For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಡಿಸೆಂಬರ್ 28ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 2021, December 28: All matches preview, Predicted 7, Head to head details and live streaming

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಡಿಸೆಂಬರ್ 27ರ ಸೋಮವಾರದವರೆಗೂ ಒಟ್ಟು 16 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ತಲಾ ಎರೆಡೆರಡು ಪಂದ್ಯಗಳನ್ನು ಗೆದ್ದಿರುವ ಬೆಂಗಾಲ್ ವಾರಿಯರ್ಸ್ ದ್ವಿತೀಯ ಸ್ಥಾನ , ಜೈಪುರ್ ಪಿಂಕ್ ಪ್ಯಾಂಥರ್ಸ್ ತೃತೀಯ ಸ್ಥಾನ ಮತ್ತು ಬೆಂಗಳೂರು ಬುಲ್ಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 16 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಡಿಸೆಂಬರ್ 28 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪಂದ್ಯ 1: ಪುಣೇರಿ ಪಲ್ಟಾನ್ vs ಪಾಟ್ನಾ ಪೈರೇಟ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋತಿವೆ. ಹೀಗೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಈ ಎರಡೂ ತಂಡಗಳು ಈ ಬಾರಿಯ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಈ ಬಾರಿಯ ಆವೃತ್ತಿಯ 17ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ನಡೆಯಲಿದೆ. ಇನ್ನು ಪುಣೇರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳ ನಡುವಿನ ಪ್ರೊ ಕಬಡ್ಡಿ ಲೀಗ್ ಇತಿಹಾಸದ ಮುಖಾಮುಖಿಯ ಅಂಕಿಅಂಶಗಳ ವಿಚಾರಕ್ಕೆ ಬಂದರೆ ಪುಣೇರಿ ಪಲ್ಟಾನ್ ವಿರುದ್ಧ ಪಾಟ್ನಾ ಪೈರೇಟ್ಸ್ ಸ್ಪಷ್ಟ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 15 ಪಂದ್ಯಗಳು ನಡೆದಿದ್ದು, ಪಾಟ್ನಾ ಪೈರೇಟ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ ಪುಣೇರಿ ಪಲ್ಟಾನ್ ಕೇವಲ 2 ಪಂದ್ಯಗಳಲ್ಲಿ ಜಯ ಗಳಿಸಿದೆ ಮತ್ತು ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಪುಣೇರಿ ಪಲ್ಟಾನ್ ಸಂಭಾವ್ಯ ತಂಡ: ನಿತಿನ್ ತೋಮರ್ (ರೈಡರ್) ಅಸ್ಲಾಂ ಇನಾಮದಾರ್ (ರೈಡರ್) ಮೋಹಿತ್ ಗೋಯತ್ (ರೈಡರ್) ಸಂಕೇತ್ ಸಾವಂತ್ (ಎಡ ಕವರ್) ಅಭಿನೇಶ್ ನಡರಾಜನ್ (ಬಲ ಮುಖಪುಟ) ವಿಶಾಲ್ ಭಾರದ್ವಾಜ್ (ಎಡ ಮೂಲೆ) ಬಲದೇವ್ ಸಿಂಗ್ (ಬಲ ಮೂಲೆ)

ಪಾಟ್ನಾ ಪೈರೇಟ್ಸ್ ಸಂಭಾವ್ಯ ತಂಡ: ಮೋನು ಗೋಯತ್ (ರೈಡರ್) ಪ್ರಶಾಂತ್ ಕುಮಾರ್ ರೈ (ರೈಡರ್) ಸಚಿನ್ ತನ್ವರ್ (ರೈಡರ್) ಸಜಿನ್ ಚಂದ್ರಶೇಖರ್ (ಎಡ ಕವರ್) ನೀರಜ್ ಕುಮಾರ್ (ಬಲ ಮುಖಪುಟ) ಮೊಹಮ್ಮದ್ರೇಜಾ ಶಾದ್ಲೂಯಿ (ಎಡ ಮೂಲೆ) ಶುಭಂ ಶಿಂಧೆ (ಬಲ ಮೂಲೆ)

ಪಂದ್ಯ 2: ತೆಲುಗು ಟೈಟಾನ್ಸ್ vs ಹರಿಯಾಣ ಸ್ಟೀಲರ್ಸ್

ಇನ್ನು ಇಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಲಿದ್ದು ಸದ್ಯ ಅಂಕಪಟ್ಟಿಯಲ್ಲಿ ಈ ಎರಡೂ ತಂಡಗಳು ಅಂತಿಮ 2 ಸ್ಥಾನಗಳನ್ನು ಪಡೆದುಕೊಂಡಿವೆ. ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿ 1 ಪಂದ್ಯದಲ್ಲಿ ಸೋತು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿರುವ ತೆಲುಗು ಟೈಟಾನ್ಸ್ 11ನೇ ಸ್ಥಾನದಲ್ಲಿದ್ದರೆ, ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿ ಎರಡೂ ಪಂದ್ಯಗಳಲ್ಲಿಯೂ ಸೋಲುಂಡಿರುವ ಹರಿಯಾಣ ಸ್ಟೀಲರ್ಸ್ 12ನೇ ಸ್ಥಾನದಲ್ಲಿದೆ. ಹೀಗಾಗಿ ಇತ್ತಂಡಗಳ ನಡುವೆ ನಡೆಯಲಿರುವ ಈ ಕದನದಲ್ಲಿ ಎರಡೂ ತಂಡಗಳಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಹೆಚ್ಚಿದೆ. ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 18ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ. ಇನ್ನು ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಇದುವರೆಗೂ ಒಟ್ಟು 5 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ತೆಲುಗು ಟೈಟಾನ್ಸ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಹರಿಯಾಣ ಸ್ಟೀಲರ್ಸ್ 2 ಪಂದ್ಯದಲ್ಲಿ ಗೆಲುವು ಪಡೆದುಕೊಂಡಿದೆ.

ತೆಲುಗು ಟೈಟಾನ್ಸ್ ಸಂಭಾವ್ಯ ತಂಡ: ಸಿದ್ಧಾರ್ಥ್ ದೇಸಾಯಿ (ರೈಡರ್) ರೋಹಿತ್ ಕುಮಾರ್ (ರೈಡರ್) ರಜನೀಶ್ ದಲಾಲ್ (ರೈಡರ್) ಸಿ ಅರುಣ್ (ಎಡ ಕವರ್) ಸುರೀಂದರ್ ಸಿಂಗ್ (ರೈಟ್ ಕವರ್) ಸಂದೀಪ್ ಕಾಂಡೋಲಾ (ಎಡ ಮೂಲೆ) ರುತುರಾಜ್ ಕೊರವಿ (ಬಲ ಮೂಲೆ)

ಹರಿಯಾಣ ಸ್ಟೀಲರ್ಸ್ ಸಂಭಾವ್ಯ ತಂಡ: ವಿಕಾಶ್ ಕಾಂಡೋಲಾ (ರೈಡರ್) ಮೀಟು ಶರ್ಮಾ (ರೈಡರ್) ರೋಹಿತ್ ಗುಲಿಯಾ (ಆಲ್ ರೌಂಡರ್) ಜೈದೀಪ್ ದಹಿಯಾ (ಎಡ ಕವರ್) ರವಿ ಕುಮಾರ್ (ರೈಟ್ ಕವರ್) ಸುರೇಂದರ್ ನಾಡಾ (ಎಡ ಮೂಲೆ)

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Tuesday, December 28, 2021, 20:10 [IST]
Other articles published on Dec 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+