ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಗುಜರಾತ್ ಜೈಂಟ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ ಅಬ್ಬರ, 6 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು

Patna vs Gujarat

ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 50ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 34-28 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ.

ಮೊದಲಾರ್ಧದ ಆಟದಿಂದಲೇ ಅಬ್ಬರದ ಆಟವಾಡಿದ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು 21-13 ಪಾಯಿಂಟ್ಸ್‌ಗಳ ಅಂತರ ಕಾಯ್ದುಕೊಂಡಿತು. ರೈಡಿಂಗ್ ಪಾಯಿಂಟ್ಸ್ 12-12 ಸಮಬಲ ಸಾಧಿಸಿದ್ರೆ, ಟ್ಯಾಕಲ್‌ನಲ್ಲಿ 4-1ರ ಮುನ್ನಡೆಯಲ್ಲಿತ್ತು.

ವಿರಾಮದ ನಂತರ ಅದ್ಭುತ ರೈಡಿಂಗ್ ಮೂಲಕ ಕಂಬ್ಯಾಕ್ ಮಾಡಿದ ಗುಜರಾತ್ ಜೈಂಟ್ಸ್ 11 ರೈಡಿಂಗ್ ಪಾಯಿಂಟ್ಸ್ ಜೊತೆಗೆ 15-13 ಪಾಯಿಂಟ್ಸ್ ಕಲೆಹಾಕಿತು. ಆದ್ರೆ ಮೊದಲಾರ್ಧದಲ್ಲಿ 7 ಪಾಯಿಂಟ್ಸ್ ಮುನ್ನಡೆ ಸಾಧಿಸಿದ್ದ ಪಾಟ್ನಾ ಪೈರೇಟ್ಸ್‌ ಅಂತಿಮ ವಿರಾಮದ ವೇಳೆಗೆ 6 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು ಸಾಧಿಸಿತು.

ಪಾಟ್ನಾ ಪೈರೇಟ್ಸ್‌ ಪರ ಸಚಿನ್ 13 ಪಾಯಿಂಟ್ಸ್ ಕಬಳಿಸಿದ್ರೆ, ರೋಹಿತ್ ಗುಲಿಯಾ 7 ಪಾಯಿಂಟ್ಸ್‌ ತನ್ನದಾಗಿಸಿಕೊಂಡರು. ಮೊನು 3 ಪಾಯಿಂಟ್ಸ್‌ ತನ್ನದಾಗಿಸಿಕೊಂಡರು. ಇನ್ನು ಗುಜರಾತ್ ಜೈಂಟ್ಸ್ ಪರ ಪ್ರತೀಕ್ ದಹಿಯಾ 11 ಪಾಯಿಂಟ್ಸ್ ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡ್ರು.

ಈ ಗೆಲುವಿನ ಮೂಲಕ ಪಾಟ್ನಾ ಪೈರೇಟ್ಸ್ ತಂಡವು 9 ಪಂದ್ಯಗಳಲ್ಲಿ 3 ಪಂದ್ಯ ಗೆಲುವು ಮತ್ತು 4 ಪಂದ್ಯ ಸೋಲಿನ ಮೂಲಕ 23 ಪಾಯಿಂಟ್ಸ್ ಕಲೆಹಾಕಿದ್ದು, 8ನೇ ಸ್ಥಾನ ಅಲಂಕರಿಸಿದೆ. ಇನ್ನು ಪಂದ್ಯ ಸೋತ ಗುಜರಾತ್ ಜೈಂಟ್ಸ್ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲಿನ ಮೂಲಕ 25 ಪಾಯಿಂಟ್ಸ್ ಮುಟ್ಟಿದ್ದು 6ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಸಂಪೂರ್ಣ ಪಾಯಿಂಟ್ಸ್ ಟೇಬಲ್‌ ನೋಡಲು ಇಲ್ಲಿ ಕ್ಲಿಕ್ ಮಾಡಿ

Story first published: Monday, October 31, 2022, 22:40 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X