Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಗೆಲುವು

Patna vs Tamil

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 80ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಗೆಲುವು ಸಾಧಿಸಿದ್ದು 52-24 ಪಾಯಿಂಟ್ಸ್‌ಗ ಅಂತರದಲ್ಲಿ ಮಣಿಸುವ ಮೂಲಕ ಪಾಟ್ನಾ ಪಂದ್ಯವನ್ನ ಗೆದ್ದು ಬೀಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್‌ 21 ಪಾಯಿಂಟ್ಸ್ ಕಲೆಹಾಕಿದ್ರೆ, ತಮಿಳ್ ತಲೈವಾಸ್ 12 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲೂ ಕೂಡ ತಮಿಳ್ ತಲೈವಾಸ್ ಅನ್ನು ಹಿಂದಿಕ್ಕಿದ ಪಾಟ್ನಾ ಪೈರೇಟ್ಸ್‌ 31 ಪಾಯಿಂಟ್ಸ್ ಕಲೆಹಾಕಿದ್ರೆ, ತಮಿಳ್ ತಲೈವಾಸ್ ಮತ್ತೆ ಕೇವಲ 12 ಪಾಯಿಂಟ್ಸ್‌ ಮುಟ್ಟಿತು. ಕೊನೆಯಲ್ಲಿ ಪಂದ್ಯವನ್ನ ಪಾಟ್ನಾ ಪೈರೇಟ್ಸ್‌ 52-24 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿತು.

ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಒಟ್ಟಾರೆ 21 ರೈಡಿಂಗ್ ಪಾಯಿಂಟ್ಸ್ ಪಡೆದ್ರೆ, ತಮಿಳ್ ತಲೈವಾಸ್ ಕೇವಲ 14 ಪಾಯಿಂಟ್ಸ್ ಗಿಟ್ಟಿಸಿತು. ಇನ್ನು ಟ್ಯಾಕಲ್ ವಿಚಾರದಲ್ಲೂ ಸಹ ಪಾಟ್ನಾ ಪೈರೇಟ್ಸ್ ಮುಂದಿತ್ತು. ಪಾಟ್ನಾ 21 ಟ್ಯಾಕಲ್ ಪಾಯಿಂಟ್ಸ್, 8 ಆಲೌಟ್ ಪಾಯಿಂಟ್ಸ್, 2 ಎಕ್ಸ್‌ಟ್ರಾ ಪಾಯಿಂಟ್‌ ಪಡೆದು ಮಿಂಚಿತು. ಆದ್ರೆ ತಮಿಳ್ ತಲೈವಾಸ್ ಕೇವಲ 9 ಟ್ಯಾಕಲ್ ಪಾಯಿಂಟ್ಸ್ ಪಡೆದು ಕ್ಷೇತ್ರ ರಕ್ಷಣೆಯಲ್ಲೂ ಸಹ ಎಡವಿತು.

ಪಾಟ್ನಾ ಪೈರೇಟ್ಸ್ ಪರ ಮೊನು ಗೋಯತ್ 9, ಪ್ರಶಾಂತ್ ಕುಮಾರ್ ರೈ 8, ಸಚಿನ್ 6 ಪಾಯಿಂಟ್ಸ್ ಪಡೆದರು. ತಮಿಳು ತಲೈವಾಸ್ ಪರ ಸಾಗರ್ 8, ಅಜಿಂಕ್ಯ ಪವಾರ್ 5, ಮಂಜೀತ್ 4 ಪಾಯಿಂಟ್ಸ್ ಪಡೆದರು.

ಪಾಯಿಂಟ್ಸ್ ಟೇಬಲ್‌ನಲ್ಲಿ 46 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್ ಮುಂದುವರಿದಿದೆ. ತಮಿಳ್ ತಲೈವಾಸ್ ವಿರುದ್ಧ ಗೆದ್ದ ಪಾಟ್ನಾ ಪೈರೇಟ್ಸ್‌ ಎರಡನೇ ಸ್ಥಾನಕ್ಕೆ ಜಿಗಿದಿದೆ. ದಬಾಂಗ್ ಡೆಲ್ಲಿ ಮೂರನೇ ಸ್ಥಾನದಲ್ಲಿದ್ದು, ಹರಿಯಾಣ ಸ್ಟೀಲರ್ಸ್ ನಾಲ್ಕನೇ ಸ್ಥಾನ ಪಡೆದಿದೆ.

Story first published: Friday, January 28, 2022, 23:03 [IST]
Other articles published on Jan 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+