Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 3 ಪದಕ ಗೆದ್ದ ಶೀತಲ್ ದೇವಿಗೆ 'ಮಹೀಂದ್ರಾ' ಕಾರು ಗಿಫ್ಟ್ ನೀಡಿದ 'ಆನಂದ್'!

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಆರ್ಚರಿ ಪಟು ಶೀತಲ್ ದೇವಿ ಉತ್ತಮ ಪ್ರದರ್ಶನ ನೀಡಿ 2 ಚಿನ್ನ ಸೇರಿ 3 ಪದಕಗಳಿಗೆ ಕೊರಳೊಡ್ಡಿದಳು.

ಎರಡು ಕೈಗಳಿಲ್ಲದ ಹೊರತಾಗಿಯೂ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಸೇರಿ 3 ಪದಕ ಗೆದ್ದ ಶೀತಲ್ ದೇವಿ ಸಾಧನೆಗೆ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಮನಸೋತಿದ್ದು, ಆಕೆಗೆ ಮಹೀಂದ್ರಾ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.

Anand Mahindra Gifted A Car To Sheetal Devi Who Won 3 Medals in the Asian Para Games 2023

ಈ ಬಗ್ಗೆ ಎಕ್ಸ್‌ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, "ಶೀತಲ್ ದೇವಿ ನಮಗೆಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ. ನಮ್ಮ ಬ್ರ್ಯಾಂಡ್‌ನ ಯಾವುದೇ ಕಾರನ್ನು ನೀವು ಆಯ್ಕೆ ಮಾಡಿ, ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿ ಕೊಡುತ್ತೇವೆ," ಎಂದು ಶೀತಲ್‌ಗೆ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೀತಲ್ ದೇವಿ ಏಷ್ಯನ್ ಪ್ಯಾರಾ ಗೇಮ್ಸ್‌ನ ವೈಯಕ್ತಿಕ, ಮಿಶ್ರ ತಂಡ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ.

ಎರಡೂ ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸಿದ್ದ ಶೀತಲ್ ದೇವಿ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 2ನೇ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಶುಕ್ರವಾರದಂದು ಜಮ್ಮು-ಕಾಶ್ಮೀರದ 16 ವರ್ಷದ ಶೀತಲ್ ದೇವಿ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇದಕ್ಕೂ ಮುನ್ನ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.

ಇದೇ ವೇಳೆ ಶೀತಲ್ ದೇವಿ ಎರಡೂ ಕೈಗಳಿಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ.

ಭಾರತದ ಕ್ರೀಡಾಪಟುಗಳು 2023ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ 111 ಪದಕಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಯಾವುದೇ ಅಂತಾರಾಷ್ಟ್ರೀಯ ಬಹು-ಕ್ರೀಡೆಯನ್ನೊಳಗೊಂಡ ಕೂಟದಲ್ಲಿ ಭಾರತದ ಗರಿಷ್ಠ ಪದಕ ಸಾಧನೆ ಎನಿಸಿದೆ.

ಈವರೆಗೆ 29 ಚಿನ್ನ, 31 ಬೆಳ್ಳಿ, 51 ಕಂಚಿನ ಪದಕಗಳನ್ನು ಗೆದ್ದಿರುವ ಭಾರತದ ಪ್ಯಾರಾ ಅಥ್ಲೀಟ್‌ಗಳು, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದಿದ್ದ 107 ಪದಕಗಳ ದಾಖಲೆಯನ್ನು ಮುರಿದರು.

ಏಷ್ಯನ್‌ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಅಗ್ರ-5ರಲ್ಲಿ ಸ್ಥಾನ ಪಡೆಯಿತು. 214 ಚಿನ್ನ ಸೇರಿ ಒಟ್ಟು 521 ಪದಕ ಗೆದ್ದ ಚೀನಾ ಅಗ್ರಸ್ಥಾನದೊಂದಿಗೆ ಅಭಿಯಾನ ಮುಗಿಸಿತು.

Story first published: Monday, October 30, 2023, 20:35 [IST]
Other articles published on Oct 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+