For Quick Alerts
ALLOW NOTIFICATIONS  
For Daily Alerts

ಅರ್ಜುನ ಪ್ರಶಸ್ತಿಗೆ ಕನ್ನಡದ ಕುವರ ರೋಹನ್ ಬೋಪಣ್ಣ ಹೆಸರು ಶಿಫಾರಸು

ನವದೆಹಲಿ, ಜೂನ್ 09 : ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ ಟೆನಿಸ್ ಪಟು ಕನ್ನಡಿಗ ರೋಹನ್ ಬೋಪಣ್ಣ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನ್ನಿಸ್ ಸಂಸ್ಥೆ(ಎಐಟಿಎ) ನಿರ್ಧರಿಸಿದೆ.

ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಅವರನ್ನು ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಈ ಹಿಂದೆಯೂ ಹಲವು ಬಾರಿ ಅರ್ಜುನ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ. ಆದರೆ, ಅವರ ಹೆಸರನ್ನು ಪರಿಗಣಿಸಿಲ್ಲ. ಈ ಬಾರಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲೇಬೇಕು ಎಂದು ಎಐಟಿಎ ಕಾರ್ಯದರ್ಶಿ ಜನರಲ್ ಹಿರೊನ್ಮೊಯ್ ಚಟರ್ಜಿ ಅವರು ಹೇಳಿದ್ದಾರೆ.

[ಫ್ರೆಂಚ್ ಓಪನ್ ಗೆದ್ದ ಕರುನಾಡ ಹೆಮ್ಮೆಯ ಟೆನಿಸ್ ಪಟು ಬೋಪಣ್ಣ]

AITA to Recommend Bopanna's Name for Arjuna Award

ರೋಹನ್ ಬೋಪಣ್ಣ ಅವರೊಂದಿಗೆ ರುಶ್ಮಿ ಚಕ್ರವರ್ತಿ ಅವರ ಹೆಸರನ್ನು ಸಹ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿನ್ನೆ (ಜೂನ್ 08) ಬೋಪಣ್ಣ ಹಾಗೂ ಕೆನಡಾದ ಗೇಬ್ರಿಯೆಲಾ ದಬ್ರೋವ್ ಸ್ಕಿ ಜೋಡಿ ಫ್ರೆಂಚ್‌ ಓಪನ್‌ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಜಯಗಳಿಸಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆ ಮುತ್ತಿಟ್ಟರು.

[ಅರ್ಜುನ ಪ್ರಶಸ್ತಿಗೆ ಬೆಂಗಳೂರಿನ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌]

ಈ ಮೂಲಕ ಲಿಯಾಂಡರ್‌ ಫೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+