ನಡೆಸಿದ ಅನುಭವವಿದ್ದು ಇದು ಜವಾಬ್ಧಾರಿಯನ್ನು ಸುಲಭಗೊಳಿಸಲಿದೆ" ಎಂದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ರಾಣಿ ನಾಯಕತ್ವದಲ್ಲಿ ಮಹಿಳಾ ಹಾಕಿ ತಂಡ ಕೆಲ ಮಹತ್ವದ ಸಾಧನೆ ಮಾಡಿದೆ. ಇದರಲ್ಲಿ 217ರ ಏಷ್ಯಾಕಪ್ ಗೆಲುವು ಪ್ರಮುಖವಾಗಿದ್ದು 2018ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ ಅದೇ ವರ್ಷ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದೆ. 2018ರಲ್ಲಿ ಲಂಡನ್‌ನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ರಾಣಿ ನೇತೃತ್ವದಲ್ಲಿ ಭಾರತೀಯ ಮಹಿಳಾ ತಂಡ ಕ್ವಾರ್ಟರ್‌ಫೈನಲ್ ಹಂತಕ್ಕೇರಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications