For Quick Alerts
ALLOW NOTIFICATIONS  
For Daily Alerts

Asian Games 2023: ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ; ಚೊಚ್ಚಲ ಬಾರಿಗೆ 100 ಪದಕಗಳ ಸಾಧನೆ ಮಾಡಿದ ಭಾರತ

ಶನಿವಾರ, ಅಕ್ಟೋಬರ್ 7ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿ ಸ್ಪರ್ಧೆಯ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ ಚಿನ್ನ ಪದಕಕ್ಕೆ ಕೊರಳೊಡ್ಡಿತು.

ಈ ಮೂಲಕ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳ ಗಡಿ ಮುಟ್ಟಿದೆ. ಏಷ್ಯನ್ ಗೇಮ್ಸ್ 2023ರಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ ಮತ್ತು ಪದಕಗಳ ಶತಕ ಬಾರಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

Asian Games 2023: Gold Medal For India in Womens Kabaddi; India Achieved 100 Medals For The First Time

ಶನಿವಾರ ಮುಂಜಾನೆ ಭಾರತೀಯ ತಂಡವು ಆರ್ಚರಿಯಲ್ಲಿ 2 ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕಗಳು ಮತ್ತು ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಈವರೆಗೆ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚು ಸೇರಿದಂತೆ 100 ಪದಕಗಳನ್ನು ಗೆಲ್ಲುವ ಮೂಲಕ 100 ಪದಕಗಳ ಐತಿಹಾಸಿಕ ದಾಖಲೆಯನ್ನು ಮುಟ್ಟಿತು.

ಶನಿವಾರ ಮುಂಜಾನೆ ಬಿಲ್ಲುಗಾರರಾದ ಪ್ರವೀಣ್ ಓಜಸ್ ಮತ್ತು ಜ್ಯೋತಿ ವೆನ್ನಮ್ ತಮ್ಮ ವೈಯಕ್ತಿಕ ಕಾಂಪೌಂಡ್ ಆರ್ಚರಿ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದರೆ, ಇದೇ ವೇಳೆ ಅಭಿಷೇಕ್ ವರ್ಮಾ ಬೆಳ್ಳಿ ಮತ್ತು ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

ಕೆಲವೇ ಕ್ಷಣಗಳ ನಂತರ, ಭಾರತ ಮಹಿಳಾ ಕಬಡ್ಡಿ ತಂಡವು ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಭಾರತಕ್ಕೆ 100 ಪದಕ ಗಳಿಸಲು ನೆರವಾಯಿತು.

ಇಲ್ಲಿಯವರೆಗೆ ಶೂಟಿಂಗ್ ಮತ್ತು ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಭಾರತ ಕ್ರಮವಾಗಿ 22 ಮತ್ತು 29 ಪದಕಗಳನ್ನು ಗೆದ್ದಿದೆ. ಏಷ್ಯನ್ ಗೇಮ್ಸ್ 2023ರಲ್ಲಿ ಭಾರತವು ರೋಯಿಂಗ್‌ನಲ್ಲಿ 5 ಪದಕಗಳನ್ನು, ಸೈಲಿಂಗ್‌ನಲ್ಲಿ 3 ಪದಕಗಳನ್ನು ಗೆದ್ದಿದೆ. ಇತರ ಪದಕಗಳು ಅನೇಕ ವಿಭಾಗಗಳಲ್ಲಿ ಬಂದಿವೆ.

ಮಹಿಳಾ ಕಬಡ್ಡಿಯಲ್ಲಿ ಐತಿಹಾಸಿಕ ಚಿನ್ನದ ಪದಕ
ಏಷ್ಯನ್ ಗೇಮ್ಸ್‌ನ 2018ರ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು, ತಮ್ಮ ಚಿನ್ನದ ಪದಕವನ್ನು ಮರಳಿ ಪಡೆದರು. ಭಾರತ ವನಿತೆಯರ ತಂಡ ಮೊದಲಾರ್ಧದಲ್ಲಿ ಬಲಿಷ್ಠವಾಗಿ ಆರಂಭಗೊಂಡು 14-9 ಅಂತರದಲ್ಲಿ 5 ಅಂಕಗಳ ಮುನ್ನಡೆ ಸಾಧಿಸಿತು.

ಎದುರಾಳಿ ಚೈನೀಸ್ ತೈಪೆ ಪಂದ್ಯದ ದ್ವಿತೀಯಾರ್ಧದಲ್ಲಿ ಅದ್ಭುತ ಪುನರಾಗಮನದ ಪ್ರದರ್ಶನದೊಂದಿಗೆ ಪ್ರತಿರೋಧ ಒಡ್ಡಿತು. ಭಾರತ ವಿರುದ್ಧ ಪ್ರತಿ ದಾಳಿಯೊಂದಿಗೆ ಪಂದ್ಯದ ಕೊನೆಯವರೆಗೂ ಪ್ರಬಲ ಪೈಪೋಟಿ ನೀಡಿತು.

ಚೈನೀಸ್ ತೈಪೆ ತಂಡವು ಒಂದು ಹಂತದಲ್ಲಿ ಎಲ್ಲಾ ಭಾರತೀಯ ಆಟಗಾರರನ್ನು ಅಂಕಣದಿಂದ ಹೊರಹಾಕಿತು. ಈ ವೇಳೆ 2 ಹೆಚ್ಚುವರಿ ಅಂಕಗಳನ್ನು ಗೆದ್ದಿತು. ಆದಾಗ್ಯೂ, ಭಾರತ ಮಹಿಳಾ ತಂಡವು ಅದ್ಭುತವಾಗಿ ಪುನರಾಗಮನ ಮಾಡಿ ಅಂತಿಮವಾಗಿ 26-25 ಅಂತರದಿಂದ ಗೆದ್ದುಬೀಗಿತು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ವಿಜೇತರು (ಚಿನ್ನ)

1) ಭಾರತ ಪುರುಷರ ಕಬಡ್ಡಿ ತಂಡ

2) ಭಾರತ ಪುರುಷರ ಕ್ರಿಕೆಟ್ ತಂಡ

3) ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ - ಬ್ಯಾಡ್ಮಿಂಟನ್ ಡಬಲ್ಸ್

4) ಮಹಿಳಾ ಕಬಡ್ಡಿ ತಂಡ

5) ಓಜಸ್ ಪ್ರವೀನ್ ಡಿಯೋಟಾಲೆ - ಪುರುಷರ ಸಂಯುಕ್ತ ಬಿಲ್ಲುಗಾರಿಕೆ (ವೈಯಕ್ತಿಕ)

6) ಜ್ಯೋತಿ ಸುರೇಖಾ ವೆನ್ನಂ - ಮಹಿಳೆಯರ ಸಂಯುಕ್ತ ಬಿಲ್ಲುಗಾರಿಕೆ (ವೈಯಕ್ತಿಕ)

7) ಪುರುಷರ ಹಾಕಿ ತಂಡ

8) ಜ್ಯೋತಿ ಸುರೇಖಾ ವೆನ್ನಂ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ - ಸಂಯುಕ್ತ ಬಿಲ್ಲುಗಾರಿಕೆ (ಮಿಶ್ರ ತಂಡ)

9) ಜ್ಯೋತಿ ಸುರೇಖಾ ವೆನ್ನಂ, ಅದಿತಿ ಗೋಪಿಚಂದ್ ಸ್ವಾಮಿ, ಪರ್ನೀತ್ ಕೌರ್ - ಸಂಯುಕ್ತ ಬಿಲ್ಲುಗಾರಿಕೆ (ಮಹಿಳಾ ತಂಡ)

10) ಓಜಸ್ ಪ್ರವೀಣ್ ಡಿಯೋಟಾಲೆ, ಪ್ರಥಮೇಶ್ ಜಾವ್ಕರ್, ಅಭಿಷೇಕ್ ವರ್ಮಾ ಸಂಯುಕ್ತ ಬಿಲ್ಲುಗಾರಿಕೆ (ಪುರುಷರ ತಂಡ)

11) ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್, ರಾಜೇಶ್ ರಮೇಶ್ - ಪುರುಷರ 4x400 ಮೀ ರಿಲೇ - ಅಥ್ಲೆಟಿಕ್ಸ್

12) ನೀರಜ್ ಚೋಪ್ರಾ - ಪುರುಷರ ಜಾವೆಲಿನ್ ಥ್ರೋ

13) ಅವಿನಾಶ್ ಸಾಬ್ಳೆ - ಪುರುಷರ 3000 ಮೀ ಸ್ಟೀಪಲ್ ಚೇಸ್

14) ತಜಿಂದರ್‌ಪಾಲ್ ಸಿಂಗ್ ತೂರ್ - ಪುರುಷರ ಶಾಟ್‌ಪುಟ್

15) ಪಾರುಲ್ ಚೌಧರಿ - ಮಹಿಳೆಯರ 5000 ಮೀ ಓಟ

16) ಅನ್ನು ರಾಣಿ - ಮಹಿಳೆಯರ ಜಾವೆಲಿನ್ ಥ್ರೋ

17) ಭಾರತ ಮಹಿಳಾ ಕ್ರಿಕೆಟ್ ತಂಡ

18) ಕುದುರೆ ಸವಾರಿ - ಡ್ರೆಸ್ಸೇಜ್ ತಂಡ

19) ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ, ಶಿವ ನರ್ವಾಲ್ - ಪುರುಷರ 10 ಮೀ ಏರ್ ಪಿಸ್ತೂಲ್ (ತಂಡ)

20) ಐಶ್ವರಿ ಪ್ರತಾಪ್ ಸಿಂಗ್ ತೋಮರ್, ರುದ್ರಂಕ್ಷ್ ಪಾಟೀಲ್, ದಿವ್ಯಾಂಶ್ ಸಿಂಗ್ ಪನ್ವಾರ್ - ಪುರುಷರ 10 ಮೀ ಏರ್ ರೈಫಲ್ (ತಂಡ)

21) ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ - ಪುರುಷರ 50 ಮೀ ರೈಫಲ್ 3 ಸ್ಥಾನ (ತಂಡ)

22) ಪಾಲಕ್ ಗುಲಿಯಾ - ಮಹಿಳೆಯರ 10 ಮೀ ಏರ್ ಪಿಸ್ತೂಲ್

23) ಮನು ಭಾಕರ್, ಇಶಾ ಸಿಂಗ್, ರಿದಮ್ ಸಾಂಗ್ವಾನ್ - ಮಹಿಳೆಯರ 25 ಮೀ ಏರ್ ಪಿಸ್ತೂಲ್ (ತಂಡ)

24) ಸಿಫ್ಟ್ ಕೌರ್ ಸಮ್ರಾ - ಮಹಿಳೆಯರ 50 ಮೀ ರೈಫಲ್ 3 ಪೊಸಿಷನ್

25) ಕಿನಾನ್ ಚೆನೈ, ಜೋರಾವರ್ ಸಂಧು, ಪೃಥ್ವಿರಾಜ್ ತೊಂಡೈಮಾನ್ - ಪುರುಷರ ಟ್ರ್ಯಾಪ್ ಶೂಟಿಂಗ್ (ತಂಡ)

26) ಸೌರವ್ ಘೋಸಲ್, ಅಭಯ್ ಸಿಂಗ್, ಮಹೇಶ್ ಮಂಗಾಂವ್ಕರ್, ಹರಿಂದರ್ ಪಾಲ್ ಸಿಂಗ್ ಸಂಧು - ಪುರುಷರ ಸ್ಕ್ವಾಷ್ (ತಂಡ)

27) ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಂಧು - ಸ್ಕ್ವಾಷ್ (ಮಿಶ್ರ ಡಬಲ್ಸ್)

28) ರೋಹನ್ ಬೋಪಣ್ಣ, ರುತುಜಾ ಭೋಸಲೆ - ಟೆನ್ನಿಸ್ (ಮಿಶ್ರ ಡಬಲ್ಸ್)

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ವಿಜೇತರು (ಬೆಳ್ಳಿ)

1) ಅತಾನು ದಾಸ್, ಧೀರಜ್ ಬೊಮ್ಮದೇವರ, ತುಷಾರ್ ಶೆಲ್ಕೆ - ಪುರುಷರ ಆರ್ಚರಿ ರಿಕರ್ವ್ (ತಂಡ)

2) ಅಭಿಷೇಕ್ ವರ್ಮಾ - ಪುರುಷರ ಸಂಯುಕ್ತ ಬಿಲ್ಲುಗಾರಿಕೆ (ವೈಯಕ್ತಿಕ)

3) ಕಿಶೋರ್ ಕುಮಾರ್ ಜೆನಾ - ಪುರುಷರ ಜಾವೆಲಿನ್ ಥ್ರೋ

4) ಜ್ಯೋತಿ ಯರ್ರಾಜಿ - ಮಹಿಳೆಯರ 100 ಮೀ ಹರ್ಡಲ್ಸ್

5) ಶ್ರೀಶಂಕರ್ ಮುರಳಿ - ಪುರುಷರ ಲಾಂಗ್ ಜಂಪ್

6) ಅವಿನಾಶ್ ಸೇಬಲ್ - ಪುರುಷರ 5000 ಮೀ

7) ತೇಜಸ್ವಿನ್ ಶಂಕರ್ - ಪುರುಷರ ಡೆಕಾಥ್ಲಾನ್

8) ವಿತ್ಯಾ ರಾಮರಾಜ್, ಐಶ್ವರ್ಯ ಮಿಶ್ರಾ, ಪ್ರಾಚಿ, ಶುಭಾ ವೆಂಕಟೇಶ್ - ಮಹಿಳೆಯರ 4x400 ಮೀ ರಿಲೇ

9) ಮುಹಮ್ಮದ್ ಅಜ್ಮಲ್, ರಾಜೇಶ್ ರಮೇಶ್, ವಿತ್ಯ ರಾಮರಾಜ್, ಶುಭಾ ವೆಂಕಟೇಶನ್ - ಮಿಶ್ರ 4x400 ಮೀ ರಿಲೇ

10) ಆನ್ಸಿ ಸೋಜನ್ - ಮಹಿಳೆಯರ ಲಾಂಗ್ ಜಂಪ್

11) ಕಾರ್ತಿಕ್ ಕುಮಾರ್ - ಪುರುಷರ 10000 ಮೀ

12) ಹರ್ಮಿಲನ್ ಬೇನ್ಸ್ - ಮಹಿಳೆಯರ 15000 ಮೀ

13) ಪಾರುಲ್ ಚೌಧರಿ - ಮಹಿಳೆಯರ 3000ಮೀ ಸ್ಟೀಪಲ್‌ಚೇಸ್

14) ಹರ್ಮಿಲನ್ ಬೇನ್ಸ್ - ಮಹಿಳೆಯರ 800 ಮೀ

15) ಅಜಯ್ ಕುಮಾರ್ ಸರೋಜ್ - ಪುರುಷರ 1500 ಮೀ

16) ಮುಹಮ್ಮದ್ ಅಫ್ಸಲ್ - ಪುರುಷರ 800 ಮೀ

17) ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ

18) ಅದಿತಿ ಅಶೋಕ್ - ಮಹಿಳಾ ಗಾಲ್ಫ್ (ವೈಯಕ್ತಿಕ)

19) ಲೊವ್ಲಿನಾ ಬೊರ್ಗೊಹೈನ್ - ಬಾಕ್ಸಿಂಗ್ ಮಹಿಳೆಯರ 75 ಕೆ.ಜಿ

20) ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ - ರೋಯಿಂಗ್ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್

21) ಭಾರತ ಪುರುಷರ 8 ತಂಡ - ರೋಯಿಂಗ್

22) ನೇಹಾ ಠಾಕೂರ್ - ಸೈಲಿಂಗ್ ಗರ್ಲ್ಸ್ ಡಿಂಗ್ರಿ

23) ಶ್ವರಿ ಪ್ರತಾಪ್ ಸಿಂಗ್ ತೋಮರ್ - ಪುರುಷರ 50 ಮೀ ರೈಫಲ್ 3 ಸ್ಥಾನಗಳು (ವೈಯಕ್ತಿಕ)

24) ಇಶಾ ಸಿಂಗ್, ಪಾಲಕ್ ಗುಲಿಯಾ ಮತ್ತು ದಿವ್ಯಾ ಟಿಎಸ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್ (ತಂಡ)

25) ರಮಿತಾ ಜಿಂದಾಲ್, ಮೆಹುಲಿ ಘೋಷ್, ಆಶಿ ಚೌಕ್ಸೆ - ಮಹಿಳೆಯರ 10 ಮೀ ಏರ್ ರೈಫಲ್ (ತಂಡ)

26) ಇಶಾ ಸಿಂಗ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್ (ವೈಯಕ್ತಿಕ)

27) ಇಶಾ ಸಿಂಗ್ - ಮಹಿಳೆಯರ 25 ಮೀ ಪಿಸ್ತೂಲ್ (ವೈಯಕ್ತಿಕ)

28) ಸಿಫ್ಟ್ ಕೌರ್ ಸಮ್ರಾ, ಆಶಿ ಚೌಕ್ಸೆ, ಮಾನಿನಿ ಕೌಶಿಕ್ - ಮಹಿಳೆಯರ 50 ಮೀ ರೈಫಲ್ 3 ಸ್ಥಾನ (ತಂಡ)

29) ಅನಂತ್ ಜೀತ್ ಸಿಂಗ್ ನರುಕಾ - ಪುರುಷರ ಸ್ಕೀಟ್ (ವೈಯಕ್ತಿಕ)

30) ದಿವ್ಯಾ ಟಿಎಸ್ ಮತ್ತು ಸರಬ್ಜೋತ್ ಸಿಂಗ್ - 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ

31) ರಾಜೇಶ್ವರಿ ಕುಮಾರಿ, ಮನೀಶಾ ಕೀರ್, ಪ್ರೀತಿ ರಜಕ್ - ಮಹಿಳಾ ಟ್ರ್ಯಾಪ್ ತಂಡ

32) ಸೌರವ್ ಘೋಸಲ್ - ಸ್ಕ್ವಾಷ್ ಪುರುಷರ ಸಿಂಗಲ್ಸ್

33) ರಾಮ್‌ಕುಮಾರ್ ರಾಮನಾಥನ್, ಸಾಕೇತ್ ಮೈನೇನಿ - ಟೆನ್ನಿಸ್ ಪುರುಷರ ಡಬಲ್ಸ್

34) ನವೋರೆಮ್ ರೋಶಿಬಿನಾ ದೇವಿ - ವುಶು ಮಹಿಳೆಯರ ಸಂಡಾ 60 ಕೆ.ಜಿ

35) ಭಾರತೀಯ ಬ್ರಿಡ್ಜ್ ತಂಡ

Story first published: Saturday, October 7, 2023, 9:01 [IST]
Other articles published on Oct 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+