Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ಗುಜರಾತ್ ಜೈಂಟ್ಸ್‌ಗೆ ಸೋಲಿನ ರುಚಿ ತೋರಿಸಿದ ಯು ಮುಂಬಾ

U mumba vs Gujarat Giants

ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 40ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಗುಜರಾತ್ ಜೈಂಟ್ಸ್‌ ವಿರುದ್ಧ 37-29 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಗುಜರಾತ್ ತಂಡವನ್ನ ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಪಂದ್ಯದ ಆರಂಭದಿಂದಲೂ ಸಮಬಲದ ಹೋರಾಟ ಪ್ರದರ್ಶಿಸಿದ ಉಭಯ ತಂಡಗಳು ಮೊದಲಾರ್ಧದಲ್ಲಿ 16-16 ಪಾಯಿಂಟ್ಸ್ ಗಳಿಸುವ ಮೂಲಕ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ್ರು. ಈ ವೇಳೆಯಲ್ಲಿ ಗುಜರಾತ್ 9 ರೈಡ್ ಪಾಯಿಂಟ್ಸ್‌ ಗಳಿಸಿದ್ರೆ, ಯು ಮುಂಬಾ 11 ಪಾಯಿಂಟ್ಸ್‌ ರೈಡಿಂಗ್‌ನಲ್ಲಿ ಪಡೆಯಿತು. ಯು ಮುಂಬಾ ಟ್ಯಾಕಲ್‌ನಲ್ಲಿ ಮುಂದಿದ್ರೆ, ಗುಜರಾತ್ ಟ್ಯಾಕಲ್ ಜೊತೆಗೆ ಎದುರಾಳಿಯನ್ನ ಆಲೌಟ್ ಮಾಡಿ ಹೆಚ್ಚುವರಿ ಅಂಕ ಸಂಪಾದಿಸಿ ಸಮಬಲ ಸಾಧಿಸಿತು.

ಆದ್ರೆ ದ್ವಿತಿಯಾರ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಯು ಮುಂಬಾ ತಂಡ ರೈಡಿಂಗ್‌ ಮೂಲಕ ಮಿಂಚಿತು. ಶೇಕಡಾ 47.5ರಷ್ಟು ಯಶಸ್ವಿ ರೈಡ್ ಪೂರೈಸುವುದರ ಜೊತೆಗೆ ಟ್ಯಾಕಲ್‌ನಲ್ಲೂ ಕೂಡ ಮೇಲುಗೈ ಸಾಧಿಸಿತು. ಪರಿಣಾಮ ಎರಡನೇ ಅವಧಿಯಲ್ಲಿ ಯು ಮುಂಬಾ 21-13 ಅಂತರದಲ್ಲಿ ಮೇಲುಗೈ ಸಾಧಿಸಿತು.

ಪಂದ್ಯದ ಕೊನೆಗೆ ಯು ಮುಂಬಾ ತಂಡವು 37-29 ಪಾಯಿಂಟ್ಸ್ ಮೂಲಕ ಪಂದ್ಯ ಜಯಿಸಿತು. ಯು ಮುಂಬಾ ಪರ 12 ಪಾಯಿಂಟ್ಸ್ ಮೂಲಕ ಮಿಂಚಿನ ಆಟ ಪ್ರದರ್ಶಿಸಿದ್ರೆ, ಹೈದರಲಿ ಎಕ್ರಮಿ 10 ಪಾಯಿಂಟ್ಸ್ ಗಳಿಸಿ ಉತ್ತಮ ಸಾಥ್ ನೀಡಿದ್ರು. ಆದ್ರೆ ಗುಜರಾತ್ ಜೈಂಟ್ಸ್ ಪರ ರಾಕೇಶ್ ಏಕಾಂಗಿ ಹೋರಾಟ ಪ್ರದರ್ಶಿಸಿ 12 ಪಾಯಿಂಟ್ಸ್‌ ಗಳಿಸಿದ್ರು. ಆಲ್‌ರೌಂಡರ್ ಪ್ರತೀಕ್ ದಹಿಯಾ 5 ಪಾಯಿಂಟ್ಸ್‌ ಮೂಲಕ ಮಿಂಚಿದರು.

ಈ ಗೆಲುವಿನೊಂದಿಗೆ ಯು ಮುಂಬಾ ಪಾಯಿಂಟ್ಸ್ ಟೇಬಲ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲಿನ ಮೂಲಕ 21 ಪಾಯಿಂಟ್ಸ್ ದಾಖಲಿಸಿ ಐದನೇ ಸ್ಥಾನ ಅಲಂಕರಿಸಿದೆ. ಮತ್ತೊಂದೆಡೆ ಗುಜರಾತ್ ಜೈಂಟ್ಸ್ ಆಡಿರುವ 7 ಪಂದ್ಯಗಳಲ್ಲಿ ತಲಾ 3 ಗೆಲುವು ಮತ್ತು ಸೋಲಿನ ಜೊತೆಗೆ 1 ಟೈನೊಂದಿಗೆ 19 ಪಾಯಿಂಟ್ಸ್‌ ದಾಖಲಿಸಿ 6ನೇ ಸ್ಥಾನಕ್ಕೆ ಕುಸಿದಿದೆ.

ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Wednesday, October 26, 2022, 21:03 [IST]
Other articles published on Oct 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+