Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ದಂಬಾಗ್ ಡೆಲ್ಲಿಗೆ ನೀರು ಕುಡಿಸಿದ ಯುಪಿ ಯೋಧಾ, ದಾಖಲೆಯ 50 ಪಾಯಿಂಟ್ಸ್‌

UP Yoddhas vs Dabang delhi

ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 83ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಯುಪಿ ಯೋಧಾ 50-31 ಪಾಯಿಂಟ್ಸ್‌ ಅಂತರದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ.

ಮೊದಾಲಾರ್ಧದಲ್ಲೇ ಆಕ್ರಮಣಾಕಾರಿ ಆಟವಾಡಿ ಮಿಂಚಿದ ಯುಪಿ ಯೋಧಾ ಎದುರಾಳಿಗೆ ಯಾವುದೇ ಅವಕಾಶವನ್ನ ನೀಡದೆ ಅಬ್ಬರಿಸಿತು. ಬರೋಬ್ಬರಿ 21 ರೈಡಿಂಗ್ ಪಾಯಿಂಟ್ಸ್‌ ಜೊತೆಗೆ 4 ಟ್ಯಾಕಲ್ ಮತ್ತು 4 ಆಲೌಟ್‌ ಪಾಯಿಂಟ್ಸ್‌ ಮೂಲಕ 29 ಪಾಯಿಂಟ್ಸ್‌ ಕಲೆಹಾಕಿ ಎದುರಾಳಿಗಿಂತ 15 ಪಾಯಿಂಟ್ಸ್ ಮುನ್ನಡೆ ಕಾಯ್ದುಕೊಂಡಿತು. ಇದೇ ವೇಳೆಯಲ್ಲಿ ದಬಾಂಗ್ ಡೆಲ್ಲಿ ತಂಡವು ಕೇವಲ 14 ಪಾಯಿಂಟ್ಸ್‌ ಕಲೆಹಾಕಿತು.

ವಿರಾಮದ ಬಳಿಕ ದ್ವಿತಿಯಾರ್ಧದಲ್ಲಿ ಪ್ರಬಲ ಹೋರಾಟ ನೀಡಿದ ದಬಾಂಗ್ ಡೆಲ್ಲಿ ಯುಪಿ ಯೋಧಾ ಪಾಯಿಂಟ್ಸ್ ಹತ್ತಿರಕ್ಕೂ ಬರಲು ಸಾಧ್ಯವಾಗಲಿಲ್ಲ. ಎರಡನೇ ಅವಧಿಯಲ್ಲೂ ಯುಪಿ ಯೋಧಾ ಮೇಲುಗೈ ಸಾಧಿಸಿತು 21-17 ಪಾಯಿಂಟ್ಸ್ ಅಂತರ ಕಾಯ್ದುಕೊಂಡಿತು. ಪರಿಣಾಮ ಪಂದ್ಯವನ್ನು 19 ಪಾಯಿಂಟ್ಸ್‌ಗಳಿಂದ ಗೆಲ್ಲುವ ಮೂಲಕ 50-31 ಪಾಯಿಂಟ್ಸ್‌ ಕಲೆಹಾಕಿದೆ.

ಯುಪಿ ಯೋಧಾ ಪರ ಮಿಂಚಿದ ನಾಯಕ ಪರ್ದೀಪ್ ನರ್ವಾಲ್ ಬರೋಬ್ಬರಿ 22 ಪಾಯಿಂಟ್ಸ್ ಕಲೆಹಾಕಿದರು. ಪರ್ದೀಪ್‌ಗೆ ರೈಡಿಂಗ್‌ನಲ್ಲಿ ಸಾಥ್ ನೀಡಿದ ರೋಹಿತ್ ತೋಮರ್ 7 ಪಾಯಿಂಟ್ಸ್ ಗಿಟ್ಟಿಸಿದ್ರು. ಇನ್ನು ದಬಾಂಗ್ ಡೆಲ್ಲಿ ಪರ ವಿಜಯ್ ಮಲ್ಲಿಕ್ 13, ನವೀನ್ ಕುಮಾರ್ 8 ಪಾಯಿಂಟ್ಸ್ ಕಲೆಹಾಕುವ ಮೂಲಕ ಹೋರಾಟ ಪ್ರದರ್ಶಿಸಿದರು.

ಈ ಗೆಲುವಿನ ಮೂಲಕ ಯುಪಿ ಯೋಧಾ ಪಾಯಿಂಟ್ಸ್ ಟೇಬಲ್‌ನಲ್ಲಿ ಯು ಮುಂಬಾವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಿಕೆಯಾಗಿದೆ. 14 ಪಂದ್ಯಗಳಲ್ಲಿ 7 ಗೆಲುವು ಮತ್ತು 5 ಸೋಲಿನ ಮೂಲಕ 45 ಪಾಯಿಂಟ್ಸ್ ಕಲೆಹಾಕಿದೆ. ಮತ್ತೊಂದೆಡೆ ಪಂದ್ಯವನ್ನು ಸೋತ ದಬಾಂಗ್ ಡೆಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ತಂಡವು ತಳಮುಟ್ಟಿದೆ. 14 ಪಂದ್ಯಗಳಲ್ಲಿ 6 ಗೆಲುವು , 8 ಸೋಲಿನ ಮೂಲಕ 35 ಪಾಯಿಂಟ್ಸ್ ಕಲೆಹಾಕಿದೆ.

ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Thursday, November 17, 2022, 9:15 [IST]
Other articles published on Nov 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+