For Quick Alerts
ALLOW NOTIFICATIONS  
For Daily Alerts

Asian Games 2023: 70 ಪದಕಗಳ ಗಡಿ ದಾಟಿದ ಭಾರತ; ಹೊಸ ಏಷ್ಯನ್ ಗೇಮ್ಸ್ ದಾಖಲೆ ಸ್ಥಾಪನೆ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಸಂಯುಕ್ತ ಮಿಶ್ರ ಅರ್ಚರಿ ಸ್ಪರ್ಧೆಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಜೋಡಿಯನ್ನು ಸೋಲಿಸಿ, ಭಾರತದ ಓಜಸ್ ಪ್ರವೀಣ್ ಮತ್ತು ಜ್ಯೋತಿ ಸುರೇಖಾ ಆರ್ಚರಿ ಜೋಡಿ ಐತಿಹಾಸಿಕ ಚಿನ್ನದ ಪದಕ ಗೆದ್ದರು.

ಈ ಮೂಲಕ ಬುಧವಾರದಂದು ಭಾರತೀಯ ತಂಡವು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ತನ್ನ ಹಿಂದಿನ ಅತ್ಯುತ್ತಮ 70 ಪದಕಗಳ ಸಾಧನೆಯನ್ನು ಮೀರಿಸಿತು.

Asian Games 2023: India Crosses 70 Medals Mark; Setting A New Asian Games Record

2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಟ್ಟು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದಿತ್ತು. 2023ರ ಕ್ರೀಡಾಕೂಟದಲ್ಲಿ ಭಾರತೀಯ ಪಡೆ ಇದುವರೆಗೆ 16 ಚಿನ್ನ, 26 ಬೆಳ್ಳಿ ಮತ್ತು 29 ಕಂಚಿನ ಪದಕಗಳನ್ನು ಗೆದ್ದಿದೆ. ಇನ್ನೂ ಕೆಲವು ಪದಕಗಳು ಈಗಾಗಲೇ ವಿವಿಧ ಸ್ಪರ್ಧೆಗಳಲ್ಲಿ ಖಚಿತವಾಗಿವೆ.

ಸ್ಪರ್ಧೆವಾರು ಪದಕಗಳ ಲೆಕ್ಕಕ್ಕೆ ಬಂದಾಗ, ಶೂಟಿಂಗ್ ಮತ್ತು ಬಿಲ್ಲುಗಾರಿಕೆ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೆ ಭಾರತದ ಅತ್ಯುತ್ತಮ ಪದಕ ತಂದುಕೊಟ್ಟ ಘಟಕಗಳಾಗಿವೆ.

Asian Games 2023: India Crosses 70 Medals Mark; Setting A New Asian Games Record

ಶೂಟಿಂಗ್‌ನಲ್ಲಿ ಭಾರತ ಒಟ್ಟು 22 ಪದಕಗಳನ್ನು ಗೆದ್ದುಕೊಂಡಿದ್ದರೆ, ಅಥ್ಲೆಟಿಕ್ಸ್‌ನಲ್ಲಿ ಈಗಾಗಲೇ 23 ಪದಕಗಳು ಭಾರತಕ್ಕೆ ಲಭಿಸಿದ್ದು, ಇನ್ನೂ ಹೆಚ್ಚಿನ ಪದಕಗಳು ಬರುವ ನಿರೀಕ್ಷೆ ಇದೆ.

ಬುಧವಾರ, ಅಕ್ಟೋಬರ್ 4ರ ಮುಂಜಾನೆ ಭಾರತೀಯ ರೇಸ್ ವಾಕರ್‌ಗಳಾದ ಮಂಜು ರಾಣಿ ಮತ್ತು ರಾಮ್ ಬಾಬೂ ಅವರು 35 ಕಿಮೀ ಮಿಶ್ರ ಓಟದ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 2018ರ ಜಕಾರ್ತಾ ಗೇಮ್ಸ್‌ನ ಪ್ರದರ್ಶನವನ್ನು ಸರಿಗಟ್ಟಲು ಸಹಾಯ ಮಾಡಿದರು.

ಸಂಯುಕ್ತ ಬಿಲ್ಲುಗಾರರಾದ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರು ಮಿಶ್ರ ತಂಡ ಚಿನ್ನದ ಪದಕವನ್ನು ಗೆದ್ದಾಗ ಭಾರತದ 71ನೇ ಪದಕವನ್ನು ಪಡೆದರು.

Asian Games 2023: India Crosses 70 Medals Mark; Setting A New Asian Games Record

"ಭಾರತವು ಪದಕಗಳ ಪಟ್ಟಿಯಲ್ಲಿ 70ರ ಗಡಿ ದಾಟುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪದಕ ಗಳಿಕೆಯೊಂದಿಗೆ ತನ್ನ ಛಾಪು ಮೂಡಿಸಿದೆ ಎಂದು ನಾನು ಬಹಳ ಸಂತೋಷದಿಂದ ಹೇಳಲು ಬಯಸುತ್ತೇನೆ. ಇನ್ನೂ ಹೆಚ್ಚಿನ ಪದಕಗಳು ಬರುವ ನಿರೀಕ್ಷೆ ಇದೆ," ಎಂದು ಭಾರತದ ಚೆಫ್ ಡಿ ಮಿಷನ್ ಭೂಪೇಂದರ್ ಸಿಂಗ್ ಬಾಜ್ವಾ ಹೇಳಿದರು.

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕಗಳ ಗಡಿ ದಾಟುವ ಗುರಿಯೊಂದಿಗೆ, ಭಾರತವು ಹಿಂದೆಂದಿಗಿಂತ ತನ್ನ ಅತಿದೊಡ್ಡ ತುಕಡಿಯನ್ನು ಕಳುಹಿಸಿದೆ.

"ಅಬ್ ಕಿ ಬಾರ್, ಸೌ ಪಾರ್' (ಈ ಬಾರಿ 100 ಪದಕಗಳನ್ನು ದಾಟಬೇಕು) ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗಾಗಿ ಭಾರತದ ಕ್ಯಾಚ್ ಲೈನ್ ಆಗಿದೆ. ಭಾರತವು ಸದ್ಯ 16 ಚಿನ್ನ, 26 ಬೆಳ್ಳಿ ಮತ್ತು 29 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದು, ನಾಲ್ಕು ದಿನಗಳ ಸ್ಪರ್ಧೆ ಇನ್ನೂ ಬಾಕಿ ಇದೆ.

Story first published: Wednesday, October 4, 2023, 10:49 [IST]
Other articles published on Oct 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+