
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಹೀಗೆ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋತಿದ್ದ ಬೆಂಗಳೂರು ಬುಲ್ಸ್ ತೃತೀಯ ದಿನದಂದು ನಡೆದ ತಮಿಳ್ ತಲೈವಾಸ್ ವಿರುದ್ಧದ ಸೆಣಸಾಟದಲ್ಲಿ ಜಯ ಸಾಧಿಸುವುದರ ಮೂಲಕ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಮೊದಲ 3 ದಿನಗಳಲ್ಲಿ 9 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಡಿಸೆಂಬರ್ 25 ) ಒಟ್ಟು 3 ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾ, ದ್ವಿತೀಯ ಪಂದ್ಯದಲ್ಲಿ ಪುನೇರಿ ಪಲ್ಟಾನ್ ಮತ್ತು ತೆಲುಗು ಟೈಟಾನ್ಸ್ ಹಾಗೂ ತೃತೀಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 3 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ಪಾಟ್ನಾ ಪೈರೇಟ್ಸ್ vs ಯುಪಿ ಯೋಧಾ
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇದುವರೆಗೂ ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾ ತಲಾ ಒಂದೊಂದು ಪಂದ್ಯದಲ್ಲಿ ಕಣಕ್ಕಿಳಿದಿವೆ. ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಗೆಲುವು ಸಾಧಿಸಿದ್ದರೆ, ಯುಪಿ ಯೋಧಾ ತಾನಾಡಿದ ಚೊಚ್ಚಲ ಪಂದ್ಯದಲ್ಲಿ ಸೋಲು ಕಂಡಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು ಇದು ಈ ಆವೃತ್ತಿಯ 10ನೇ ಪಂದ್ಯವಾಗಿದೆ. ಇನ್ನು ಇತ್ತಂಡಗಳ ನಡುವಿನ ಮುಖಾಮುಖಿಯ ಫಲಿತಾಂಶಕ್ಕೆ ಬಂದರೆ ಎರಡೂ ತಂಡಗಳು ಸಹ ಸಮಬಲವನ್ನು ಸಾಧಿಸುವುದರ ಮೂಲಕ ರೋಚಕ ಹಣಾಹಣಿಗಳಿಗೆ ಸಾಕ್ಷಿಯಾಗಿವೆ. ಹೌದು, ಪಾಟ್ನಾ ಪೈರೇಟ್ಸ್ ಮತ್ತು ಯುಪಿ ಯೋಧಾ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಪಾಟ್ನಾ ಪೈರೇಟ್ಸ್ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಯುಪಿ ಯೋಧಾ ಕೂಡ 3 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಮುಖಾಮುಖಿಯಲ್ಲಿ ಎರಡೂ ತಂಡಗಳು ಕೂಡ ಸಮಬಲವನ್ನು ಸಾಧಿಸಿವೆ.
ಪಾಟ್ನಾ ಪೈರೇಟ್ಸ್ ಸಂಭಾವ್ಯ ತಂಡ
ಮೋನು ಗೋಯತ್ (ರೈಡರ್) ಪ್ರಶಾಂತ್ ಕುಮಾರ್ ರೈ (ರೈಡರ್) ಸಚಿನ್ ತನ್ವರ್ (ರೈಡರ್) ಸಜಿನ್ ಚಂದ್ರಶೇಖರ್ (ಎಡ ಮುಖಪುಟ) ನೀರಜ್ ಕುಮಾರ್ (ಬಲ ಮುಖಪುಟ) ಮೊಹಮ್ಮದ್ರೇಜಾ ಶಾದ್ಲೂಯಿ (ಎಡ ಮೂಲೆ) ಶುಭಂ ಶಿಂಧೆ (ಬಲ ಮೂಲೆ)
ಯುಪಿ ಯೋಧಾ ಸಂಭಾವ್ಯ ತಂಡ
ಪರ್ದೀಪ್ ನರ್ವಾಲ್ (ರೈಡರ್) ಶ್ರೀಕಾಂತ್ ಜಾಧವ್ (ರೈಡರ್) ಸುರೇಂದರ್ ಗಿಲ್ (ರೈಡರ್) ಶುಭಂ ಕುಮಾರ್ ಬಲಿಯಾನ್ (ಎಡ ಕವರ್) ಅಶು ಸಿಂಗ್ (ಬಲ ಮುಖಪುಟ) ಸುಮಿತ್ ಸಾಂಗ್ವಾನ್ (ಎಡ ಮೂಲೆ) ನಿತೇಶ್ ಕುಮಾರ್ (ಬಲ ಮೂಲೆ)
ಪಂದ್ಯ 2: ಪುಣೇರಿ ಪಲ್ಟಾನ್ vs ತೆಲುಗು ಟೈಟಾನ್ಸ್
ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಪುಣೇರಿ ಪಲ್ಟಾನ್ಸ್ ಮತ್ತು ತೆಲುಗು ಟೈಟಾನ್ಸ್ ಈ ಎರಡೂ ತಂಡಗಳು ಕೂಡ ಆಡಿದ ಚೊಚ್ಚಲ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಂಡಿಲ್ಲ. ಪುಣೇರಿ ಪಲ್ಟಾನ್ ತನ್ನ ಚೊಚ್ಚಲ ಪಂದ್ಯದಲ್ಲಿ ಸೋಲನ್ನು ಕಂಡಿದ್ದರೆ, ತೆಲುಗು ಟೈಟಾನ್ಸ್ ತಾನಾಡಿದ ಚೊಚ್ಚಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧದ ಡ್ರಾ ಮಾಡಿಕೊಂಡಿತ್ತು. ಇನ್ನು ಈ ಎರಡೂ ತಂಡಗಳ ನಡುವಿನ ಪಂದ್ಯ ಇಂದು ರಾತ್ರಿ 8.30ಕ್ಕೆ ನಡೆಯಲಿದ್ದು, ಇದು ಈ ಆವೃತ್ತಿಯ 11ನೇ ಪಂದ್ಯವಾಗಿದೆ. ಇನ್ನು ಇತ್ತಂಡಗಳ ನಡುವಿನ ಪರಸ್ಪರ ಮುಖಾಮುಖಿ ಪಂದ್ಯಗಳ ಫಲಿತಾಂಶದ ಅಂಕಿ ಅಂಶವನ್ನು ಗಮನಿಸಿದರೆ ಎರಡೂ ತಂಡಗಳು ಕೂಡ ಬಹುತೇಕ ಸಮಬಲವನ್ನು ಸಾಧಿಸಿವೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 14 ಬಾರಿ ಪಂದ್ಯಗಳು ನಡೆದಿದ್ದು ಪುಣೇರಿ ಪಲ್ಟಾನ್ 7 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ತೆಲುಗು ಟೈಟಾನ್ಸ್ 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಪುಣೇರಿ ಪಲ್ಟಾನ್ ಸಂಭಾವ್ಯ ತಂಡ: ನಿತಿನ್ ತೋಮರ್ (ರೈಡರ್) ರಾಹುಲ್ ಚೌಧರಿ (ರೈಡರ್) ಪಂಕಜ್ ಮೋಹಿತೆ (ರೈಡರ್) ಸಂಕೇತ್ ಸಾವಂತ್ (ಎಡ ಮುಖಪುಟ) ಬಾಳಾಸಾಹೇಬ್ ಜಾಧವ್ (ಬಲ ಮುಖಪುಟ) ವಿಶಾಲ್ ಭಾರದ್ವಾಜ್ (ಎಡ ಮೂಲೆ) ಬಲದೇವ್ ಸಿಂಗ್ (ಬಲ ಮೂಲೆ)
ತೆಲುಗು ಟೈಟಾನ್ಸ್ ಸಂಭಾವ್ಯ ತಂಡ: ಸಿದ್ಧಾರ್ಥ್ ದೇಸಾಯಿ (ರೈಡರ್) ರಜನೀಶ್ ದಲಾಲ್ (ರೈಡರ್) ರಾಕೇಶ್ ಗೌಡ (ರೈಡರ್) ಸಿ ಅರುಣ್ (ಎಡ ಮುಖಪುಟ) ಸುರೀಂದರ್ ಸಿಂಗ್ (ಬಲ ಮುಖಪುಟ) ಸಂದೀಪ್ ಕಾಂಡೋಲ (ಎಡ ಮೂಲೆ) ರುತುರಾಜ್ ಕೊರವಿ (ಬಲ ಮೂಲೆ)
ಪಂದ್ಯ 3: ಜೈಪುರ ಪಿಂಕ್ ಪ್ಯಾಂಥರ್ಸ್ vs ಹರಿಯಾಣ ಸ್ಟೀಲರ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಇದುವರೆಗೂ ತಲಾ ಒಂದೊಂದು ಪಂದ್ಯಗಳನ್ನು ಆಡಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಸೋಲುಂಡಿವೆ. ಹೌದು, ಈ ಎರಡೂ ತಂಡಗಳು ಕೂಡ ತಮ್ಮ ಚೊಚ್ಚಲ ಪ್ರತ್ಯೇಕ ಪಂದ್ಯಗಳಲ್ಲಿ ಸೋತಿದ್ದು ಟೂರ್ನಿಯ ತಮ್ಮ ದ್ವಿತೀಯ ಪಂದ್ಯದಲ್ಲಿ ಜಯಗಳಿಸಿ ಗೆಲುವಿನ ಖಾತೆ ತೆರೆಯಲು ಎರಡೂ ತಂಡಗಳು ಕೂಡ ಯೋಜನೆ ಹಾಕಿಕೊಳ್ಳುತ್ತಿವೆ. ಹಾಗೂ ಇತ್ತಂಡಗಳ ನಡುವಿನ ಈ ಪಂದ್ಯ ಇಂದು ರಾತ್ರಿ 9.30ಕ್ಕೆ ಆರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವಿನ ಪ್ರೊ ಕಬಡ್ಡಿ ಲೀಗ್ ಇತಿಹಾಸದ ಮುಖಾಮುಖಿ ಫಲಿತಾಂಶವನ್ನು ಗಮನಿಸಿದರೆ ಹರಿಯಾಣ ಸ್ಟೀಲರ್ಸ್ ಮೇಲೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಮೇಲುಗೈ ಸಾಧಿಸಿದೆ. ಹೌದು, ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 6 ಪಂದ್ಯಗಳು ನಡೆದಿದ್ದು, ಈ ಪಂದ್ಯಗಳ ಪೈಕಿ ಜೈಪುರ ಪಿಂಕ್ ಪ್ಯಾಂಥರ್ಸ್ 3 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಹರಿಯಾಣ ಸ್ಟೀಲರ್ಸ್ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದಿದೆ ಹಾಗೂ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ಸಂಭಾವ್ಯ ತಂಡ: ದೀಪಕ್ ನಿವಾಸ್ ಹೂಡಾ (ನಾಯಕ) (ಆಲ್ ರೌಂಡರ್) ಅರ್ಜುನ್ ದೇಶ್ವಾಲ್ (ರೈಡರ್) ಅಮಿತ್ ನಗರ್ (ರೈಡರ್) ಅಮಿತ್ ಹೂಡಾ (ಡಿಫೆಂಡರ್) ಸಂದೀಪ್ ಧುಲ್ (ಡಿಫೆಂಡರ್) ನಿತಿನ್ ರಾವಲ್ (ಆಲ್ ರೌಂಡರ್) ಅಮಿತ್ (ಡಿಫೆಂಡರ್)
ಹರಿಯಾಣ ಸ್ಟೀಲರ್ಸ್ ತಂಡ: ದೀಪಕ್ ನಿವಾಸ್ ಹೂಡಾ (ನಾಯಕ) (ಆಲ್ ರೌಂಡರ್) ಅರ್ಜುನ್ ದೇಶ್ವಾಲ್ (ರೈಡರ್) ಅಮಿತ್ ನಗರ್ (ರೈಡರ್) ಅಮಿತ್ ಹೂಡಾ (ಡಿಫೆಂಡರ್) ಸಂದೀಪ್ ಧುಲ್ (ಡಿಫೆಂಡರ್) ನಿತಿನ್ ರಾವಲ್ (ಆಲ್ ರೌಂಡರ್) ಅಮಿತ್ (ಡಿಫೆಂಡರ್)
ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.