Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂತ್ ಒಲಿಂಪಿಕ್ಸ್: ರೈತನ ಮಗ ಆಕಾಶ್ ಮಲಿಕ್ ಗೆ ಆರ್ಚರಿಯಲ್ಲಿ ಬೆಳ್ಳಿ

Akash Malik claims India’s maiden archery silver at Youth Olympics

ಬ್ಯೂನಸ್ ಏರ್ಸ್, ಅಕ್ಟೋಬರ್ 18: ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನಲ್ಲಿ ನಡೆದ ಯೂತ್ ಒಲಿಂಪಿಕ್ಸ್ ಗೇಮ್ಸ್ ಬಾಲಕರ ಆರ್ಚರಿಯಲ್ಲಿ ಭಾರತದ ಆಕಾಶ್ ಮಲಿಕ್ ಬೆಳ್ಳಿ ಪದಕ ಜಯಿಸಿದ್ದಾರೆ. ಯೂತ್ ಒಲಿಂಪಿಕ್ಸ್ ಆರ್ಚರಿ (ಬಿಲ್ಲುಗಾರಿಕೆ) ಯಲ್ಲಿ ಭಾರತಕ್ಕೆ ಬೆಳ್ಳಿ ಲಭಿಸಿದ್ದು ಇದೇ ಮೊದಲಬಾರಿ.

15ರ ಹರೆಯದ ಆಕಾಶ್ ರೈತನ ಮಗ ಎನ್ನುವುದೂ ಗಮನಾರ್ಹ. ಆಕಾಶ್ ತಂದೆ ಪುಣೆಯಲ್ಲಿ ಗೋಧಿ ಮತ್ತು ಹತ್ತಿ ಕೃಷಿ ಮಾಡುತ್ತ ಕೈಗೆ ಮಣ್ಣು ಮೆತ್ತಿಕೊಂಡು ಖುಷಿಪಡುವವರು. ಪದಕ ಸ್ವೀಕರಿಸಿ ಮಾತನಾಡಿದ ಆಕಾಶ್, 'ಗಾಳಿ ಬೀಸುವಿಕೆಯ ನಡುವೆಯೇ ನಾನು ಅಭ್ಯಾಸ ಮಾಡಿದ್ದೆ, ಆದರೆ ಇಲ್ಲಿ ಗಾಳಿ ಬೀಸುವಿಕೆ ಇನ್ನೂ ಜೋರಿತ್ತು' ಎಂದರು.

ಇದೇ ವಿಭಾಗದ ಬಂಗಾರದ ಪದಕ ಯುಎಸ್‌ಎಯ ಟ್ರೆಂಟನ್ ಕೋಲೆಸ್ ಪಾಲಾಯಿತು. ಗೇಮ್ಸ್ ಇಂದಿಗೆ ಕೊನೆಗೊಳ್ಳುತ್ತಿದ್ದು, ಭಾರತ ಒಟ್ಟು ಮೂರು ಬಂಗಾರ, ಒಂಭತ್ತು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದೆ. ಅಕ್ಟೋಬರ್ 6ರಿಂದ ಆರಂಭಗೊಂಡ ಈ ಕ್ರೀಡಾಕೂಟಕ್ಕೆ ಇಂದು (ಅಕ್ಟೋಬರ್ 18) ತೆರೆ ಬೀಳಲಿದೆ.

Story first published: Thursday, October 18, 2018, 13:31 [IST]
Other articles published on Oct 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+