
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 78ನೇ ಪಂದ್ಯದಲ್ಲಿ ಯು ಮುಂಬಾ ತಂಡವು, ಪಾಯಿಂಟ್ಸ್ ಟೇಬಲ್ ಟಾಪರ್ ಆಗಿದ್ದ ಬಲಿಷ್ಠ ಬೆಂಗಳೂರು ಬುಲ್ಸ್ ತಂಡವನ್ನು 45-34 ಪಾಯಿಂಟ್ಸ್‌ಗಳಿಂದ ಮಣಿಸುವ ಮೂಲಕ ಪಂದ್ಯವನ್ನ ಗೆದ್ದು ಬೀಗಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಯು ಮುಂಬಾ 22 ಪಾಯಿಂಟ್ಸ್ ಕಲೆಹಾಕಿದ್ರೆ, ಬೆಂಗಳೂರು ಬುಲ್ಸ್ 20 ಪಾಯಿಂಟ್ಸ್ ಕಲೆಹಾಕಿ ಸಮಬಲದ ಹೋರಾಟ ನೀಡಿತ್ತು. ಆದ್ರೆ ಅದೇ ಎರಡನೇ ಆಫ್‌ನಲ್ಲಿ ಇದೇ ಸ್ಕೋರ್ ತದ್ವಿರುದ್ದಗೊಂಡು ಯು ಮುಂಬಾ 23 ಪಾಯಿಂಟ್ಸ್ ಕಬಳಿಸಿದ್ರೆ, ಬುಲ್ಸ್ 14 ಪಾಯಿಂಟ್ಸ್‌ಗಳಷ್ಟೇ ಪಡೆಯುವಲ್ಲಿ ಯಶಸ್ವಿಯಾಯ್ತು. ಉಭಯ ತಂಡಗಳು 21-22 ರೈಡಿಂಗ್ ಪಾಯಿಂಟ್ಸ್ ಪಡೆದರೂ ಸಹ ಟ್ಯಾಕಲ್‌ನಲ್ಲಿ ಮಿಂಚಿದ ಯು ಮುಂಬಾ 45-34 ಪಾಯಿಂಟ್ಸ್‌ಗಳಿಂದ ಪಂದ್ಯ ಗೆದ್ದಿತ್ತು.
ಟ್ಯಾಕಲ್ ವಿಚಾರದಲ್ಲಿ ಬೆಂಗಳೂರು ಬುಲ್ಸ್‌ಗಿಂತ, ಯು ಮುಂಬಾ ಮುಂದಿದೆ. ಮುಂಬೈ ತಂಡ 17 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ್ರೆ, ಬುಲ್ಸ್ ಗಳಿಸಿದ್ದು ಕೇವಲ 7 ಪಾಯಿಂಟ್ಸ್ ಆಗಿವೆ. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ 14 ಪಾಯಿಂಟ್ಸ್, ಭರತ್ 7, ಸೌರಭ್ ನಂದಾಲ್ 7 ಪಾಯಿಂಟ್ಸ್ ಪಡೆದರು.
ಅತ್ತ ಯು ಮುಂಬಾ ಪರ ಅಭಿಷೇಕ್ ಸಿಂಗ್ 11, ರಾಹುಲ್ ಸತ್ಪಾಲ್ 8, ವಿ. ಅಜಿತ್ ಕುಮಾರ್ 8, ರಿಂಕು 4 ಪಾಯಿಂಟ್ಸ್ ಕಲೆಹಾಕಿದ್ರು. ಯು ಮುಂಬಾ ಪರ ಬೆಂಗಳೂರು ಬುಲ್ಸ್ ಈ ಪಂದ್ಯದಲ್ಲಿ ಸೋಲನ್ನ ಕಂಡರೂ ಸಹ ಪಾಯಿಂಟ್ಸ್ ಟೇಬಲ್‌ನಲ್ಲಿ 46 ಪಾಯಿಂಟ್ಸ್‌ನೊಂದಿಗೆ ಟೇಬಲ್ ಟಾಪರ್ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನ ಹಿಂದಿಕ್ಕಿ ಹರಿಯಾಣ ಸ್ಟೀಲರ್ಸ್ ಸ್ಥಾನ ಪಡೆದಿದೆ. ಯು ಮುಂಬಾ 41 ಪಾಯಿಂಟ್ಸ್‌ನೊಂದಿಗೆ 4ನೇ ಸ್ಥಾನದಲ್ಲಿದೆ.