
ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ (ಅ.22) ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿಯಾಗಿ ಗೆದ್ದು ಬೀಗಿದೆ. ಬೆಂಗಳೂರು ಬುಲ್ಸ್ ರೈಡರ್ ಭರತ್ ಆಟಕ್ಕೆ ನಲುಗಿದ ಯು ಮುಂಬಾ, ತವರಿನ ಬುಲ್ಸ್ ಆಟದೆದುರು ಮಂಕಾಗಿದೆ.
ಯು ಮುಂಬಾ ವಿರುದ್ಧ ಆಕ್ರಮಣಾಕಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 42-32 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಜಯಿಸಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಯು ಮುಂಬಾ ಪರ ಗುಮನ್ ಸಿಂಗ್ 8 ರೈಡ್ ಪಾಯಿಂಟ್ ಮತ್ತು 3 ಬೋನಸ್ ಪಾಯಿಂಟ್‌ನಿಂದಾಗಿ ಒಟ್ಟು 11 ಪಾಯಿಂಟ್ಸ್ ಕಬಳಿಸಿದ್ದು ಬಿಟ್ಟರೆ, ಉಳಿದ ರೈಡರ್‌ಗಳು ಪಾಯಿಂಟ್ಸ್ ಪಡೆಯುವಲ್ಲಿ ವಿಫಲಗೊಂಡರು. ಆಶಿಶ್ ಭಗವಾನ್ ಮತ್ತು ಜೈ ಭಗವಾನ್ ತಲಾ 2 ಪಾಯಿಂಟ್ಸ್ ಪಡೆದಿದ್ದು ಸಮಾಧಾನಕರ ಪ್ರದರ್ಶನ ನೀಡಿದ್ರು.
ಆದ್ರೆ ಬೆಂಗಳೂರು ಬುಲ್ಸ್ ಪರ ಅಬ್ಬರದ ಆಟವಾಡಿದ್ದು ಭರತ್ 14 ರೈಡ್ ಪಾಯಿಂಟ್, 2 ಬೋನಸ್ ಸೇರಿದಂತೆ 16 ಪಾಯಿಂಟ್ಸ್ ಸಂಪಾದಿಸಿ ತಂಡದ ಪರ ಹೀರೋ ಆಗಿ ಮಿಂಚಿದರು. ಜೊತೆಗ ವಿಕಾಸ್ ಖಂಡಾಲ 4 ರೈಡ್ ಪಾಯಿಂಟ್ ಮೂಲಕ ಸಾಥ್ ನೀಡಿದರು.
25 ರೈಡಿಂಗ್ ಪಾಯಿಂಟ್ ಮೂಲಕ ಮಿಂಚಿದ ಬೆಂಗಳೂರು ಬುಲ್ಸ್ 1 ಬಾರಿ ಸೂಪರ್ ರೈಡ್, 9 ಟ್ಯಾಕಲ್ ಪಾಯಿಂಟ್, ಜೊತೆಗೆ 6 ಆಲೌಟ್ ಪಾಯಿಂಟ್ ಮೂಲಕ 42 ಪಾಯಿಂಟ್ ಸಂಪಾದಿಸಿದೆ. ಆದ್ರೆ ಅದೇ ಯು ಮುಂಬಾ ಕೇವಲ 18 ರೈಡ್ ಪಾಯಿಂಟ್ ಜೊತೆಗೆ ಟ್ಯಾಕಲ್‌ನಲ್ಲಿ 10 ಪಾಯಿಂಟ್ ಸಂಪಾದಿಸಿ ಒಟ್ಟಾರೆ ಪಂದ್ಯದ ಅಂತ್ಯಕ್ಕೆ 10 ಪಾಯಿಂಟ್ ಹಿನ್ನಡೆ ಅನುಭವಿಸಿತು.
ಪಾಯಿಂಟ್ಸ್ ಟೇಬಲ್‌ನಲ್ಲಿ ಬೆಂಗಳೂರು ಬುಲ್ಸ್ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಸೋಲು ಕಾಣುವ ಮೂಲಕ ಒಟ್ಟು 21 ಪಾಯಿಂಟ್ಸ್ ಕಲೆಹಾಕಿ 3 ಸ್ಥಾನಕ್ಕೆ ಜಿಗಿದಿದೆ. ಮತ್ತೊಂದೆಡೆ ಪಂದ್ಯ ಸೋತ ಯು ಮುಂಬಾ ಆಡಿರುವ 6 ಪಂದ್ಯಗಳಲ್ಲಿ ತಲಾ 3 ಗೆಲುವು ಮತ್ತು ಸೋಲನ್ನ ಕಾಣುವ ಮೂಲಕ 16 ಪಾಯಿಂಟ್ಸ್ ಕಲೆಹಾಕಿದ್ದು, 6ನೇ ಸ್ಥಾನದಲ್ಲಿಯೇ ಉಳಿದಿದೆ.
ಪ್ರೊ ಕಬಡ್ಡಿ ಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ