PKL 2022: ಬೆಂಗಾಲ್ ವಾರಿಯರ್ಸ್ vs ಯುಪಿ ಯೋಧ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 66ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧ ನಡುವಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳು ನಿಗದಿತ ಸಮಯದಲ್ಲಿ 41-41 ಪಾಯಿಂಟ್‌ಗಳಿಂದ ಸಮಬಲ ಸಾಧಿಸುವ ಮೂಲಕ ಪ್ರಬಲ ಹೋರಾಟವನ್ನು ಪ್ರದರ್ಶಿಸಿವೆ.
ಪಂದ್ಯದ ಮೊದಲಾರ್ಧದಲ್ಲಿ 25-15 ಪಾಯಿಂಟ್ಸ್‌ಗಳಿಂದ ಮುಂದಿದ್ದ ಯುಪಿ ಯೋಧ ತಂಡವು ಭರ್ಜರಿ ಆಟವನ್ನು ಪ್ರದರ್ಶಿಸಿತು. 14 ರೈಡಿಂಗ್ ಪಾಯಿಂಟ್ಸ್, 5 ಟ್ಯಾಕಲ್ ಪಾಯಿಂಟ್ಸ್, 4 ಆಲೌಟ್ ಪಾಯಿಂಟ್ಸ್ ಮೂಲಕ ಒಟ್ಟು 25 ಪಾಯಿಂಟ್ಸ್ ಕಲೆಹಾಕಿತು. ಆದ್ರೆ ಅದೇ ಬೆಂಗಾಲ್ ವಾರಿಯರ್ಸ್ 15 ಪಾಯಿಂಟ್ಸ್ ಗಳಿಸಿದ್ದು, ನಂತರದ ಸುತ್ತಿನಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡಿತು.
ವಿರಾಮದ ಬಳಿಕ ಆಕ್ರಮಣಾಕಾರಿ ಆಟವಾಡಿದ ಬೆಂಗಾಲ್ ವಾರಿಯರ್ಸ್ ತಂಡವು ಯುಪಿ ಯೋಧ ವಿರುದ್ಧ ಪ್ರಭಾವಶಾಲಿ ಪ್ರದರ್ಶನ ನೀಡಿತು. ದ್ವಿತಿಯಾರ್ಧದಲ್ಲಿ 26-16 ಪಾಯಿಂಟ್ಸ್ ಅಂತರ ಪಡೆದ ಯುಪಿ ಯೋಧ ಪ್ರಬಲ ಹೋರಾಟ ಪ್ರದರ್ಶಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಪಂದ್ಯದಲ್ಲಿ ಅಂತಿಮವಾಗಿ 41-41 ಪಾಯಿಂಟ್ಸ್‌ಗಳಿಂದ ಕೊನೆಗೊಂಡಿತು.
ಬೆಂಗಾಲ್ ವಾರಿಯರ್ಸ್ ರೈಡಿಂಗ್‌ನಲ್ಲಿ ಮಿಂಚಿದ ಮಣಿಂದರ್ ಸಿಂಗ್ 18 ಪಾಯಿಂಟ್ಸ್ ಕಬಳಿಸಿದ್ರೆ, ದೀಪಕ್ ಹೂಡ 4, ಶ್ರೀಕಾಂತ್ ಜಾಧವ್ , ಶುಭಂ ಶಿಂದೆ, ಗಿರೀಶ್ ಮಾರುತಿ ಹಾಗೂ ಮನೋಜ್ ಗೌಡ ತಲಾ 3 ಪಾಯಿಂಟ್ಸ್ ಕಲೆಹಾಕಿದರು.
ಇನ್ನು ಯುಪಿ ಯೋಧ ಪರ ರೈಡಿಂಗ್‌ನಲ್ಲಿ ಮಿಂಚಿದ ನಾಯಕ ಪರ್ದೀಪ್ ನರ್ವಾಲ್ 11, ರೋಹಿತ್ ತೋಮರ್ 16 ಪಾಯಿಂಟ್ಸ್ ಗಳಿಸಿ ಮಿಂಚಿದರು. ಅಶುಂ ಸಿಂಗ್, ಶುಭಂ ಕುಮಾರ್ ಹಾಗೂ ಜೇಮ್ಸ್ ಕಮವೇಟಿ ತಲಾ 2 ಪಾಯಿಂಟ್ಸ್ ತನ್ನದಾಗಿಸಿಕೊಂಡರು.
ಈ ಪಂದ್ಯದ ಬಳಿಕ ಬೆಂಗಾಲ್ ವಾರಿಯರ್ಸ್ ತಂಡವು 11 ಪಂದ್ಯಗಳಲ್ಲಿ 5 ಗೆಲುವು 4 ಸೋಲು ಹಾಗೂ 2 ಪಂದ್ಯ ಟೈನೊಂದಿಗೆ 32 ಪಾಯಿಂಟ್ಸ್ ಕಲೆಹಾಕಿದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಯುಪಿ ಯೋಧ 11 ಪಂದ್ಯಗಳಲ್ಲಿ 4 ಗೆಲುವು 5 ಸೋಲು ಹಾಗೂ 2 ಪಂದ್ಯ ಟೈನೊಂದಿಗೆ 30 ಪಾಯಿಂಟ್ಸ್ ಕಲೆಹಾಕಿದ್ದು 10ನೇ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications