ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ಗುಜರಾತ್ ತಂಡವನ್ನ ಸುಲಭವಾಗಿ ಮಣಿಸಿದ ದಬಾಂಗ್ ಡೆಲ್ಲಿ

Delhi vs Gujrat

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 81ನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್‌ ವಿರುದ್ಧ ದಬಾಂಗ್ ಡೆಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು 41-22 ಪಾಯಿಂಟ್ಸ್‌ಗ ಅಂತರದಲ್ಲಿ ಮಣಿಸುವ ಮೂಲಕ ಡೆಲ್ಲಿ ಪಂದ್ಯವನ್ನ ಗೆದ್ದು ಬೀಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ 22 ಪಾಯಿಂಟ್ಸ್ ಕಲೆಹಾಕಿದ್ರೆ, ಗುಜರಾತ್ ಜಾಯಿಂಟ್ಸ್‌ 11 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲೂ ಕೂಡ ಗುಜರಾತ್ ಜಾಯಿಂಟ್ಸ್‌ ಅನ್ನು ಹಿಂದಿಕ್ಕಿದ ದಬಾಂಗ್ ಡೆಲ್ಲಿ 19 ಪಾಯಿಂಟ್ಸ್ ಕಲೆಹಾಕಿದ್ರೆ, ತಮಿಳ್ ತಲೈವಾಸ್ ಮತ್ತೆ ಕೇವಲ 11 ಪಾಯಿಂಟ್ಸ್‌ ಮುಟ್ಟಿತು. ಕೊನೆಯಲ್ಲಿ ಪಂದ್ಯವನ್ನ ದಬಾಂಗ್ ಡೆಲ್ಲಿ 41-22 ಪಾಯಿಂಟ್ಸ್‌ಗ ಅಂತರದಲ್ಲಿ ಗೆದ್ದು ಬೀಗಿತು.

ಡೆಲ್ಲಿ ಪರ ವಿಜಯ್‌ , ಸಂದೀಪ್ ನರ್ವಾಲ್ ಮತ್ತು ಆಶು ಮಲಿಕ್‌ಗೆ ತಲಾ 6, ಕ್ರಿಶನ್ ಧುಲ್ ಮತ್ತು ಮಂಜೀತ್ ಚಿಲ್ಲರ್‌ಗೆ ತಲಾ 5 ಮತ್ತು ನೀರಜ್ ನರ್ವಾಲ್‌ಗೆ 4 ಅಂಕಗಳನ್ನ ಗಿಟ್ಟಿಸಿದ್ರು.. ಗುಜರಾತ್ ಈ ಋತುವಿನ 6ನೇ ಸೋಲಿನೊಂದಿಗೆ 11ನೇ ಸ್ಥಾನಕ್ಕೆ ಕುಸಿದಿದೆ. ತಂಡದ ಪರ ಪ್ರದೀಪ್ ಕುಮಾರ್‌ 7 ಅಂಕ, ರಾಕೇಶ್ ನರ್ವಾಲ್ ಮತ್ತು ರಾಕೇಶ್ ಸಂಗ್ರೋಯಾಗೆ ತಲಾ 3 ಅಂಕ ಗಳಿಸಿದ್ರು.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನನ್ನ ಬೆಂಬಲಿಸಿದ ಕೊಹ್ಲಿ ಬಾಲ್ಯದ ಕೋಚ್ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನನ್ನ ಬೆಂಬಲಿಸಿದ ಕೊಹ್ಲಿ ಬಾಲ್ಯದ ಕೋಚ್

ಪಂದ್ಯದಲ್ಲಿ ದಬಾಂಗ್ ಡೆಲ್ಲಿ 20 ರೈಡಿಂಗ್ ಪಾಯಿಂಟ್ಸ್ ಗಿಟ್ಟಿಸಿದ್ರೆ, 17 ಟ್ಯಾಕಲ್ ಪಾಯಿಂಟ್ಸ್ ಪಡೆಯಿತು. ಮತ್ತೊಂದೆಡೆ ಗುಜರಾತ್ ಜಾಯಿಂಟ್ಸ್ 22 ಪಾಯಿಂಟ್ಸ್ ರೈಡಿಂಗ್‌ ಮೂಲಕ ಪಡೆದ್ರೆ, ಟ್ಯಾಕಲ್‌ನಲ್ಲಿ ಎಡವಿ ಕೇವಲ 6 ಪಾಯಿಂಟ್ಸ್ ಸಂಪಾದಿಸಿತು.

ಈ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 48 ಪಾಯಿಂಟ್ಸ್ ಕಲೆಹಾಕುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೇಬಲ್ ಟಾಪರ್ ಆಗಿದೆ. 46 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಎರಡನೇ ಸ್ಥಾನದಲ್ಲಿದೆ. ಪಾಟ್ನ ಪೈರೇಟ್ಸ್ ಮೂರನೇ ಸ್ಥಾನ ಮತ್ತು ಹರಿಯಾಣ ಸ್ಟೀಲರ್ಸ್ ನಾಲ್ಕನೇ ಸ್ಥಾನ ಪಡೆದಿದೆ.

Story first published: Saturday, January 29, 2022, 22:01 [IST]
Other articles published on Jan 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X