ಏಷ್ಯನ್ ಕ್ರೀಡಾಕೂಟ: ಮೊದಲ ದಿನವೇ 'ಚಿನ್ನದ' ಆರಂಭ
ಇಂಚಿಯಾನ್, (ದಕ್ಷಿಣ ಕೋರಿಯಾ) ಸೆ. 20: 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. 50 ಮೀ.ಪಿಸ್ತೂಲ್‌ನಲ್ಲಿ ಐತಿಹಾಸಿಕ ಚಿನ್ನ ಗೆಲ್ಲುವ ಮೂಲಕ ಭಾರತದ ಪದಕ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.
ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶನಿವಾರ ಬೆಳಗ್ಗೆ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಜೀತು ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಆದರೆ ಇದಕ್ಕೂ ಮುನ್ನ 10ಮೀ ಪಿಸ್ತೂಲ್ ವಿಭಾಗದಲ್ಲಿ ಶ್ವೇತಾ ಚೌದರಿ ಕಂಚು ಗೆದ್ದು ಭಾರತದ ಪದಕಗಳ ಖಾತೆ ತೆರೆದಿದ್ದರು.(ಏಷ್ಯನ್ ಗೇಮ್ಸ್ ಗೆ ಸಾನಿಯಾ, ಪೇಸ್, ಬೋಪಣ್ಣ ಇಲ್ಲ)

ಈ ಮೂಲಕ ಪದಕ ಪಟ್ಟಿಯಲ್ಲಿ ಚೀನಾ, ಕೊರಿಯಾದ ಬಳಿಕ ಭಾರತ ಸದ್ಯ ಮೂರನೇ ಸ್ಥಾನದಲ್ಲಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 50 ಮೀ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಲಕ್ನೋ ಮೂಲದ ಶೂಟರ್ ಜೀತು ರಾಯ್ ಉತ್ತಮ ಪ್ರದರ್ಶನ ನೀಡಿ ಇಲ್ಲಿ ಚಿನ್ನದ ಬೇಟೆಯಾಡಿದರು. ಜೀತು ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದಿದ್ದರು.(ಏಷ್ಯನ್ ಗೇಮ್ಸ್ ನಿಂದ ಕಾಲ್ತೆಗೆದ ಜ್ವಾಲಾ ಗುಟ್ಟಾ)
ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಜೀತುಗೆ ಫೈನಲ್ ಹಂತದಲ್ಲಿ ವಿಯೆಟ್ನಾಂನ ನ್ಗುಯೇನ್ ಹೋಂಗ್ ಪಾಂಗ್ ತೀವ್ರ ಪ್ರತಿಸ್ಪರ್ಧೆ ನೀಡಿದರು. ಜೀತು ಒಟ್ಟು 186.2 ಪಾಯಿಂಟ್ ದಾಖಲಿಸಿದರೆ , ಪಾಂಗ್ 183.4 ಹಾಗೂ ವಾಂಗ್ 165.6 ಪಾಯಿಂಟ್ ಸಂಪಾದಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications