For Quick Alerts
ALLOW NOTIFICATIONS  
For Daily Alerts

Asian Games: 400 ಮೀ ಹರ್ಡಲ್ಸ್‌ನಲ್ಲಿ ಪಿಟಿ ಉಷಾ ಅವರ ರಾಷ್ಟ್ರೀಯ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್

ಸೋಮವಾರ, ಅಕ್ಟೋಬರ್ 2ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಅಥ್ಲೀಟ್ ವಿತ್ಯಾ ರಾಮರಾಜ್ ಫೈನಲ್‌ಗೆ ಅರ್ಹತೆ ಪಡೆದರು.

ಈ ಮೂಲಕ ಭಾರತದ ಲೆಜೆಂಡ್ ಓಟಗಾರ್ತಿ ಪಿಟಿ ಉಷಾ ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ವಿತ್ಯಾ ರಾಮರಾಜ್ ಸರಿಗಟ್ಟಿದರು.

Asian Games 2023: Vithya Ramraj Equals PT Ushas National Record In 400m Hurdles

ಇನ್ನು ಇತರ ಅಥ್ಲೀಟ್‌ಗಳಾದ ಜೆಸ್ಸಿ ಸಂದೇಶ್, ಮೊಹಮ್ಮದ್ ಅಫ್ಸಲ್ ಪುಳಿಕ್ಕಲಕತ್ ಮತ್ತು ಕೃಷ್ಣನ್ ಕುಮಾರ್ ಕೂಡ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ವಿತ್ಯಾ ರಾಮರಾಜ್ ಅವರು 55.42 ಸೆಕೆಂಡ್‌ಗಳ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ತಮ್ಮ ಹೀಟ್ ಒಂದರಲ್ಲಿ ಅಗ್ರಸ್ಥಾನ ಮತ್ತು ಎರಡನೇ ಸ್ಥಾನವನ್ನು ಗಳಿಸಿದರು. ಫೈನಲ್‌ಗೆ ಪ್ರವೇಶಿಸಿದ ಅಗ್ರ ಐದು ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.

ಮಹಿಳೆಯರ 400 ಮೀ ಹರ್ಡಲ್ಸ್:
ತಮಿಳುನಾಡು ಮೂಲದ ವಿತ್ಯಾ ರಾಮರಾಜ್ ಅವರು 55.43 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು ಮತ್ತು 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಿಟಿ ಉಷಾ ಅವರ ನಾಲ್ಕು ದಶಕಗಳ ಹಳೆಯ ರಾಷ್ಟ್ರೀಯ ದಾಖಲೆಯಾದ 55.42 ಸೆಕೆಂಡ್‌ಗಳಿಗಿಂತ 0.01 ಸೆಕೆಂಡ್‌ಗಳ ಅಂತರದಲ್ಲಿ ಬಂದಿದ್ದಾರೆ.

ವಿತ್ಯಾ ರಾಮರಾಜ್ ಫೈನಲ್‌ನಲ್ಲಿ ರಾಷ್ಟ್ರೀಯ ದಾಖಲೆ ಮುರಿಯುವ ಎಲ್ಲಾ ಸೂಚನೆ ತೋರಿಸುತ್ತಿದೆ. ಫೈನಲ್ ಅರ್ಹತೆಯಲ್ಲಿ ಉತ್ತಮವಾಗಿ ಓಡಿದ ವಿತ್ಯಾ ರಾಮರಾಜ್ ಅವರ ಓಟದ ಸಮಯವನ್ನು ಕ್ರೀಡಾಂಗಣದಲ್ಲಿ 55.43 ಎಂದು ತೋರಿಸಿದೆ.

ಇದಕ್ಕೆ ವಿತ್ಯಾ ರಾಮರಾಜ್ ಗಲಿಬಿಲಿಗೊಂಡಂತೆ ಕಾಣುತ್ತಿದ್ದಳು. ಆದರೆ ಇದೀಗ ಆಯೋಜಕರು ಅಧಿಕೃತ ಸಮಯವನ್ನು 55.42ರ ಹೊಸ ವೈಯಕ್ತಿಕ ಅತ್ಯುತ್ತಮ ಸಾಧನೆ ತೋರಿಸಿದ್ದಾರೆ. ಇದು ಪಿಟಿ ಉಷಾ ಅವರ ಮಟ್ಟವನ್ನು ತಲುಪಿದೆ.

"ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಧ್ಯವಾಗದಿರುವುದು ನನಗೆ ಬೇಸರ ತಂದಿತು. ಕ್ರೀಡಾಪಟುವಾಗಿ ನನ್ನನ್ನು ಪ್ರಶ್ನಿಸುವಂತೆ ಮಾಡಿತ್ತು. ನಾನು ಓಡುವುದನ್ನು ಬಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡುವ ಕೆಲಸವನ್ನು ಹುಡುಕಿದರೆ ಉತ್ತಮ ಎಂದು ನಾನು ಭಾವಿಸಿದ್ದೆ," ಎಂದು ವಿತ್ಯಾ ರಾಮರಾಜ್ ಮೈಖೇಲ್‌ಗೆ ತಿಳಿಸಿದ್ದರು.

ಎರಡನೇ ಹೀಟ್‌ನಲ್ಲಿ ಕಾವೇರಂ ಸಿಂಚಲ್ ರವಿ 58.62 ಸೆಕೆಂಡ್ ಸಮಯದೊಂದಿಗೆ ಹೀಟ್ ಎರಡರಲ್ಲಿ ನಾಲ್ಕನೇ ಮತ್ತು ಕೆಳಭಾಗದಲ್ಲಿ ಸ್ಥಾನ ಪಡೆದು ಪದಕ ಸುತ್ತಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಒಟ್ಟಾರೆ ಹತ್ತನೇ ಸ್ಥಾನ ಗಳಿಸಿದ್ದಾಳೆ.

ಇನ್ನು ಪುರುಷರ ಹೈಜಂಪ್‌ನಲ್ಲಿ ಜೆಸ್ಸಿ ಸಂದೇಶ್ ಮತ್ತು ಅನಿಲ್ ಸರ್ವೇಶ್ ಕುಶಾರೆ ಅವರು ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾದರೂ, ಅವರು ಸ್ವಯಂಚಾಲಿತ ಅರ್ಹತಾ ಮಾರ್ಕ್ ಆದ 2.26 ಮೀಟರ್ ಜಿಗಿತವನ್ನು ಜಿಗಿಯಲು ಸಾಧ್ಯವಾಗಲಿಲ್ಲ.

ಜೆಸ್ಸಿ ಎ ಗುಂಪಿನಲ್ಲಿ 2.10 ಮೀ ಜಿಗಿತದೊಂದಿಗೆ ಆರನೇ ಸ್ಥಾನ ಪಡೆದರೆ, ಅನಿಲ್ ಬಿ ಗುಂಪಿನಲ್ಲಿ 2.10 ಮೀ ಜಿಗಿತದೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಇಬ್ಬರೂ ಅಥ್ಲೀಟ್‌ಗಳು ಹತ್ತನೇ ಮತ್ತು ಹನ್ನೊಂದನೇ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಪದಕ ಸುತ್ತಿನ ಅರ್ಹತೆಯನ್ನು ಗಳಿಸಲು ವಿಶೇಷವಾಗಿ 12 ಕ್ರೀಡಾಪಟುಗಳಲ್ಲಿ ಸ್ಥಾನ ಪಡೆದಿದ್ದಾರೆ.

ಪುರುಷರ ಹೈಜಂಪ್ ಫೈನಲ್ ಅಕ್ಟೋಬರ್ 4ರ ಬುಧವಾರದಂದು ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಪ್ರಾರಂಭವಾಗುತ್ತದೆ.

ಪುರುಷರ 800 ಮೀಟರ್ ಫೈನಲ್‌ನಲ್ಲಿ ಮೊಹಮ್ಮದ್ ಅಫ್ಸಲ್ ಮತ್ತು ಕೃಷ್ಣನ್ ಫೈನಲ್‌ಗೆ ತಲುಪಿದರು. ದಕ್ಷಿಣ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮೊಹಮ್ಮದ್ ಅಫ್ಸಲ್ 1:46.79 ನಿಮಿಷಗಳಲ್ಲಿ ತಮ್ಮ ಹೀಟ್ ಮತ್ತು ಒಟ್ಟಾರೆಯಾಗಿ ಅತ್ಯುತ್ತಮವಾಗಿ ಪೂರೈಸಿದರು.

ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕೃಷ್ಣನ್ 1:49.45 ನಿಮಿಷಗಳ ಸಮಯದೊಂದಿಗೆ ಒಟ್ಟಾರೆ ಎಂಟನೇ ಮತ್ತು ಹೀಟ್ ಮೂರರಲ್ಲಿ ಎರಡನೇ ಅತ್ಯುತ್ತಮ ಸ್ಥಾನ ಪಡೆದರು. ಅಂತಿಮ ಅರ್ಹತೆಯನ್ನು ಗಳಿಸಲು ಅವರು ಅಗ್ರ ಎಂಟು ಕ್ರೀಡಾಪಟುಗಳಲ್ಲಿ ಒಬ್ಬರಾದರು.

ಅಥ್ಲೆಟಿಕ್ಸ್‌ನಲ್ಲಿ ಭಾರತ ಎರಡು ಚಿನ್ನ, ಐದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ 12 ಪದಕಗಳನ್ನು ಗೆದ್ದಿದೆ. 13 ಚಿನ್ನ, 21 ಬೆಳ್ಳಿ, 21 ಕಂಚಿನ ಪದಕಗಳೊಂದಿಗೆ ಭಾರತದ ಪದಕಗಳ ಸಂಖ್ಯೆ 55ಕ್ಕೆ ಏರಿದೆ. ಅಥ್ಲೆಟಿಕ್ಸ್ ಈವೆಂಟ್‌ಗಳು ಸೆಪ್ಟೆಂಬರ್ 29ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 5ರವರೆಗೆ ನಡೆಯಲಿದೆ.

Story first published: Monday, October 2, 2023, 10:30 [IST]
Other articles published on Oct 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+