For Quick Alerts
ALLOW NOTIFICATIONS  
For Daily Alerts

ಮಿಸ್ ಮಾಡ್ಲೇ ಬೇಡಿ!!.. ಏಷ್ಯನ್ ಗೇಮ್ಸ್‌ನಲ್ಲಿ ಇಂದು ಒಂದಲ್ಲಾ.. ಎರಡು ಭಾರತ vs ಪಾಕಿಸ್ತಾನ ಸೆಣೆಸಾಟ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟ 7ನೇ ದಿನಕ್ಕೆ ಕಾಲಿಟ್ಟಿದೆ. ಸೆಪ್ಟೆಂಬರ್ 30 ಈ ದಿನದಂದು ಭಾರತ ಎರಡು ಕ್ರೀಡೆಗಳಲ್ಲಿ ತನ್ನ ಬದ್ಧ ಎದುರಾಳಿ ತಂಡವಾಗಿರುವ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಭಾರತೀಯ ಕ್ರೀಡಾಭಿಮಾನಿಗಳಿಗೆ ಇಂದು ಅದ್ಭುತ ದಿನ ಎಂದರೆ ತಪ್ಪಾಗಲಾರದು.

ಯಾವುದೇ ಕ್ರೀಡೆಗಳಲ್ಲಿ ಭಾರತ ಹಾಘೂ ಪಾಕಿಸ್ತಾಬ ತಂಡಗಳು ಮುಖಾಮುಖಿಯಾದರೆ ಅಲ್ಲಿ ಜಿದ್ದಾಜಿದ್ದಿನ ಕಾದಾಟ ನಡೆಯುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಅಂಥಾದ್ದೇ ಕ್ಷಣಕ್ಕಾಗಿ ಅಭಿಮಾನಿಗಳು ಎದುರುನೋಡಿತ್ತಿದ್ದಾರೆ. ಅಂದರೆ ಹಾಗೆ ಇಂದು ಈ ಎರಡು ರಾಷ್ಟ್ರಗಳು ಮುಖಾಮುಖಿಯಾಗುತ್ತಿರುವ ಆ ಎರಡು ಕ್ರೀಡೆಗಳೆಂದರೆ ಒಂದು ಹಾಕಿ ಹಾಗೂ ಮತ್ತೊಂದು ಪುರುಷರ ಸ್ಕ್ವಾಶ್ ತಂಡ ಸ್ಪರ್ಧೆ.

Asian Games 2023: India vs. Pakistan 2 Clashes To Dominate the Asian Games on September 30th

ಸ್ಕ್ವಾಶ್ ಫೈನಲ್‌ನಲ್ಲಿ ಭಾರತ vs ಪಾಕಿಸ್ತಾನ

ಸ್ಕ್ವಾಶ್ ಪುರುಷರ ತಂಡ ವಿಭಾಗದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಲಿದೆ. ಎರಡು ತಂಡಗಳು ಕೂಡ ಬಲುಷ್ಠ ಆಟಗಾರರನ್ನು ಹೊಂದಿದ್ದುದೆ. ಹೀಗಾಗಿ ಈ ಮುಖಾಮುಖಿಯ ಮೇಲೆ ಭಾರತೀಯ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಬವಾಗಲಿದೆ.

ಪಾಕಿಸ್ತಾನ 2010ರಲ್ಲಿ ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆದರೆ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ತಂಡ ಪದಕದ ಸಾಧನೆ ಮಾಡಿತ್ತು. ಆದರೆ 2018ರ ಆವೃತ್ತಿಯಲ್ಲಿ ಎರಡೂ ತಂಡಗಳು ಕಂಚಿನ ಪದಕವನ್ನು ಗೆದ್ದುಕೊಂಡಿದ್ದವು. ಹೀಗಾಗಿ ಈ ಮುಖಾಮುಖಿಯಲ್ಲಿ ಫಲಿತಾಂಶ ಏನಾಗಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಈ ಆವೃತ್ತಿಯಲ್ಲಿ ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಕಣಕ್ಕಿಳಿದಿದ್ದವು. ಗ್ರೂಪ್ ಹಂತದಲ್ಲಿ ಪಾಕಿಸ್ತಾನ 1-2 ಗೋಲುಗಳಿಂದ ಭಾರತವನ್ನು ಸೋಲಿಸಿತು. ಇದು ಭಾರತ ಈ ಟೂರ್ನಿಯಲ್ಲಿ ಕಂಡ ಏಕೈಕ ಸೋಲು. ಇದೀಗ ಆ ಸೋಲಿಗೆ ಸೌರವ್ ಘೋಸಲ್ ನೇತೃತ್ವದ ಭಾರತೀಯ ತಂಡ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.

ಹಾಕಿಯಲ್ಲಿ ಭಾರತ vs ಪಾಕಿಸ್ತಾನ ಸೆಣೆಸಾಟ

ಪುರುಷರ ಹಾಕಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹಣಾಹಣಿಗಾಗಿ ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಹಾಕಿ ಮೈದಾನವು ಸಿದ್ಧವಾಗಿದೆ. ಈವರೆಗೆ ತಲಾ ಮೂರು ಪಂದ್ಯಗಳನ್ನು ಆಡಿರುವ ಎರಡೂ ತಂಡಗಳು ಇದುವರೆಗೆ ಗುಂಪು ಹಂತಗಳಲ್ಲಿ ಅಜೇಯವಾಗಿ ಉಳಿದಿವೆ. ಈ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗಿನ ಪಂದ್ಯಗಳಲ್ಲಿ ಎರಡೂ ತಂಡಗಳು ಗೋಲುಗಳ ಹಬ್ಬ ಮಾಡಿಕೊಂಡಿದೆ. ಭಾರತ ಮೂರು ಪಂದ್ಯಗಳಲ್ಲಿ 30ಕದಕೂ ಅಧಿಕ ಗೋಲುಗಳನ್ನುಜ ಬಾರಿಸಿದ್ದು ಇದರ ಆಧಾರದಲ್ಲಿ ಪಾಕಿಸ್ತಾನಕ್ಕಿಂತ ಮುಂದಿದೆ.

ಯಾವಾಗ ಆರಂಭ

ಭಾತ ಹಾಗೂ ಪಾಕಿಸ್ತಾನ ತಂಡಗಳ ಹಾಕಿ ಪಂದ್ಯ ಇಂದು (ಶನುವಾರ) ಸಂಜೆ ಭಾರತೀಯ ಕಾಲಮಾನ 6:15ಕ್ಕೆ ಆರಂಭವಾಗಲಿದೆ. ಹಾಕಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರ್ತ ತಂಡ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಮೇಕುಗೈ ಸಾಧಿಸುತ್ತಿದ್ದು ಇಂದಿನ ಪಂದ್ಯದಲ್ಲಿಯೂ ಈ ಯಶಸ್ಸು ಮುಂದುವರಿಯುವ ನಿರೀಕ್ಷೆಯಿದೆ. ಇತ್ತೀಚೆಗೆ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ. ಅಲ್ಲಿ ಭಾರತ ಪಾಕಿಸ್ತಾನವನ್ನು 4-0 ಅಂತರದಿಂದ ಮಣಿಸಿತ್ತು.

ನೇರಪ್ರಸಾರದ ಮಾಹಿತಿ

ಇನ್ನು ಸ್ಕ್ವಾಶ್ ಹಾಗೂ ಹಾಕಿ ಈ ಎರಡು ಪಂದ್ಯಗಳನ್ನು ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ ವಾನಹಿನಿಯಲ್ಲಿ ವೀಕ್ಷಿಸುವ ಅವಕಾಶವಿದೆ. ಏಷ್ಯನ್ ಗೇಮ್ಸ್‌ನ ಸ್ಪರ್ಧೆಗಳನ್ನು ಸೋನಿ ಸ್ಪೋರ್ಟ್ಸ್ ಟೆನ್ 1, ಸೋನಿ ಸ್ಪೋರ್ಟ್ಸ್ ಟೆನ್ 2, ಸೋನಿ ಸ್ಪೋರ್ಟ್ಸ್ ಟೆನ್ 3, ಸೋನಿ ಸ್ಪೋರ್ಟ್ಸ್ ಟೆನ್ 4, ಸೋನಿ ಸ್ಪೋರ್ಟ್ಸ್ ಟೆನ್ 5 ಚಾನೆಲ್‌ಗಳಲ್ಲಿ ನೇರಪ್ಸಾರ ಮಾಡಲಾಗುತ್ತದೆ. ಇನ್ನು ಸೋನಿ ಲಿವ್ ಚಂದಾದಾರರು ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಮೂಲಕವೂ ವೀಕ್ಷಿಸಬಹುದು.

Story first published: Saturday, September 30, 2023, 12:10 [IST]
Other articles published on Sep 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+