Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬಿಲ್ಲುಗಾರಿಕೆಯಲ್ಲಿ ಭಾರತದ ಅಭಿಷೇಕ್ ಗೆ ಚಿನ್ನ

ಬೆಂಗಳೂರು, ಆಗಸ್ಟ್ 16: ಪೋಲ್ಯಾಂಡಿನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಸ್ಪರ್ಧೆಯಲಿ ಭಾರತದ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆರ್ಚರಿ ವಿಶ್ವಕಪ್ ಟೂರ್ನಿ (ಮೂರನೇ ಹಂತ)ಯಲ್ಲಿ ಅಧಿಕ ಅಂಕಗಳಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಅಭಿಷೇಕ್ ವರ್ಮಾ ಅವರು ವೈಯಕ್ತಿಕ ವಿಭಾಗದ ಫೈನಲ್ಸ್ ನಲ್ಲಿ ಒಟ್ಟು 148 ಅಂಕಗಳನ್ನು ಕಲೆ ಹಾಕಿ, ಪ್ರತಿಸ್ಪರ್ಧಿ ಇರಾನಿನ ಇಸ್ಮಾಯಿಲ್ ಎಬಾದಿ ಅವರನ್ನು 148-145 ಅಂಕಗಳ ಅಂತರದಿಂದ ಸೋಲಿಸಿದರು.

Abhishek Verma get gold for India in Archery World Cup

ಭಾರತದ ದೀಪಿಕಾ ಕುಮಾರಿ ಹಾಗೂ ಮಂಗಲ್ ಸಿಂಗ್ ಜೋಡಿ, ಪಂದ್ಯಾವಳಿಯ ರಿಕರ್ವ್ ಮಿಶ್ರ ವಿಭಾಗದಲ್ಲಿ ಫೈನಲ್ ತಲುಪಿದ್ದು, ಭಾನುವಾರ ನಡೆಯುವ ಮುಖಾಮುಖಿಯಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.[ಕ್ರೀಡಾಳುಗಳಿಗೂ ಇಂತಹ ಸೌಲಭ್ಯ ಸಿಕ್ಕರೆ?]

ಸೆಮಿಫೈನಲ್‌ನಲ್ಲಿ ಅಮೆರಿಕದ ಸ್ಟೀವ್‌ ಆಂಡರ್ಸನ್ ಅವರನ್ನು ಅಭಿಷೇಕ್ ಸೋಲಿಸಿದ್ದರು. ಅಭಿಷೇಕ್‌ 146 ಅಂಕ ಗಳಿಸಿದರೆ, ಆಂಡರ್ಸನ್ 145 ಅಂಕಗಳಿಸಿದ್ದರು. ರೋಚಕ ಸೆಮಿಫೈನಲ್ ಗೆದ್ದ ಅಭಿಷೇಕ್ ಅವರು ಅಂತಿಮ ಹಣಾಹಣಿಯಲ್ಲೂ ಉತ್ತಮ ಪ್ರದರ್ಶನ ಮುಂದುವರೆಸಿದರು. [ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕನ್ನಡಿಗ ಶೂಟರ್ ಪ್ರಕಾಶ್ ನಂಜಪ್ಪ]

ಕಳೆದ ಏಷ್ಯಾಡ್ ನಲ್ಲಿ ಅಭಿಶೇಕ್ ವರ್ಮಾ, ರಜತ್ ಚೌವ್ಹಾಣ್ ಮತ್ತು ಸಂದೀಪ್ ಕುಮಾರ್ ಅವರನ್ನೊಳಗೊಂಡ ತಂಡ 227-225 ಅಂತರದಲ್ಲಿ ಜಯ ಸಾಧಿಸುವ ಮೂಲಕ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. (ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+