ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕನ್ನಡಿಗ ಶೂಟರ್ ಪ್ರಕಾಶ್ ನಂಜಪ್ಪ

By Mahesh

ನವದೆಹಲಿ, ಆಗಸ್ಟ್ 11: ಬೆಂಗಳೂರು ಮೂಲದ ಕನ್ನಡಿಗ ಪ್ರಕಾಶ್ ನಂಜಪ್ಪ ಅವರು 2016 ರ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಅಜರ್ ಬೈಜಾನ್ ಗಬಾಲದಲ್ಲಿ ನಡೆದಿರುವ ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯ 50 ಮೀಟರ್ ಪುರುಷರ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಪ್ರಕಾಶ್ ನಂಜಪ್ಪ ಅವರು 8ನೇ ಸ್ಥಾನ ಪಡೆದುಕೊಂಡಿದ್ದಾರೆ. 39 ವರ್ಷ ವಯಸ್ಸಿನ ಪ್ರಕಾಶ್ ಅವರು ಅರ್ಹತಾ ಸುತ್ತಿನಲ್ಲಿ 567 ಅಂಕಗಳೊಂದಿಗೆ 2ನೇ ಸ್ಥಾನಗಳಿಸಿದರು. [ಚಾಂಪಿಯನ್ ಆಫ್ ಚಾಂಪಿಯನ್]

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕ ಹಾಗೂ ಭಾರತಕ್ಕೆ ಕೀರ್ತಿ ತಂದ ಶೂಟರ್ ಪ್ರಕಾಶ್ ನಂಜಪ್ಪ ಅವರಿಗೆ ಚಾಂಪಿಯನ್ ಆಫ್ ಚಾಂಪಿಯನ್ ಎಂಬ ಕಿರೀಟ ತೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Prakash Nanjappa wins India's 6th shooting quota place for Rio Olympics


58ನೇ ರಾಷ್ಟ್ರೀಯ ಶೂಟಿಂಗ್ ಶೂಟಿಂಗ್ ಚಾಂಪಿಯನ್ ಶಿಪ್ ಗೆದ್ದ ಪ್ರಕಾಶ್ ಅವರಿಗೆ ರಾಷ್ಟ್ರೀಯ ರೈಫಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್ ಆರ್ ಎಐ) ಈ ಹಿಂದೆ ಗೌರವಿಸಿತ್ತು.

ಇದಕ್ಕೂ ಮುನ್ನ 2013ರಲ್ಲಿ ದಕ್ಷಿಣ ಕೊರಿಯಾದ ಚಂಗ್ವಾನ್ ನಲ್ಲಿ ನಡೆದ ಐಎಸ್ ಎಸ್ ಎಫ್ ವಿಶ್ವಕಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಇವೆಂಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರ ಪಾರ್ಶ್ವವಾಯು ಪೀಡಿತರಾಗಿ ಕ್ರೀಡೆಯಿಂದ ಹೊರಗುಳಿಯಬೇಕಾಯಿತು. ತೆಹರಾನ್ ನಲ್ಲಿ ನಡೆದ 50 ಮೀಟರ್ ಪಿಸ್ತೂಲ್ ಇವೆಂಟ್ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದರು. [ಕರ್ನಾಟಕದ ಹೆಮ್ಮೆಯ ಶೂಟರ್ ಪ್ರಕಾಶ್]

ಬೆಲ್ಸ್ ಪಾಲ್ಸಿ (ಒಂದು ಬಗೆಯ ಮೌಖಿಕ ಪಾರ್ಶ್ವವಾಯು) ಗೆ ತುತ್ತಾಗಿ ಕ್ರೀಡೆಯಿಂದ ಹೊರಗುಳಿದಿದ್ದ ಪ್ರಕಾಶ್ ಅವರು ಮತ್ತೊಮ್ಮೆ ಶೂಟಿಂಗ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೆನಡಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲ ಕಾಲ ದುಡಿದಿದ್ದ ಪ್ರಕಾಶ್ ಅವರು ಈಗ ಒಲಿಂಪಿಕ್ಸ್ ನಲ್ಲಿ ತಮ್ಮ ಸಾಧನೆ ತೋರಲು ಸಿದ್ಧರಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X