Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ಗುಜರಾತ್ ಜೈಂಟ್ಸ್‌ ವಿರುದ್ಧ ಬೆಂಗಾಲ್ ವಾರಿಯರ್ಸ್‌ಗೆ ಭರ್ಜರಿ ಜಯ

Bengal warriors vs Gujarat Giants

ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 73ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ವಿರುದ್ಧ ಬೆಂಗಾಲ್ ವಾರಿಯರ್ಸ್ 46-27 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ.

ಮೊದಲಾರ್ಧದಲ್ಲಿ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದ್ದ ಗುಜರಾತ್ ಜೈಂಟ್ಸ್ ಎರಡನೇ ಅವಧಿಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸೋಲನ್ನ ಒಪ್ಪಿಕೊಂಡಿತು. ಮೊದಲಾರ್ಧದಲ್ಲಿ 14-15 ಅಂಕಗಳಿಂದ ಕೊಂಚ ಹಿನ್ನಡೆ ಸಾಧಿಸಿದ್ದ ಬೆಂಗಾಲ್‌ ವಾರಿಯರ್ಸ್ ವಿರಾಮದ ಬಳಿಕ ಆಕ್ರಮಣಾಕಾರಿ ಆಟದ ಮೂಲಕ ಗಮನ ಸೆಳೆದಿದೆ.

ದ್ವಿತಿಯಾರ್ಧದಲ್ಲಿ ಬರೋಬ್ಬರಿ 32 ಪಾಯಿಂಟ್ಸ್ ಕಬಳಿಸಿದ ಬೆಂಗಾಲ್ ವಾರಿಯರ್ಸ್‌ ಎದುರಾಳಿಗೆ ಯಾವುದೇ ಅವಕಾಶ ನೀಡದೆ ಪ್ರಾಬಲ್ಯವನ್ನ ಸಾಧಿಸಿತು. ರೈಡಿಂಗ್‌ನಲ್ಲಿ ಬೆಂಗಾಲ್ 19 ಪಾಯಿಂಟ್ಸ್ ಪಡೆದ್ರೆ, ಗುಜರಾತ್ 10 ಪಾಯಿಂಟ್ಸ್‌ಗೆ ತೃಪ್ತಿ ಪಟ್ಟಿತು.

ಆದ್ರೆ ಟ್ಯಾಕಲ್‌ನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ ಬೆಂಗಾಲ್ ವಾರಿಯರ್ಸ್ 9 ಪಾಯಿಂಟ್ಸ್ ತನ್ನದಾಗಿಸಿಕೊಂಡರೆ, ಗುಜರಾತ್‌ ಕೇವಲ 1 ಪಾಯಿಂಟ್ಸ್‌ ಮೂಲಕ ಹಿನ್ನಡೆ ಅನುಭಿಸಿತು.

ಹೀಗೆ ಒಂದು ಅಂಕಗಳೊಂದಿಗೆ ಹಿನ್ನಡೆಯಲ್ಲಿದ್ದ ಬೆಂಗಾಲ್ ವಿರಾಮದ ಬಳಿಕ 20 ಪಾಯಿಂಟ್ಸ್ ಲೀಡ್ ಪಡೆಯಿತು. ಅಲ್ಲದೆ 46-27 ಪಾಯಿಂಟ್ಸ್‌ ಅಂತರದಲ್ಲಿ ಭರ್ಜರಿ ಗೆಲುವನ್ನ ಸಂಪಾದಿಸಿದೆ.

ಬೆಂಗಾಲ್ ವಾರಿಯರ್ಸ್ ಪರ ಮಿಂಚಿನ ದಾಳಿ ನಡೆಸಿದ ನಾಯಕ ಮಣಿಂದರ್ ಸಿಂಗ್ 12, ಶ್ರೀಕಾಂತ್ ಜಾಧವ್ 10, ದೀಪಕ್ ಹೂಡ 6 ಪಾಯಿಂಟ್ಸ್ ಕಬಳಿಸಿದರು. ಇನ್ನು ಗುಜರಾತ್ ಜೈಂಟ್ಸ್ ಪರ ರೈಡಿಂಗ್‌ನಲ್ಲಿ ರಾಕೇಶ್ 5, ಚಂದ್ರನ್ ರಂಜಿತ್ 9 ಪಾಯಿಂಟ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಈ ಗೆಲುವಿನ ಮೂಲಕ ಬೆಂಗಾಲ್ ವಾರಿಯರ್ಸ್ 37 ಪಾಯಿಂಟ್ಸ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಪಂದ್ಯ ಸೋತ ಗುಜರಾತ್ ಜೈಂಟ್ಸ್ 31 ಪಾಯಿಂಟ್ಸ್ ಮೂಲಕ 11ನೇ ಸ್ಥಾನದಲ್ಲಿಯೇ ಉಳಿದಿದೆ.

ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Saturday, November 12, 2022, 20:45 [IST]
Other articles published on Nov 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+