ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದ್ದು, ಶುಕ್ರವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಫೈನಲ್‌ನಲ್ಲಿ 17 ವರ್ಷದ ಪಾಲಕ್ ದಾಖಲೆಯ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಅದೇ ವಿಭಾಗದಲ್ಲಿ 18 ವರ್ಷದ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದರು.
242.1 ಅಂಕಗಳ ವೈಯಕ್ತಿಕ ಸ್ಕೋರ್‌ನೊಂದಿಗೆ ಪಾಲಕ್ ಚಿನ್ನ ಗೆದ್ದುಕೊಂಡಿದ್ದಲ್ಲದೆ, 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೊಸ ಏಷ್ಯನ್ ಗೇಮ್ಸ್ ದಾಖಲೆಯನ್ನು ಸ್ಥಾಪಿಸಿದರು ಮತ್ತು 2018ರ ಚೀನಾದ ದಾಖಲೆಯನ್ನು ಹಿಂದಿಕ್ಕಿದಳು.

ಇದೇ ವೇಳೆ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಇಶಾ ಸಿಂಗ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತಕ್ಕೆ ಇದು ಡಬಲ್ ಸಂತೋಷ ತಂದುಕೊಟ್ಟರು.
ಹ್ಯಾಂಗ್‌ಝೌನ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಈಶಾ ಸಿಂಗ್ ಬೆಳ್ಳಿ ಗೆಲ್ಲುವ ಮೂಲಕ 17 ಪದಕಗಳನ್ನು ಗಳಿಸಿದ್ದಲ್ಲದೆ, ಇಶಾ ಸಿಂಗ್‌ಗೆ ಇದು ನಾಲ್ಕನೇ ಪದಕವಾಯಿತು.
2023ರ ಏಷ್ಯನ್ ಗೇಮ್ಸ್‌ನಲ್ಲಿ ಇದು ಇಶಾ ಸಿಂಗ್‌ಗೆ ಇದು ಮೊದಲ ಯಶಸ್ಸಾಗಿರಲಿಲ್ಲ. ಇದಕ್ಕೂ ಮೊದಲು ಮಹಿಳೆಯರ ವೈಯಕ್ತಿಕ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಇದಕ್ಕೂ ಮುನ್ನ ಮನು ಭಾಕರ್ ಮತ್ತು ರಿದಮ್ ಸಾಂಗ್ವಾನ್ ಅವರೊಂದಿಗೆ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಫೈನಲ್‌ನಲ್ಲಿ ಒತ್ತಡದ ಪರಿಸ್ಥಿತಿಯ ಹೊರತಾಗಿಯೂ, ಭಾರತೀಯ ಬಾಲಕಿ ಪಾಲಕ್ ಮುನ್ನಡೆ ಸಾಧಿಸುವಾಗ ತಮ್ಮ ಶಾಂತ ಮನೋಭಾವ ತೋರಿಸಿದರು ಮತ್ತು ಪ್ರಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಿದಾಗ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು.

ಪಾಲಕ್‌ರನ್ನು ದೇಶವಾಸಿ ಇಶಾ ಸಿಂಗ್ ನಿಕಟವಾಗಿ ಅನುಸರಿಸಲು ಸಾಧ್ಯವಾಯಿತು. ಆದರೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಫೈನಲ್‌ನ ಅಂತ್ಯದ ವೇಳೆಗೆ ಪಾಕಿಸ್ತಾನದ ಕಿಶ್ಮಲಾ ತಲಾತ್‌ರಿಂದ ಕೆಲವು ತೀವ್ರ ಸ್ಪರ್ಧೆಯನ್ನು ಎದುರಿಸಿದರು.
ಕಿಶ್ಮಲಾ ತಲತ್ ಅಂತಿಮವಾಗಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಶೂಟಿಂಗ್‌ನಲ್ಲಿ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಪಾಕಿಸ್ತಾನಕ್ಕೆ ಇದು ಮೊದಲ ಪದಕವಾಗಿದೆ.
ಭಾರತದ ಜೋಡಿಯು ಇನ್ನೂ ಒಂದು ಸುತ್ತಿನವರೆಗೆ ಹೋದರು. ಅಲ್ಲಿ ಪಾಲಕ್ 2018ರಲ್ಲಿ ಚೀನಾದ ಕಿಯಾನ್ ವಿಯಾಂಗ್ ಹೊಂದಿದ್ದ ಆಟಗಳ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಇದರೊಂದಿಗೆ ಹ್ಯಾಂಗ್‌ಝೌ ಗೇಮ್ಸ್‌ನ ಶೂಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿದೆ. ಸದ್ಯ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 8 ಚಿನ್ನ, 11 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಒಟ್ಟು 30 ಪದಕಗಳನ್ನು ದೋಚಿದೆ.
ಇದಕ್ಕೂ ಮುನ್ನ, ಶುಕ್ರವಾರ ನಡೆದ ಪುರುಷರ 50 ಮೀಟರ್ ರೈಫಲ್ ಪುರುಷರ 3ಪಿ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆಯೋರನ್ ಅವರು ಚಿನ್ನದ ಪದಕ ಗೆದ್ದರು.