Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

5 ನಿಮಿಷದಲ್ಲಿ 2 ಬಾರಿ ರಾಷ್ಟ್ರೀಯ ದಾಖಲೆ ನಿರ್ಮಾಣ: ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಅನಿಮೇಶ್

ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಶುಕ್ರವಾರ ಸ್ಮರಣೀಯ ಕ್ಷಣವಾಗಿದೆ. ರಾಂಚಿಯಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅನಿಮೇಶ್ ಕುಜುರ್ ಮತ್ತು ಗುರಿಂದರ್‌ವೀರ್ ಸಿಂಗ್, ಕೇವಲ ಐದು ನಿಮಿಷಗಳ ಅವಧಿಯಲ್ಲಿ 100 ಮೀಟರ್ ರಾಷ್ಟ್ರೀಯ ದಾಖಲೆಯನ್ನು ಎರಡು ಬಾರಿ ಮುರಿದಿದ್ದಾರೆ. ಈ ಕ್ಷಣಕ್ಕೆ ಸಾಕ್ಷಿಯಾದ ಪ್ರೇಕ್ಷಕರು ಬೆರಗಾದರು.

100 ಮೀಟರ್ ಸೆಮಿಫೈನಲ್‌ನಲ್ಲಿ ಪ್ರತ್ಯೇಕ ಹೀಟ್ಸ್‌ಗಳಲ್ಲಿ ಓಡಲು ಇಬ್ಬರು ಓಟಗಾರರು ಟ್ರ್ಯಾಕ್‌ಗೆ ಕಣಕ್ಕೆ ಇಳಿದರು. ಮಾಜಿ ರಾಷ್ಟ್ರೀಯ ದಾಖಲೆ ಹೊಂದಿರುವ ಗುರಿಂದರ್‌ವೀರ್ ಸಿಂಗ್ ಮೊದಲ ಹೀಟ್ಸ್‌ನಲ್ಲಿ ಅಮೋಘ ಓಟ ನಡೆಸಿದರು. ಇವರು ನಿಗದಿತ ದೂರವನ್ನು 10.17 ಸೆಕೆಂಡುಗಳಲ್ಲಿ ಕ್ರಮಿಸಿ ನೂತನ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು. ಇವರು ಗ್ರೀಸ್‌ನಲ್ಲಿ ಕಳೆದ ವರ್ಷ ಅನಿಮೇಶ್ ಕುಜುರ್ (10.18 ಸೆ.) ನಿರ್ಮಿಸಿದ ದಾಖಲೆಯನ್ನು ಅಳಿಸಿ ಹಾಕಿದರು.

5-Minute

ಈ ದಾಖಲೆ ನಿರ್ಮಾಣವಾದ ಐದು ನಿಮಿಷಗಳ ಬಳಿಕ ಅನಿಮೇಶ್ ಕುಜುರ್ ಕಣಕ್ಕೆ ಇಳಿದರು. ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಇವರು ಗುರಿಯನ್ನು ಕೇವಲ 10.15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಬಳಿಕ ಎಲ್ಲರೂ ದಿಗ್ಭ್ರಮೆಗೊಂಡರು. ಅನಿಮೇಶ್ ಗುರಿಂದರ್‌ವೀರ್ ಅವರ ಐದು ನಿಮಿಷಗಳ ಹಳೆಯ ದಾಖಲೆಯನ್ನು ಮುರಿದರು. ಇದು ಅನಿಮೇಶ್ ಅವರ ಹೊಸ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾತ್ರವಲ್ಲದೆ ಹೊಸ ರಾಷ್ಟ್ರೀಯ ದಾಖಲೆ ಸಹ ಆಗಿದೆ. ಇಬ್ಬರು ಸ್ಟಾರ್ ಅಥ್ಲೀಟ್‌ಗಳು ಐದು ನಿಮಿಷಗಳ ಅಂತರದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ

ಫೆಡರೇಶನ್ ಕಪ್ ರಾಷ್ಟ್ರೀಯ ಸ್ಪರ್ಧೆ ಮಾತ್ರವಲ್ಲ, ಈ ಸ್ಪರ್ಧೆ ಮುಂದೆ ಬರುವ ಕಾಮನ್‌ವೆಲ್ತ್‌ 2026 ಕ್ರೀಡಾಕೂಟದ ದೃಷ್ಟಿಯಿಂದಲೂ ಮಹತ್ವದಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಗೆ ಅರ್ಹತೆ ಪಡೆಯಲು ಓಟಗಾರರು 10.16 ಸೆಕೆಂಡುಗಳಲ್ಲಿ ನಿಗದಿತ ದೂರವನ್ನು ಕ್ರಮಿಸಬೇಕಿತ್ತು. ಅನಿಮೇಶ್ ಕುಜುರ್ ಕಠಿಣ ಅರ್ಹತಾ ಸಮಯವನ್ನು ಕ್ರಮಿಸಿದರೆ, ಗುರಿಂದರ್‌ವೀರ್ ಸಿಂಗ್ 0.01 ಸೆಕೆಂಡುಗಳ ಅಂತರದಿಂದ ಕಾಮನ್‌ವೆಲ್ತ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕೈ ಚೆಲ್ಲಿದರು.

Story first published: Friday, May 22, 2026, 23:28 [IST]
Other articles published on May 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+