For Quick Alerts
ALLOW NOTIFICATIONS  
For Daily Alerts

PKL 2022: ದಬಾಂಗ್ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಪುಣೇರಿ ಪಲ್ಟನ್

Puneri paltan vs dabang delhi

ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 52ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪುಣೇರಿ ಪಲ್ಟನ್ 43-38 ಪಾಯಿಂಟ್ಸ್ ಅಂತರದಲ್ಲಿ ಗೆದ್ದು ಬೀಗಿದೆ.

ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಪುಣೇರಿ ಪಲ್ಟನ್ ಅಬ್ಬರದ ಆಟವಾಡುವ ಮೂಲಕ ಎದುರಾಳಿ ವಿರುದ್ಧ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಮಿಂಚಿತು. ವಿರಾಮಕ್ಕೂ ಮುನ್ನ ಪುಣೇರಿ ಪಲ್ಟನ್ 43-38 ಪಾಯಿಂಟ್ಸ್ ಅಂತರದಲ್ಲಿ ಮುನ್ನಡೆ ಸಾಧಿಸಿತು.

ಆದ್ರೆ ದ್ವಿತಿಯಾರ್ಧದಲ್ಲಿ 21 ಪಾಯಿಂಟ್ಸ್ ಕಲೆಹಾಕಿದ ದಬಾಂಗ್ ಡೆಲ್ಲಿ ಅದ್ಭುತ ಕಂಬ್ಯಾಕ್ ಮಾಡಿತ್ತಾದ್ರೂ, ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ 6 ಪಾಯಿಂಟ್ಸ್‌ ಮುನ್ನಡೆ ಕಾಯ್ದುಕೊಂಡಿತ್ತು. ಹೀಗಾಗಿ ಅಂತಿಮವಾಗಿ 5 ಪಾಯಿಂಟ್ಸ್ ಅಂತರದಲ್ಲಿ ದಬಾಂಗ್ ಡೆಲ್ಲಿ ಸೋಲನ್ನ ಅನುಭವಿಸಿದೆ.

ಪುಣೇರಿ ಪಲ್ಟನ್ ತಂಡದ ಪರ ರೈಡಿಂಗ್‌ನಲ್ಲಿ ಮಿಂಚಿದ ಆಕಾಶ್ ಶಿಂಧೆ ಮತ್ತು ಮೋಹಿತ್ ಗೋಯತ್ ತಲಾ 13 ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಸಂಭಿರ್, ಫಜೇಲ್ ಅತ್ರಾಚಲಿ ಟ್ಯಾಕಲ್ ಮೂಲಕ ತಲಾ 4 ಪಾಯಿಂಟ್ ಸಂಪಾದಿಸಿದರು.

ಇನ್ನು ದಬಾಂಗ್ ಡೆಲ್ಲಿ ಪರ ನಾಯಕ ನವೀನ್ ಕುಮಾರ್ 16 ಪಾಯಿಂಟ್ ಕಬಳಿಸಿದ್ರೆ, ಆಶು ಮಲ್ಲಿಕ್ 8 ಪಾಯಿಂಟ್ ತಮ್ಮದಾಗಿಸಿಕೊಂಡರು.

ಈ ಗೆಲುವಿನ ಮೂಲಕ ಪುಣೇರಿ ಪಲ್ಟನ್ 9 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿದ್ದು 32 ಪಾಯಿಂಟ್ಸ್ ಮೂಲಕ 2 ಸ್ಥಾನ ಅಲಂಕರಿಸಿದೆ. ಪಂದ್ಯ ಸೋತ ದಬಾಂಗ್ ಡೆಲ್ಲಿ 10 ಪಂದ್ಯಗಳಲ್ಲಿ 5 ಗೆಲುವು ಮತ್ತು 5 ಪಂದ್ಯ ಸೋಲಿನ ಮೂಲಕ 29 ಪಾಯಿಂಟ್ಸ್ ಕಲೆಹಾಕಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದೆ. ನಮ್ಮ ಬೆಂಗಳೂರು ಬುಲ್ಸ್ 35 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಸಂಪೂರ್ಣ ಪಾಯಿಂಟ್ಸ್ ಟೇಬಲ್‌ ನೋಡಲು ಇಲ್ಲಿ ಕ್ಲಿಕ್ ಮಾಡಿ

Story first published: Tuesday, November 1, 2022, 22:22 [IST]
Other articles published on Nov 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+