For Quick Alerts
ALLOW NOTIFICATIONS  
For Daily Alerts

Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಈವರೆಗೆ 11 ಪದಕ; ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಸೋಮವಾರ, ಸೆಪ್ಟೆಂಬರ್ 25ರಂದು ಭಾರತವು 2 ಚಿನ್ನದ ಪದಕ ಸಹಿತ 6 ಪದಕಗಳನ್ನು ಗೆದ್ದುಕೊಂಡಿದ್ದು, ಅತ್ಯುತ್ತಮವಾಗಿ ದಿನ ಆರಂಭಿಸಿದೆ.

ಶನಿವಾರ, ಸೆಪ್ಟೆಂಬರ್ 23ರಂದು ಅಧಿಕೃತವಾಗಿ ಅದ್ಧೂರಿ ಚಾಲನೆ ಪಡೆದ 2023ರ ಏಷ್ಯನ್ ಗೇಮ್ಸ್, ಸೆಪ್ಟೆಂಬರ್ 24ರಂದೇ ಭಾರತೀಯ ಕ್ರೀಡಾಪಟುಗಳು ತಮ್ಮ ಪದಕದ ಬೇಟೆ ಆರಂಭಿಸಿದ್ದರು ಮತ್ತು ಇನ್ನಷ್ಟು ಪದಕಗಳು ಬರಲಿವೆ.

2018ರ ಜಕಾರ್ತಾ ಪಂದ್ಯಾವಳಿಯಲ್ಲಿ ಒಟ್ಟು 570-ಸದಸ್ಯರ ಪ್ರಬಲ ತುಕಡಿಯಿಂದ 80 ಪದಕಗಳನ್ನು ಗಳಿಸುವ ಮೂಲಕ ಭಾರತೀಯ ಕ್ರೀಡಾ ಪಡೆ ತನ್ನ ಅತಿದೊಡ್ಡ ಪದಕಗಳನ್ನು ಗಳಿಸಿತ್ತು.

asian-games-2023-medal-tally-india-won-11-medals-till-now-explore-where-india-ranks-in-medal-table

ಹ್ಯಾಂಗ್‌ಝೌ 2023ರ ಆವೃತ್ತಿಯಲ್ಲಿ ಭಾರತೀಯ ಕ್ರೀಡಾಪಟುಗಳು 100ಕ್ಕೂ ಅಧಿಕ ಪದಕಗಳ ಗುರಿಯೊಂದಿಗೆ ತಮ್ಮ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿಸುವ ಭರವಸೆ ಹೊಂದಿದ್ದಾರೆ.

ಸೋಮವಾರದಂದು ಹ್ಯಾಂಗ್‌ಝೌನಲ್ಲಿ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಪುರುಷರ ತಂಡ ವಿಶ್ವದಾಖಲೆ ಮುರಿದು ಚಿನ್ನದ ಪದಕವನ್ನು ಗೆದ್ದುಕೊಂಡರು. ನಂತರ, ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ತಂಡವನ್ನು ಸೋಲಿಸಿ ಚಿನ್ನದ ಪದಕ ಖಾತೆಯನ್ನು ವಿಸ್ತರಿಸಿತು. ಈವರೆಗೆ ಭಾರತದ ಕ್ರೀಡಾಳುಗಳು 2 ಚಿನ್ನ, 3 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

1. ಶೂಟಿಂಗ್, ಮಹಿಳೆಯರ 10 ಮೀ ಏರ್ ರೈಫಲ್ ತಂಡ - ಬೆಳ್ಳಿ

ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರನ್ನೊಳಗೊಂಡ ಮಹಿಳಾ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್ ಪೂರ್ಣಗೊಂಡ ನಂತರ ಬೆಳ್ಳಿ ಪದಕವನ್ನು ಪಡೆದರು. ಅವರು ಒಟ್ಟು 1886 ಅಂಕಗಳೊಂದಿಗೆ ಆಟವನ್ನು ಮುಗಿಸಿದರು.

2. ರೋಯಿಂಗ್, ಪುರುಷರ ಡಬಲ್ಸ್ ಸ್ಕಲ್ಸ್ - ಬೆಳ್ಳಿ

ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿಯು ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್‌ನಲ್ಲಿ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಗೆದ್ದರು.

3. ರೋಯಿಂಗ್, ಪುರುಷರ ಜೋಡಿ - ಕಂಚು

ಭಾರತದ ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಜೋಡಿ 6:50.41 ಸಮಯದೊಂದಿಗೆ ಕಂಚಿನ ಪದಕವನ್ನು ಗಳಿಸುವ ಮೂಲಕ ಭಾರತಕ್ಕೆ ಮೂರನೇ ಸ್ಥಾನವನ್ನು ಗಳಿಸಲು ನೆರವಾದರು.

4. ರೋಯಿಂಗ್, ಪುರುಷರ 8 ಸ್ಪರ್ಧೆ - ಬೆಳ್ಳಿ

ರೋಯಿಂಗ್‌ನಲ್ಲಿ ಪದಕದ ಬೇಟೆಯನ್ನು ಮುಂದುವರೆಸಿದ ಭಾರತ, ಈ ಬಾರಿ ಪುರುಷರ ಎಂಟು ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.

asian-games-2023-medal-tally-india-won-11-medals-till-now-explore-where-india-ranks-in-medal-table

5. ಶೂಟಿಂಗ್, ಮಹಿಳೆಯರ 10 ಮೀ ಏರ್ ರೈಫಲ್ ವೈಯಕ್ತಿಕ - ಕಂಚು

ರಮಿತಾ ಜಿಂದಾಲ್, ಈ ಮೊದಲು ಮಹಿಳೆಯರ ಟೀಮ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. 10 ಮೀ ಏರ್ ರೈಫಲ್ ವಿಭಾಗದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ 230.1 ಸಂಚಿತ ಸ್ಕೋರ್‌ನೊಂದಿಗೆ ಕಂಚಿನ ಪದಕವನ್ನು ಪಡೆದರು.

6. ಶೂಟಿಂಗ್, ಪುರುಷರ 10 ಮೀ ಏರ್ ರೈಫಲ್ ತಂಡ - ಚಿನ್ನ

ವಿಶ್ವ ದಾಖಲೆ ಪ್ರದರ್ಶನ ನೀಡಿದ ದಿವ್ಯಾಂಶ್ ಸಿಂಗ್ ಪನ್ವಾರ್, ರುದ್ರಂಕ್ಷ್ ಪಾಟೀಲ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಈ ಮೂವರು 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. 1893.7 ಅಂಕಗಳ ಸಂಚಿತ ಸ್ಕೋರ್‌ನೊಂದಿಗೆ, ಇವರು 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕಾಗಿ ಅಸ್ತಿತ್ವದಲ್ಲಿರುವ ವಿಶ್ವ ದಾಖಲೆಯನ್ನು ಮುರಿದರು.

7. ರೋಯಿಂಗ್, ಪುರುಷರ ಕಾಕ್ಸ್‌ಲೆಸ್ 4 - ಕಂಚು

ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನಿತ್ ಮತ್ತು ಆಶಿಶ್ ಕುಮಾರ್ ಅವರ ಕ್ವಾರ್ಟೆಟ್ ಪುರುಷರ ನಾಲ್ಕು ಸ್ಪರ್ಧೆಯಲ್ಲಿ 6:10.81 ಸಮಯದೊಂದಿಗೆ ಮೂರನೇ ಸ್ಥಾನವನ್ನು ಗಳಿಸಿ ಕಂಚು ಪಡೆದುಕೊಂಡರು.

8. ರೋಯಿಂಗ್, ಪುರುಷರ ಕ್ವಾಡ್ರುಪಲ್ ಸ್ಕಲ್ಸ್ - ಕಂಚು

ಸತ್ನಾಂ, ಪರ್ಮಿಂದರ್, ಜಾಕರ್ ಮತ್ತು ಸುಖ್ಮೀತ್ ಅವರ ಕ್ವಾರ್ಟೆಟ್‌ನಿಂದ ರೋಯಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಫೈನಲ್‌ನಲ್ಲಿ 6:08.61 ನಿಮಿಷಗಳ ಸಮಯದೊಂದಿಗೆ 3ನೇ ಸ್ಥಾನವನ್ನು ಪಡೆದರು.

9. ಪುರುಷರ 10 ಮೀ ಏರ್ ರೈಫಲ್ ವೈಯಕ್ತಿಕ - ಕಂಚು

ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರು ಇತರ ಇಬ್ಬರೊಂದಿಗೆ ಸೇರಿಕೊಂಡು ಟೀಮ್ ಇವೆಂಟ್‌ನಲ್ಲಿ ಭಾರತಕ್ಕೆ ಏಷ್ಯನ್ ಗೇಮ್ಸ್‌ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಟ್ಟರು. ಆ ಬಳಿಕ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಪಡೆದರು.

10. ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೂಲ್ ತಂಡ - ಕಂಚು

ಆದರ್ಶ್ ಸಿಂಗ್, ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಈ ಮೂವರ ತಂಡ 25 ಮೀ ರಾಪಿಡ್ ಫೈರ್ ಪಿಸ್ತೂಲ್ ಟೀಮ್ ಇವೆಂಟ್‌ನಲ್ಲಿ ಒಟ್ಟು 1718 ಅಂಕಗಳೊಂದಿಗೆ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟರು.

asian-games-2023-medal-tally-india-won-11-medals-till-now-explore-where-india-ranks-in-medal-table

11. ಭಾರತ ಮಹಿಳಾ ಕ್ರಿಕೆಟ್ ತಂಡ - ಚಿನ್ನ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಭಾರತವು ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿತು.

2023ರ ಏಷ್ಯನ್ ಗೇಮ್ಸ್ ಪದಕ ಪಟ್ಟಿ

1) ಚೀನಾ - 32 ಚಿನ್ನ, 13 ಬೆಳ್ಳಿ, 5 ಕಂಚು

2) ರಿಪಬ್ಲಿಕ್ ಆಫ್ ಕೊರಿಯಾ - 6 ಚಿನ್ನ, 7 ಬೆಳ್ಳಿ, 9 ಕಂಚು

3) ಉಜ್ಬೇಕಿಸ್ತಾನ್ - 4 ಚಿನ್ನ, 4 ಬೆಳ್ಳಿ, 3 ಕಂಚು

4) ಜಪಾನ್ - 3 ಚಿನ್ನ, 12 ಬೆಳ್ಳಿ, 8 ಕಂಚು

5) ಭಾರತ - 2 ಚಿನ್ನ, 3 ಬೆಳ್ಳಿ, 6 ಕಂಚು

6) ಹಾಂಗ್ ಕಾಂಗ್, ಚೀನಾ - 2 ಚಿನ್ನ, 3 ಬೆಳ್ಳಿ, 6 ಕಂಚು

7) ಚೈನೀಸ್ ತೈಪೆ - 2 ಚಿನ್ನ, 1 ಬೆಳ್ಳಿ, 2 ಕಂಚು

8) ಇಂಡೋನೇಷ್ಯಾ - 1 ಚಿನ್ನ, 1 ಬೆಳ್ಳಿ, 3 ಕಂಚು

9) ಮಕೊವಾ, ಚೀನಾ - 1 ಚಿನ್ನ, 0 ಬೆಳ್ಳಿ, 1 ಕಂಚು

10) ಇರಾನ್ - 0 ಚಿನ್ನ, 2 ಬೆಳ್ಳಿ, 2 ಕಂಚು

Story first published: Monday, September 25, 2023, 18:26 [IST]
Other articles published on Sep 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+