ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಆಯೋಜನೆಗೆ ಒಲಿಂಪಿಕ್ಸ್ ಸಮಿತಿ ಒಪ್ಪಿಗೆ

ಸಿಡ್ನಿ: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಅನುಮೋದನೆ ನೀಡಿದೆ. ಈ ವರ್ಷ ಜಪಾನ್‌ನ ಟೋಕಿಯೋದಲ್ಲಿ 2020ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಇದಾಗಿ 11 ವರ್ಷಗಳ ಬಳಿಕ ವಿಶ್ವ ಮಟ್ಟದ ಕ್ರೀಡಾಕೂಟ ಆಯೋಜನೆಯ ಜವಾಬ್ದಾರಿ ಆಸ್ಟ್ರೇಲಿಯಾ ವಹಿಸಿಕೊಂಡಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್ ಆವೃತ್ತಿ ನಡೆಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅನುಮೋದನೆ ನೀಡಿದೆ. ಈ ಸಂಗತಿ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ ಎಂದು ಪ್ರಮುಖ ಮಾಧ್ಯಮ ಮೂಲಗಳು ಮಾಹಿತಿ ನೀಡಿವೆ.
'ಆಸ್ಟ್ರೇಲಿಯಾದಲ್ಲಿ 'ಬ್ರಿಸ್ಬೇನ್ 2032' ನಡೆಸಲು ಒಲಿಂಪಿಕ್ಸ್ ಕಾರ್ಯನಿರ್ವಾಹಕ ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ. ಯೋಜನೆಯ ಪ್ರತೀ ಅಂಶಗಳನ್ನು ಆಸ್ಟ್ರೇಲಿಯನ್ ಒಲಿಂಪಿಕ್ಸ್ ಸಮಿತಿ ಮತ್ತು ಅವರ ಪಾಲುದಾರರು ಪರೀಕ್ಷಿಸಲಿದ್ದಾರೆ ಎಂದು ಐಒಸಿ ತಿಳಿಸಿದೆ.
ಈ ಬಾರಿ ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರೋದು 2020ರ ಒಲಿಂಪಿಕ್ಸ್ ಕ್ರೀಡಾಕೂಟ. ಕೋವಿಡ್-19 ಕಾರಣ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತ್ತು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications