ಪ್ರೊ ಕಬಡ್ಡಿ ಆಟಗಾರರ ಹರಾಜು 2022: ಬಿಡ್ಡಿಂಗ್ ಸಮಯ, ನಿಯಮಗಳನ್ನ ತಿಳಿಯಿರಿ

ಮುಂಬೈನಲ್ಲಿ ನಡೆಯಲಿರುವ ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಆಟಗಾರರ ವಿಭಾಗದಲ್ಲಿ ಇರಾನಿ ಕಬಡ್ಡಿ ಆಟಗಾರ ಫಾಜೆಲ್ ಅತ್ರಾಚಲಿ ಭಾಗವಹಿಸಲಿದ್ದು, ಅವರನ್ನು ಯಾರು ಬಿಡ್ ಮಾಡುವರು ಎಂಬ ಕುತೂಹಲ ಈಗ ಶುರುವಾಗಿದೆ.
9ನೇ ಆವೃತ್ತಿಯ ಹರಾಜು ಪ್ರಕ್ರಿಯಲ್ಲಿ ವಿದೇಶಿ ಆಟಗಾರರ ವಿಭಾಗದಲ್ಲಿ ಸುಲ್ತಾನ್ ಎಂದೇ ಖ್ಯಾತರಾಗಿರುವ ಫಾಜೆಲ್ ಅತ್ರಾಚಲಿ ಗಮನ ಸೆಳೆಯುತಿದ್ದಾರೆ. ಅವರು ಯಾವ ತಂಡಕ್ಕೆ ಸೇರಲಿದ್ದಾರೆ, ಅವರನ್ನು ಯಾರು ಬಿಡ್ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಹರಾಜಿಗೂ ಮುನ್ನ ಕೂ ಆ್ಯಪ್‌ನಲ್ಲಿ ಒಂದು ಪ್ರತ್ಯೇಕ ಪ್ರೊಮೊ ಬಿಡುಗಡೆ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ' ಸುಲ್ತಾನ್' ಫಜಲ್ ಕುರಿತಾದ ಪ್ರೊಮೊ ಪೋಸ್ಟ್ ಮಾಡಿದೆ.
ನೀವು ಯಾವ #vivoProKabaddi ಯಲ್ಲಿ ಈ ಡಿಫೆಂಡರ್ ಅನ್ನು ಯವ ತಂಡದಲ್ಲಿ ನೋಡಲು ಬಯಸುತ್ತೀರಿ?' ಎಂದು ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಪೋಸ್ಟ್ ಮಾಡಿದೆ.
ಖೇಲೋ ಇಂಡಿಯಾ ಯೂನಿವರ್ಸಿಟಿ 2021 ಗೇಮ್ಸ್‌ನ ಟಾಪರ್ಸ್
ಆಗಸ್ಟ್ 5ರಂದು ಸಂಜೆ 6.30ಕ್ಕೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ 2021 ಗೇಮ್ಸ್‌ನ ಟಾಪ್ 2 ರಲ್ಲಿರುವ 24 ಆಟಗಾರರನ್ನು ಹರಾಜಿಗೆ ಸೇರಿಸಲಾಗಿದೆ. ಈ ಆವೃತ್ತಿಯಲ್ಲಿ ಒಟ್ಟು 12 ಫ್ರಾಂಚೈಸಿಗಳು ಬಿಡ್ಡಿಂಗ್ ಮಾಡಲಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಫ್ರಾಂಚೈಸಿ ಕನಿಷ್ಠ 18 ಆಟಗಾರರು ಮತ್ತು ಗರಿಷ್ಠ 25 ಆಟಗಾರರ ಮೇಲೆ ಬಿಡ್ಡಿಂಗ್ ನಡೆಸಬಹುದು.
Commonwealth Games Day 4 Live: ಸ್ಕ್ವಾಷ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸೌರವ್ ಘೋಷಾಲ್

4 ವಿಭಾಗಗಳಲ್ಲಿ ಆಟಗಾರರ ಹರಾಜು
ಹರಾಜಿನಲ್ಲಿ ಭಾಗಿಯಾಗುವ ಆಟಗಾರರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೇಶೀಯ, ವಿದೇಶಿ ಮತ್ತು ಹೊಸ ಯುವ ಆಟಗಾರರು (NYP) ಸೇರಿದ್ದಾರೆ. ಇದರ ನಂತರ, ನಾಲ್ಕು ಉಪ-ವರ್ಗಗಳನ್ನು ರಚಿಸಲಾಗುತ್ತದೆ. A, B, C ಮತ್ತು D ಮತ್ತು ಪ್ರತಿ ವಿಭಾಗದಲ್ಲಿ ಆಟಗಾರರನ್ನು ಆಲ್-ರೌಂಡರ್‌ಗಳು, ಡಿಫೆಂಡರ್‌ಗಳು ಮತ್ತು ರೈಡರ್‌ಗಳು ಎಂದು ಉಪ ವಿಂಗಡಣೆ ಮಾಡಲಾಗುತ್ತದೆ.
"ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ವೃತ್ತಿಜೀವನದ ಆರಂಭದಲ್ಲಿ ವೈಫಲ್ಯ ಅನುಭವಿಸಿದ್ದರು"

ಪ್ರತಿ ವರ್ಗದ ಮೂಲ ಬೆಲೆ
ಎ, ಬಿ, ಸಿ, ಡಿ ಎಂದು ನಾಲ್ಕು ವರ್ಗಗಳನ್ನ ವಿಂಗಡಿಸಲಾಗಿದ್ದು, ಆಟಗಾರರ ಮೂಲ ಬೆಲೆ ಈ ಕೆಳಗೆ ತಿಳಿಸಲಾಗಿದೆ.
ಎ ವರ್ಗ - 30 ಲಕ್ಷ ರೂ
ಬಿ ವರ್ಗ - 20 ಲಕ್ಷ ರೂ
ಸಿ ವರ್ಗ - 10 ಲಕ್ಷ ರೂ
ಡಿ ವರ್ಗ - 6 ಲಕ್ಷ ರೂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
'>