PKL 2022 Playoffs: ದಬಾಂಗ್ ಡೆಲ್ಲಿ ಮಣಿಸಿ ಸೆಮಿಫೈನಲ್ ತಲುಪುತ್ತಾ ಬೆಂಗಳೂರು ಬುಲ್ಸ್, ಪಂದ್ಯದ ಸಮಯ, ಬಲಾಬಲ ವಿವರ

ಪ್ರೊ ಕಬಡ್ಡಿ ಲೀಗ್ 2022ರ ಪ್ಲೇ ಆಫ್ ಪಂದ್ಯಗಳು ಡಿಸೆಂಬರ್ 13 ರಂದು ಮಂಗಳವಾರ ಮುಂಬೈನ ಸರ್ದಾರ್ ವಲ್ಲಭಬಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧ ಸೆಣೆಸಲಿದ್ದು, ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಯುಪಿ ಯೋಧಾಸ್ ವಿರುದ್ಧ ಆಡಲಿದೆ.
ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಪ್ಲೇಆಫ್‌ನಲ್ಲಿ ಗೆಲುವು ಸಾಧಿಸುವ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ.
ಪ್ಲೇಆಫ್‌ನ ಮೊದಲನೇ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬುಲ್ಸ್ ಪಡೆ ದಬಾಂಗ್ ಡೆಲ್ಲಿ ತಂಡದ ವಿರುದ್ಧ ಸೆಣೆಸಲಿದೆ. ಸಂಜೆ 7.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಬೆಂಗಳೂರು ಬುಲ್ಸ್ 22 ಪಂದ್ಯಗಳಲ್ಲಿ 13 ಗೆಲುವು, 8 ಸೋಲು ಮತ್ತು ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆಡಿರುವ 22 ಪಂದ್ಯಗಳಲ್ಲಿ 10 ಗೆಲುವು 10 ಸೋಲು ಮತ್ತು 2 ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ ದಬಾಂಗ್ ಡೆಲ್ಲಿ 6ನೇ ಸ್ಥಾನದಲ್ಲಿದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಎರಡೂ ತಂಡಗಳ ನಡುವೆ ಸಮಬಲದ ಹೋರಾಟ
ದಬಾಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ಇದುವರೆಗೂ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಬುಲ್ಸ್ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಡೆಲ್ಲಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಎರಡೂ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿದ್ದು, ಪ್ಲೇಆಫ್‌ನಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಬಹುದಾಗಿದೆ.
ಈ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧ 2 ಪಂದ್ಯಗಳಲ್ಲಿ ಆಡಿದ್ದು, ಎರಡರಲ್ಲೂ ಗೂಳಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿವೆ. ಈ ಅಂಶವನ್ನು ಗಮನಿಸಿದರೆ ಬೆಂಗಳೂರು ಬುಲ್ಸ್ ನೆಚ್ಚಿನ ತಂಡವಾಗಿದೆ. ಆದರೆ, ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
IND vs BAN 1st Test: ಭಾರತದ ಸಂಭಾವ್ಯ ಆಡುವ 11ರ ಬಳಗ; 12 ವರ್ಷಗಳ ನಂತರ ಈ ಬೌಲರ್‌ಗೆ ಸ್ಥಾನ?

ಭರತ್, ವಿಕಾಶ್ ಮಿಂಚಿದರೆ ಬುಲ್ಸ್‌ಗೆ ಸುಲಭ ಗೆಲುವು!
ಪ್ರಮುಖ ರೈಡರ್ ಗಳಾದ ಭರತ್ ಮತ್ತಯ ವಿಕಾಶ್ ಕಂಡೋಲಾ ಮಿಂಚಿದರೆ ಬೆಂಗಳೂರು ಬುಲ್ಸ್ ಗೆಲುವು ಸುಲಭವಾಗಲಿದೆ. ಭರತ್ ಈ ಸೀಸನ್‌ನಲ್ಲಿ 21 ಪಂದ್ಯಗಳಿಂದ 257 ರೈಡ್ ಪಾಯಿಂಟ್ ಗಳಿಸಿದ್ದು ತಂಡದ ಅಗ್ರ ರೈಡರ್ ಆಗಿದ್ದಾರೆ. ಭರತ್ ಮಿಂಚಿದರೆ ಬೆಂಗಳೂರು ಬುಲ್ಸ್ ಪಡೆಗೆ ಗೆಲುವು ಸುಲಭವಾಗಲಿದೆ. ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ 22 ಪಂದ್ಯಗಳಲ್ಲಿ 246 ರೈಡಿಂಗ್ ಪಾಯಿಂಟ್ ಗಳಿಸಿದ್ದಾರೆ.
ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಾಲ್ ಮತ್ತು ಅಮನ್ ಬುಲ್ಸ್ ಪಡೆಯ ಪ್ರಮುಖ ಡಿಫೆಂಡರ್ ಆಗಿದ್ದಾರೆ. ಸೌರಭ್ 22 ಪಂದ್ಯಗಳಿಂದ 60 ಟ್ಯಾಕಲ್ ಪಾಯಿಂಟ್ ಗಳಿಸಿದ್ದು, ಅಮನ್ 51 ಪಾಯಿಂಟ್ ಗಳಿಸಿದ್ದಾರೆ. ದಬಾಂಗ್ ಡೆಲ್ಲಿ ಪಡೆಯ ವಿಶಾಲ್ 21 ಪಂದ್ಯಗಳಿಂದ 57 ಟ್ಯಾಕಲ್ ಪಾಯಿಂಟ್ ಗಳಿಸಿದ್ದಾರೆ. ಡೆಲ್ಲಿ ತಂಡಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ಬುಲ್ಸ್ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ ಗೆಲುವು ಸಾಧಿಸಲಿದೆ.

ಯುಪಿ ಯೋಧಾಸ್ ವಿರುದ್ಧ ತಮಿಳ್ ತಲೈವಾಸ್ ಕಾದಾಟ
ಎಲಿಮಿನೇಟರ್ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್‌ಗೆ ಯುಪಿ ಯೋಧಾಸ್ ಸವಾಲು ಹಾಕಲಿದೆ. ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ರಾತ್ರಿ 8.30ಕ್ಕೆ ಆರಂಭವಾಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಯುಪಿ ಯೋಧಾಸ್ 4ನೇ ಸ್ಥಾನದಲ್ಲಿದ್ದು, ತಮಿಳ್ ತಲೈವಾಸ್ 5ನೇ ಸ್ಥಾನದಲ್ಲಿದೆ.
ಯುಪಿ ಯೋಧಾಸ್ ಮತ್ತು ತಮಿಳ್ ತಲೈವಾಸ್ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಯುಪಿ ಯೋಧಾಸ್ 5 ಪಂದ್ಯಗಳಲ್ಲಿ ಜಯಗಳಿಸಿದರೆ, ತಮಿಳ್ ತಲೈವಾಸ್ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. 3 ಪಂದ್ಯಗಳು ಡ್ರಾನಲ್ಲಿ ಕೊನೆಯಾಗಿವೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೀಸನ್ 9 ರಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಬಾರಿ ಸಾಧಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications