PKL 2022: ಪಿಂಕ್ ಪ್ಯಾಂಥರ್ಸ್ ವಿರುದ್ಧ ಅಬ್ಬರಿಸಿದ ಪಾಟ್ನಾ ಪೈರೇಟ್ಸ್‌ಗೆ 7 ಪಾಯಿಂಟ್ಸ್ ಗೆಲುವು

ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 72ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 37-30 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿದೆ.
ಮೊದಲಾರ್ಧದಲ್ಲಿ ಅಬ್ಬರದ ರೈಡಿಂಗ್ ಜೊತೆಗೆ ಟ್ಯಾಕಲ್‌ನಲ್ಲೂ ಮಿಂಚಿದ ಪಾಟ್ನಾ ಪೈರೇಟ್ಸ್ ತಂಡವು 7 ಪಾಯಿಂಟ್ಸ್ ಅಂತರವನ್ನು ಕಾಯ್ದುಕೊಂಡು 20-13 ಪಾಯಿಂಟ್ಸ್ ಕಲೆಹಾಕಿತು. ಎದುರಾಳಿ ರೈಡರ್‌ಗಳನ್ನ ತನ್ನ ಬಲೆಯಲ್ಲಿ ಕೆಡವಿದ ಪಾಟ್ನಾ ಪೈರೇಟ್ಸ್ ಮಿಂಚಿನ ದಾಳಿ ಕೂಡ ನಡೆಸಿತು.
ವಿರಾಮದ ಬಳಿಕ ದ್ವಿತಿಯಾರ್ಧದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಪ್ರಬಲ ಹೋರಾಟ ನೀಡಿತು. ಅದರ ಪರಿಣಾಮವೇ ಎರಡನೇ ಅವಧಿಯಲ್ಲಿ ಉಭಯ ತಂಡಗಳು 17-17 ಸಮಬಲ ಸಾಧಿಸಿದವು. ಜೈಪುರ್ 9 ಪಾಯಿಂಟ್ಸ್ ಮೂಲಕ ಮಿಂಚಿದ್ರೆ, ಪಾಟ್ನಾ ಪೈರೇಟ್ಸ್ 5 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ಆದ್ರೆ ಟ್ಯಾಕಲ್ ವಿಚಾರದಲ್ಲಿ ಪಾಟ್ನಾ ಮೇಲುಗೈ ಸಾಧಿಸಿದ್ದಲ್ಲದೆ 37-30 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಜಯಿಸಿತು.
ಪಾಟ್ನಾ ಪರ ರೈಡಿಂಗ್‌ನಲ್ಲಿ ಸಚಿನ್ 8, ರೋಹಿತ್ ಗುಲಿಯಾ 9 ಪಾಯಿಂಟ್ಸ್ ಕಬಳಿಸಿ ಸ್ಟಾರ್ ಪ್ಲೇಯರ್ ಆಗಿ ಗುರುತಿಸಿಕೊಂಡರು. ಜೈಪುರ್ ಪರ ಅರ್ಜುನ್ ದೇಶ್ವಾಲ್ 13 ಪಾಯಿಂಟ್ಸ್ ಕಬಳಿಸಿ ಉತ್ತಮ ಹೋರಾಟ ಪ್ರದರ್ಶಿಸಿದರು. ಡಿಫೆಂಡರ್ ಅಂಕುಶ್ 6 ಪಾಯಿಂಟ್ಸ್ ಕಬಳಿಸಿದ್ರು ಪಂದ್ಯ ಜಯಿಸಲು ಸಾಧ್ಯವಾಗಲಿಲ್ಲ.
ಈ ಗೆಲುವಿನ ಬಳಿಕ ಪಾಟ್ನಾ ಪೈರೇಟ್ಸ್ ಸತತ ಐದು ಜಯದೊಂದಿಗೆ 38 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಅಷ್ಟೇ ಅಂಕ ಕಲೆಹಾಕಿರುವ ಯು ಮುಂಬಾ ಪಾಯಿಂಟ್ಸ್ ವ್ಯತ್ಯಾಸದಲ್ಲಿ ಮುಂದಿರುವ ಕಾರಣ 4ನೇ ಸ್ಥಾನ ಪಡೆದಿದೆ. ಇನ್ನು ಪಂದ್ಯ ಸೋತರು ಜೈಪುರ್ ಪಿಂಕ್ ಪ್ಯಾಂಥರ್ಸ್ 38 ಪಾಯಿಂಟ್ಸ್ ಮೂಲಕ 3ನೇ ಸ್ಥಾನ ಅಲಂಕರಿಸಿದೆ.
ಪ್ರೊ ಕಬಡ್ಡಿ ಲೀಗ್ 2022ರ ಸೀಸನ್ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications