For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಜನವರಿ 3ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 2021, January 3: All matches preview, Predicted 7, Head to head details and live streaming

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 2ರ ಭಾನುವಾರದವರೆಗೂ ಒಟ್ಟು 29 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಯು ಮುಂಬಾ ತೃತೀಯ ಸ್ಥಾನದಲ್ಲಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 29 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 3 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪಂದ್ಯ 1: ಬೆಂಗಾಲ್ ವಾರಿಯರ್ಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಹೇಳಿಕೊಳ್ಳುವಂತಹ ಅತ್ಯುತ್ತಮ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿವೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ 2 ಪಂದ್ಯಗಳಲ್ಲಿ ಗೆದ್ದು ಮತ್ತೆರಡು ಪಂದ್ಯಗಳಲ್ಲಿ ಸೋಲುವುದರ ಮೂಲಕ 11 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಿರುವ ಬೆಂಗಾಲ್ ವಾರಿಯರ್ಸ್ 2 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋಲುವುದರ ಮೂಲಕ 11 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಸದ್ಯ ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗೆ ಅಂಕಪಟ್ಟಿಯಲ್ಲಿ ಕಳಪೆ ಸ್ಥಾನವನ್ನು ಹೊಂದಿರುವ ಈ ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಇನ್ನು ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವೆ ಇಂದು ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 30ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಇತ್ತಂಡಗಳ ನಡುವೆ ಇದುವರೆಗೂ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ನಡೆದಿರುವ ಮುಖಾಮುಖಿ ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಒಟ್ಟು 12 ಪಂದ್ಯಗಳು ನಡೆದಿದ್ದು ಬೆಂಗಾಲ್ ವಾರಿಯರ್ಸ್ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 4 ಪಂದ್ಯಗಳಲ್ಲಿ ಗೆದ್ದಿದೆ.

ಬೆಂಗಾಲ್ ವಾರಿಯರ್ಸ್ ಸಂಭಾವ್ಯ ತಂಡ: ಮಣಿಂದರ್ ಸಿಂಗ್ (ನಾಯಕ) (ರೈಡರ್) ಸುಕೇಶ್ ಹೆಗ್ಡೆ (ರೈಡರ್) ಮೊಹಮ್ಮದ್ ನಬಿಬಕ್ಷ್ (ಆಲ್ ರೌಂಡರ್) ವಿಜಿನ್ ತಂಗದುರೈ (ಎಡ ಕವರ್) ದರ್ಶನ್ ಜೆ (ಬಲ ಕವರ್) ರಿಂಕು ನರ್ವಾಲ್ (ಎಡ ಮೂಲೆ) ಅಬೋಜರ್ ಮಿಘಾನಿ (ಬಲ ಮೂಲೆ)

ಜೈಪುರ್ ಪಿಂಕ್ ಪ್ಯಾಂಥರ್ಸ್ ಸಂಭಾವ್ಯ ತಂಡ: ದೀಪಕ್ ನಿವಾಸ್ ಹೂಡಾ (ನಾಯಕ) (ಆಲ್ ರೌಂಡರ್) ಅರ್ಜುನ್ ದೇಶ್ವಾಲ್ (ರೈಡರ್) ಅಮಿತ್ ನಗರ್ (ರೈಡರ್) ಅಮಿತ್ ಹೂಡಾ (ಡಿಫೆಂಡರ್) ಸಂದೀಪ್ ಧುಲ್ (ಡಿಫೆಂಡರ್) ನಿತಿನ್ ರಾವಲ್ (ಆಲ್ ರೌಂಡರ್) ಅಮಿತ್ (ಡಿಫೆಂಡರ್).

ಪಂದ್ಯ 2: ತೆಲುಗು ಟೈಟಾನ್ಸ್ vs ಪಾಟ್ನಾ ಪೈರೇಟ್ಸ್

ಈ ಬಾರಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಈಗಾಗಲೇ 29 ಪಂದ್ಯಗಳು ಮುಗಿದಿದ್ದು ಇಲ್ಲಿಯವರೆಗೂ ಒಂದೇ ಒಂದು ಗೆಲುವನ್ನು ಕೂಡ ಕಾಣಲಾಗದೇ ಮುಗ್ಗರಿಸಿರುವ ಏಕೈಕ ತಂಡವೆಂದರೆ ಅದು ತೆಲುಗು ಟೈಟಾನ್ಸ್. ಹೌದು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ತೆಲುಗು ಟೈಟಾನ್ಸ್ 2 ಪಂದ್ಯಗಳಲ್ಲಿ ಸೋತಿದ್ದು ಮತ್ತೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ ಯಾವುದೇ ಗೆಲುವನ್ನು ಸಾಧಿಸಲಾಗದೇ 8 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಪಾಟ್ನಾ ಪೈರೇಟ್ಸ್ 3 ಪಂದ್ಯಗಳಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲುವುದರ ಮೂಲಕ 16 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 31ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭವಾಗಲಿದೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಅಂಕಪಟ್ಟಿಯಲ್ಲಿ ತೆಲುಗು ಟೈಟಾನ್ಸ್ ತಂಡಕ್ಕಿಂತ ಪಾಟ್ನಾ ಪೈರೇಟ್ಸ್ ತಂಡ ಉತ್ತಮ ಸ್ಥಾನವನ್ನೇನೋ ಹೊಂದಿದೆ ಆದರೆ ಇತ್ತಂಡಗಳ ಮುಖಾಮುಖಿಯ ಇತಿಹಾಸದಲ್ಲಿ ಪಾಟ್ನಾ ಪೈರೇಟ್ಸ್ ತಂಡಕ್ಕಿಂತ ತೆಲುಗು ಟೈಟಾನ್ಸ್ ತಂಡ ದೊಡ್ಡ ಮಟ್ಟದ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಇದುವರೆಗೂ 17 ಪಂದ್ಯಗಳು ನಡೆದಿದ್ದು ತೆಲುಗು ಟೈಟಾನ್ಸ್ 9 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಟ್ನಾ ಪೈರೇಟ್ಸ್ 7 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ ಹಾಗೂ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ತೆಲುಗು ಟೈಟಾನ್ಸ್ ಸಂಭಾವ್ಯ ತಂಡ: ರೋಹಿತ್ ಕುಮಾರ್ (ನಾಯಕ) (ರೈಡರ್) ಸಿದ್ಧಾರ್ಥ್ ದೇಸಾಯಿ (ರೈಡರ್) ಅಂಕಿತ್ ಬೇನಿವಾಲ್ (ರೈಡರ್) ಸಿ ಅರುಣ್ (ಎಡ ಕವರ್) ಸುರಿಂದರ್ ಸಿಂಗ್ (ಬಲ ಕವರ್) ಸಂದೀಪ್ ಕಾಂಡೋಲ (ಎಡ ಮೂಲೆ) ರುತುರಾಜ್ ಕೊರವಿ (ಬಲ ಮೂಲೆ)

ಪಾಟ್ನಾ ಪೈರೇಟ್ಸ್ ಸಂಭಾವ್ಯ ತಂಡ: ಪ್ರಶಾಂತ್ ಕುಮಾರ್ ರೈ (ನಾಯಕ) (ರೈಡರ್) ಸಚಿನ್ ತನ್ವರ್ (ರೈಡರ್) ಮೋನು ಗೋಯತ್ (ರೈಡರ್) ನೀರಜ್ (ಬಲ ಕವರ್) ಸಜಿನ್ ಸಿ (ಎಡ ಕವರ್) ಮೊಹಮ್ಮದ್ರೇಜಾ ಶಾದ್ಲೌಯಿ (ಎಡ ಮೂಲೆ) ಸುನಿಲ್ (ಬಲ ಮೂಲೆ)

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Monday, January 3, 2022, 15:41 [IST]
Other articles published on Jan 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+