For Quick Alerts
ALLOW NOTIFICATIONS  
For Daily Alerts

Asian Games: 100 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿಯಿಂದ ಅಭಿನಂದನಾ ಸಮಾರಂಭ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ ನಂತರ, ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿದರು.

ಇದೇ ಅಕ್ಟೋಬರ್ 10ರಂದು ದೆಹಲಿಯ ತಮ್ಮ ನಿವಾಸದಲ್ಲಿ ಅಭಿನಂದನಾ ಸಮಾರಂಭಕ್ಕೆ ಆತಿಥ್ಯ ವಹಿಸುವುದಾಗಿ ಮತ್ತು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸುವುದಾಗಿ ನರೇಂದ್ರ ಮೋದಿ ಬಹಿರಂಗಪಡಿಸಿದರು.

Asian Games 2023: PM Narendra Modi Congratulates Indian Athletes For Winning 100 Medals

2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಭಾರತಕ್ಕೆ ಗಮನಾರ್ಹ ಸಾಧನೆಯಾಗಿದೆ. ಭಾರತದ ಕ್ರೀಡಾಪಟುಗಳು ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ ಮತ್ತು ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಪದಕಗಳ ಶತಕವನ್ನು ಬಾರಿಸಿದ್ದಾರೆ.

ಭಾರತವು ಅಕ್ಟೋಬರ್ 7ರ ವೇಳೆಗೆ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚಿನ ಪದಕಗಳು ಸೇರಿದಂತೆ ಒಟ್ಟು 100 ಪದಕಗಳನ್ನು ಗೆಲ್ಲುವ ಮೂಲಕ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕಗಳ ಗುರಿಯನ್ನು ಮುಟ್ಟಿತು.

Asian Games 2023: PM Narendra Modi Congratulates Indian Athletes For Winning 100 Medals

ಶನಿವಾರ ಮುಂಜಾನೆ ಭಾರತೀಯ ಆರ್ಚರಿ ತಂಡ ಮತ್ತು ಮಹಿಳಾ ಕಬಡ್ಡಿ ತಂಡವು ಮೂರು ಸತತ ಚಿನ್ನದ ಪದಕಗಳನ್ನು ಗೆದ್ದು ಭಾರತದ ಪದಕಗಳ ಸಂಖ್ಯೆಯನ್ನು 100ಕ್ಕೆ ತಲುಪಿಸಿತು.

ಆರ್ಚರಿಯಲ್ಲಿ ಜ್ಯೋತಿ ವೆನ್ನಮ್ ಮತ್ತು ಪ್ರವೀಣ್ ಓಜಸ್ ತಮ್ಮ ವೈಯಕ್ತಿಕ ಸಂಯುಕ್ತ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರೆ, ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆಯನ್ನು ರೋಚಕ ಫೈನಲ್ ಪಂದ್ಯದಲ್ಲಿ ಸೋಲಿಸಿ ಭಾರತಕ್ಕೆ 100 ಪದಕ ಗೆಲ್ಲಲು ನೆರವಾಯಿತು.

2023ರ ಏಷ್ಯನ್ ಗೇಮ್ಸ್‌ನಲ್ಲಿ ಇಲ್ಲಿಯವರೆಗೆ ಶೂಟಿಂಗ್ ಮತ್ತು ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಕ್ರಮವಾಗಿ ಭಾರತ 22 ಮತ್ತು 29 ಪದಕಗಳನ್ನು ಗೆದ್ದಿದೆ. ಭಾರತವು ರೋಯಿಂಗ್‌ನಲ್ಲಿ 5 ಪದಕಗಳನ್ನು, 3 ಸೈಲಿಂಗ್‌ನಲ್ಲಿ ಗೆದ್ದಿದೆ. ಇತರ ಪದಕಗಳು ಅನೇಕ ವಿಭಾಗಗಳಲ್ಲಿ ಬಂದಿವೆ.

ಶನಿವಾರ ನಡೆದ ಮಹಿಳಾ ತಂಡ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ 100 ಪದಕಗಳನ್ನು ತಲುಪಿತು. ರೋಚಕ ಫೈನಲ್ ಮುಖಾಮುಖಿಯಲ್ಲಿ ಭಾರತ 26-25 ಅಂತರದಿಂದ ಚೈನೀಸ್ ತೈಪೆಯನ್ನು ಸೋಲಿಸಿ ಐತಿಹಾಸಿಕ ಹೆಗ್ಗುರುತನ್ನು ತಲುಪಿತು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮುನ್ನಡೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ನರೇಂದ್ರ ಮೋದಿ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಡಿದ ಟ್ವೀಟ್‌ನಲ್ಲಿ, ಇದು ಮಹತ್ವದ ಸಾಧನೆ ಎಂದು ಶ್ಲಾಘಿಸಿದರು ಮತ್ತು ಭಾರತೀಯ ಕ್ರೀಡಾಪಟುಗಳ ಅಭೂತಪೂರ್ವ ಪ್ರದರ್ಶನಕ್ಕಾಗಿ ಅಭಿನಂದಿಸಿದರು.

ಅಕ್ಟೋಬರ್ 10ರಂದು ಏಷ್ಯನ್ ಗೇಮ್ಸ್ ಭಾರತೀಯ ಕ್ರೀಡಾ ತುಕಡಿಗೆ ಅಭಿನಂದನಾ ಸಮಾರಂಭದ ಆತಿಥ್ಯ ವಹಿಸಲು ಮತ್ತು ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮಹತ್ವದ ಸಾಧನೆ. ನಾವು 100 ಪದಕಗಳ ಗಮನಾರ್ಹ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ಭಾರತದ ಜನರು ರೋಮಾಂಚನಗೊಂಡಿದ್ದಾರೆ. ಭಾರತಕ್ಕೆ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣವಾದ ನಮ್ಮ ಅದ್ಭುತ ಕ್ರೀಡಾಪಟುಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ".

"ಪ್ರತಿ ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ನಿರ್ಮಿಸಿದೆ ಮತ್ತು ನಮ್ಮ ಹೃದಯವನ್ನು ಹೆಮ್ಮೆಯಿಂದ ತುಂಬಿದೆ. ಅಕ್ಟೋಬರ್ 10ರಂದು ನಮ್ಮ ಏಷ್ಯನ್ ಗೇಮ್ಸ್ ತಂಡವನ್ನು ಆಯೋಜಿಸಲು ಮತ್ತು ನಮ್ಮ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಬಡ್ಡಿ ತಂಡ, ಪುರುಷರ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಮತ್ತು ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಅವರು ಎದುರಿಸುವ ಮೂಲಕ ಭಾರತವು ಇನ್ನೂ ಕೆಲವು ಪದಕಗಳನ್ನು ಸೇರಿಸಲು ನೋಡುತ್ತಿದೆ.

Story first published: Saturday, October 7, 2023, 10:01 [IST]
Other articles published on Oct 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+