Asian Para Games 2023: 400 ಮೀಟರ್ ಓಟದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ದೀಪ್ತಿ ಜೀವನಜಿ; ಭಾರತದ ಪದಕ ಪಟ್ಟಿ
ಮಂಗಳವಾರ, ಅಕ್ಟೋಬರ್ 24ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ ಮಹಿಳೆಯರ 400 ಮೀಟರ್-ಟಿ20 ಓಟದಲ್ಲಿ ದೀಪ್ತಿ ಜೀವನಜಿ ಭಾರತಕ್ಕೆ ಎಂಟನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು ಮತ್ತು ಹೊಸ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು.
ಭಾರತದ ದೀಪ್ತಿ ಜೀವನಜಿ 56.69 ಸೆಕೆಂಡ್‌ಗಳ ದಾಖಲೆಯ ಸಮಯದೊಂದಿಗೆ, ಥಾಯ್ಲೆಂಡ್‌ನ ಒರಾವನ್ ಕೈಸಿಂಗ್ ಅವರಿಗಿಂತ ಮೊದಲು ಅಗ್ರ ಪೋಡಿಯಂ ಫಿನಿಶ್ ಮಾಡಿದರು.

ಥಾಯ್ಲೆಂಡ್ ಸ್ಪರ್ಧಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು 59.00 ಸೆಕೆಂಡ್‌ಗಳನ್ನು ನೀಡಿದರು ಮತ್ತು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ಪುರುಷರ 400 ಮೀ-ಟಿ64 ಫೈನಲ್‌ನಲ್ಲಿ ಭಾರತದ ಅಜಯ್ ಕುಮಾರ್ 54.85ರ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕ ಗೆದ್ದರು.
ಭಾರತದ ಮತ್ತೊಬ್ಬ ಸ್ಪರ್ಧಿ ಶರತ್ ಮಾಕನಹಳ್ಳಿ ಶಂಕರಪ್ಪ ಪುರುಷರ 5000 ಮೀ-ಟಿ13 ವಿಭಾಗದಲ್ಲಿ ಸ್ವರ್ಣ ಗೆದ್ದು ಭಾರತದ ಚಿನ್ನದ ಪದಕಗಳನ್ನು ಒಂಬತ್ತಕ್ಕೆ ಏರಿಸಿದರು.

ಇದೇ ವೇಳೆ ಭಾರತದ ನೀರಜ್ ಯಾದವ್, ಯೋಗೇಶ್ ಕಥುನಿಯಾ ಮತ್ತು ಮುತ್ತುರಾಜ ಅವರು ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56 ರಲ್ಲಿ ಪದಕದ ವೇದಿಕೆಯನ್ನು ಪಡೆದರು. ಈ ಮೂಲಕ ಈವರೆಗೆ ಭಾರತವು 10 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.
ಇದಕ್ಕೂ ಮೊದಲು ಕ್ಯಾನೋ ಪುರುಷರ ಕೆಎಲ್3 ಫೈನಲ್ ಸ್ಪರ್ಧೆಯಲ್ಲಿ ಮನೀಶ್ ಕೌರವ್ ಕಂಚಿನ ಪದಕವನ್ನು ಪಡೆದರು. ಸೋಮವಾರ ನಡೆದ ಮಹಿಳೆಯರ ವಿಎಲ್2 ಫೈನಲ್‌ನಲ್ಲಿ ಬೆಳ್ಳಿ ಗೆದ್ದ ನಂತರ ಪ್ರಾಚಿ ಯಾದವ್ ಕ್ಯಾನೋ ಮಹಿಳೆಯರ ಕೆಎಲ್2 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
ಸದ್ಯ ಭಾರತದ ಪ್ಯಾರ್ ಸ್ಪರ್ಧಿಗಳು 10 ಚಿನ್ನ, 12 ಬೆಳ್ಳಿ ಹಾಗೂ 13 ಕಂಚು ಸೇರಿದಂತೆ 35 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಇರಾನ್ ಮತ್ತು ಉಜ್ಬೇಕಿಸ್ತಾನ್ ಅಗ್ರ ಮೂರು ಸ್ಥಾನಗಳನ್ನು ಪಡೆದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications