Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ಪಾಟ್ನಾ ಪೈರೇಟ್ಸ್‌ಗೆ ಗೆಲುವಿನ ಪಂಚ್ ನೀಡಿದ ಯು ಮುಂಬಾ

U mumba vs Patna pirates

ಪುಣೆಯ ಶ್ರೀ ಶಿವಛತ್ರಪತಿ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 76ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಎದುರಾಳಿ ಪಾಟ್ನಾ ಪೈರೇಟ್ಸ್‌ ವಿರುದ್ಧ 36-23 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಮೊದಲಾರ್ಧದಲ್ಲಿ ಆಕ್ರಮಣಾಕಾರಿ ಪ್ರದರ್ಶನ ನೀಡುವ ಮೂಲಕ ಯು ಮುಂಬಾ ತಂಡವು, ರೈಡಿಂಗ್‌ನಲ್ಲಿ ಅಬ್ಬರಿಸಿದರ ಜೊತೆಗೆ ಟ್ಯಾಕಲ್‌ನಲ್ಲಿ ಮೇಲುಗೈ ಸಾಧಿಸಿತು. 18-13 ಪಾಯಿಂಟ್‌ಗಳ ಅಂತರ ಕಾಯ್ದುಕೊಂಡ ಯು ಮುಂಬಾ ತಂಡವು, ವಿರಾಮದ ಬಳಿಕ ಎದುರಾಳಿಗೆ ಬಿಟ್ಟುಕೊಡಲಿಲ್ಲ.

ದ್ವಿತಿಯಾರ್ಧದಲ್ಲಿ ಯು ಮುಂಬಾ ತಂಡವು ಪಟ್ಟು ಬಿಟ್ಟುಕೊಡದೆ ಪಾಟ್ನಾ ಪೈರೇಟ್ಸ್‌ ತಂಡವನ್ನ ಆಲೌಟ್ ಮಾಡುವ ಮೂಲಕ ಮಿಂಚಿತು. 18-10 ಪಾಯಿಂಟ್‌ಗಳ ಅಂತರ ಕಾಯ್ದುಕೊಂಡ ಯು ಮುಂಬಾ, ಒಟ್ಟು 13 ಪಾಯಿಂಟ್‌ಗಳಿಂದ ಪಂದ್ಯವನ್ನು ಜಯಿಸಿದೆ.

ಯು ಮುಂಬಾ ಪರ ಗುಮಾನ್ ಸಿಂಗ್ 13 ಪಾಯಿಂಟ್ಸ್, ಆಶಿಶ್ 6 ಪಾಯಿಂಟ್ಸ್ ಗಳಿಸಿ ರೈಡಿಂಗ್‌ನಲ್ಲಿ ಮಿಂಚಿದರು. ಡಿಫೆಂಡರ್‌ಗಳಾದ ರಿಂಕು 4, ಹರೇಂದ್ರ ಕುಮಾರ್ 3 ಪಾಯಿಂಟ್‌ ಗಳಿಸಿದರು.

ಪಾಟ್ನಾ ಪೈರೇಟ್ಸ್ ಪರ ರೋಹಿತ್ ಗುಲಿಯಾ 7, ಸಚಿನ್ 5, ಸುನಿಲ್ 3 ಪಾಯಿಂಟ್ಸ್ ಕಲೆಹಾಕಿದರು. ಈ ಗೆಲುವಿನ ಬಳಿಕ ಮೂರನೇ ಸ್ಥಾನಕ್ಕೆ ಜಿಗಿದಿದೆ. 13 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದ ಯು ಮುಂಬಾ 43 ಪಾಯಿಂಟ್ಸ್‌ಗಳ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು ಪಂದ್ಯ ಸೋತ ಪಾಟ್ನಾ ಪೈರೇಟ್ಸ್ 38 ಪಾಯಿಂಟ್ಸ್‌ ಮೂಲಕ 6ನೇ ಸ್ಥಾನದಲ್ಲಿದೆ.

ಪಿಕೆಎಲ್ 9ನೇ ಸೀಸನ್‌ನ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Story first published: Sunday, November 13, 2022, 21:33 [IST]
Other articles published on Nov 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+