
ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 53ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಕೇವಲ 2 ಪಾಯಿಂಟ್ಸ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ. ಹರಿಯಾಣ ಸ್ಟೀಲರ್ಸ್ 29-27 ಪಾಯಿಂಟ್ಸ್ ಕಲೆಹಾಕಿ ಪಂದ್ಯವನ್ನ ತಮ್ಮದಾಗಿಸಿಕೊಂಡಿತು.
ಉಭಯ ತಂಡಗಳ ಪ್ರಬಲ ಪೈಪೋಟಿಯಿಂದಾಗಿ ಮೊದಲಾರ್ಧದಲ್ಲಿ ಹೆಚ್ಚು ಪಾಯಿಂಟ್ಸ್ ಹರಿದು ಬರಲಿಲ್ಲ. ಹರಿಯಾಣ ಸ್ಟೀಲರ್ಸ್ ವಿರಾಮದ ವೇಳೆಗೆ 13-10 ಪಾಯಿಂಟ್ಸ್ ಮೂಲಕ ಮೂರು ಅಂಕಗಳ ಮುನ್ನಡೆ ಪಡೆದುಕೊಂಡಿತು.
ದ್ವಿತಿಯಾರ್ಧದಲ್ಲಿ ಹರಿಯಾಣಗಿಂತ ಕೇವಲ ಒಂದು ಪಾಯಿಂಟ್ ಮುನ್ನಡೆ ಕಾಯ್ದುಕೊಂಡ ಬೆಂಗಳೂರು ಬುಲ್ಸ್ 17-16 ಪಾಯಿಂಟ್ಸ್‌ಗಳಿಂದ ಮುನ್ನಡೆ ಸಾಧಿಸಿತು. ಆದ್ರೆ ಅದಾಗಲೇ ಮೊದಲ ಸುತ್ತಿನಲ್ಲಿ 3 ಅಂಕ ಮುನ್ನಡೆ ಸಾಧಿಸಿದ್ದ ಹರಿಯಾಣ ಸ್ಟೀಲರ್ಸ್ 2 ಪಾಯಿಂಟ್ಸ್ ಅಂತರದಲ್ಲಿ ರೋಚಕ ಗೆಲುವನ್ನು ಸಾಧಿಸಿತು.
ಬೆಂಗಳೂರು ಬುಲ್ಸ್ ಪರ ರೈಡರ್ ಭರತ್ ಏಕಾಂಗಿ ಹೋರಾಟ (10 ಪಾಯಿಂಟ್ಸ್) ವ್ಯರ್ಥಗೊಂಡಿತು. ನೀರಜ್ ನರ್ವಾಲ್ ಹಾಗೂ ಸೌರಭ್ ನಂದಲ್ ತಲಾ 3 ಪಾಯಿಂಟ್ಸ್ ಪಡೆದ್ರು. ಸಚಿನ್ ನರ್ವಾಲ್ ಆಲ್‌ರೌಂಡರ್ ಆಟವಾಡಿ 5 ಪಾಯಿಂಟ್ಸ್ ತನ್ನದಾಗಿಸಿಕೊಂಡರು.
ಹರಿಯಾಣ ಸ್ಟೀಲರ್ಸ್ ಪರ ರೈಡಿಂಗ್‌ನಲ್ಲಿ ಮಿಂಚಿದ ಮೀತು ಶರ್ಮಾ 9 ಪಾಯಿಂಟ್ಸ್, ಅಮಿರ್ ಹುಸೇನ್ 5 ಪಾಯಿಂಟ್ಸ್, ಮಂಜೀತ್ ಹಾಗೂ ಜಯದೀಪ್ ತಲಾ 4 ಪಾಯಿಂಟ್ಸ್ ಪಡೆದರು.
ಈ ಗೆಲುವಿನ ಮೂಲಕ ಹರಿಯಾಣ ಸ್ಟೀಲರ್ಸ್ ಐದನೇ ಸ್ಥಾನಕ್ಕೆ ಜಿಗಿದಿದ್ದು 26 ಪಾಯಿಂಟ್ಸ್‌ನೊಂದಿಗೆ ಯು ಮುಂಬಾ ಜೊತೆಗೆ ಸಮಬಲ ಸಾಧಿಸಿದೆ. ಇನ್ನು ಪಂದ್ಯ ಸೋತರು ಸಹ ನಮ್ಮ ಬೆಂಗಳೂರು ಬುಲ್ಸ್ 35 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ