Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಸ್ನೂಕರ್ ಟೂರ್: ಬಂಗಾರ ಗೆದ್ದು ಇತಿಹಾಸ ಬರೆದ ಪಂಕಜ್ ಅಡ್ವಾಣಿ

Advani storms past Ju Reti to clinch gold in the Asian Snooker Tour event

ಬೆಂಗಳೂರು, ಅಕ್ಟೋಬರ್ 31: ಚೀನಾದ ಜಿನಾನ್ ನಲ್ಲಿ ಬುಧವಾರ (ಅಕ್ಟೋಬರ್ 31) ನಡೆದ ಏಷ್ಯನ್ ಟೂರ್ ಸ್ನೂಕರ್ ಸ್ಪರ್ಧೆಯಲ್ಲಿ ಭಾರತದ ಪಂಕಜ್ ಅಡ್ವಾಣಿ ಬಂಗಾರ ಜಯಿಸಿದ್ದಾರೆ. ಏಷ್ಯನ್ ಸ್ನೂಕರ್ ಟೂರ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಹಿರಿಮೆಗೂ ಪಂಕಜ್ ಪಾತ್ರರಾಗಿದ್ದಾರೆ.

ಬುಧವಾರ ನಡೆದ ಫುರುಷರ ಫೈನಲ್ ಸ್ಪರ್ಧೆಯಲ್ಲಿ ಪಂಕಜ್ ಅವರು ಚೀನಾದ ಜು ರೆಟಿ ಅವರನ್ನು 6-1 ಅಂತರದಿಂದ ಸೋಲಿಸುವ ಮೂಲಕ ಬಂಗಾರಕ್ಕೆ ಕೊರಳೊಡ್ಡಿದರು. ಈ ಮೂಲಕ 19 ಬಾರಿಯ ವಿಶ್ವ ಚಾಂಪಿಯನ್ ಅಡ್ವಾಣಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು.

ಪಂಕಜ್ ಅಡ್ವಾಣಿ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದು 2003ರಲ್ಲಿ. ಅದೂ ಚೀನಾದಲ್ಲೇ. ಈಗ 2018ರಲ್ಲಿ ಅಂದರೆ 15 ವರ್ಷಗಳ ಬಳಿಕ ಚೀನಾ ನೆಲದಲ್ಲೇ ಅಡ್ವಾಣಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.

Story first published: Wednesday, October 31, 2018, 17:16 [IST]
Other articles published on Oct 31, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+