Asian Para Games 2023: ಪುರುಷರ 5000 ಮೀ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಅಂಕುರ್ ಧಾಮ
ಸೋಮವಾರ, ಅಕ್ಟೋಬರ್ 23ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ ಪುರುಷರ 5000 ಮೀಟರ್ ಟಿ11 ಸ್ಪರ್ಧೆಯಲ್ಲಿ ಭಾರತದ ಅಂಕುರ್ ಧಾಮ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
29 ವರ್ಷದ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂಕುರ್ ಧಾಮ 16:37.29 ನಿಮಿಷಗಳಲ್ಲಿ ಗುರಿಯನ್ನು ಪೂರ್ಣಗೊಳಿಸಿದ ನಂತರ ಪದಕದ ವೇದಿಕೆಯಲ್ಲಿ ಸ್ಥಾನವನ್ನು ಪಡೆದರು.

ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ ಭಾರತದ ಅಭಿಯಾನದಲ್ಲಿ ಸೋಮವಾರ 12 ಪದಕಗಳನ್ನು ಸೇರಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಇದರಲ್ಲಿ 5 ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿವೆ.
ಸೋಮವಾರ ಮುಂಜಾನೆ, ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ ಭಾರತವು ಎಲ್ಲಾ ಮೂರು ಪದಕಗಳನ್ನು ಗೆದ್ದುಕೊಂಡಿತು ಮತ್ತು ಪ್ರಣವ್ ಸೂರ್ಮಾ ಚಿನ್ನದ ಪದಕ ಗೆದ್ದರು.
29ರ ಹರೆಯದ ಪ್ರಣವ್ ಸೂರ್ಮಾ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು 30.01 ಮೀಟರ್‌ಗಳ ಪ್ರಯತ್ನದಲ್ಲಿ ಮುರಿದರೆ, ಧರಂಬೀರ್ (28.76 ಮೀ) ಮತ್ತು ಅಮಿತ್ ಕುಮಾರ್ (26.93 ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.
ಶೂಟರ್ ಅವನಿ ಲೆಖರಾ ಕೂಡ ಮಹಿಳೆಯರ ಆರ್2 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ವಿಭಾಗದಲ್ಲಿ 249.6ರಷ್ಟು ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.
ಪುರುಷರ ಹೈಜಂಪ್ ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ 2.02 ಮೀಟರ್ ಎತ್ತರವನ್ನು ಎಸೆದು ಭಾರತದ ಮೂರನೇ ಚಿನ್ನದ ಪದಕವನ್ನು ಗೆದ್ದರೆ, ಭಾರತದವರೇ ಆದ ರಾಮ್ ಪಾಲ್ 1.94 ಮೀಟರ್ ಪ್ರಯತ್ನದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಭಾರತದ ಮೂವರು ಅಥ್ಲೀಟ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಆದಾಗ್ಯೂ, ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿ (ಎಪಿಸಿ) ನಿಯಮಗಳ ಅಡಿಯಲ್ಲಿ, ಕೇವಲ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ನೀಡಲಾಯಿತು.
2023ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶೈಲೇಶ್ ಕುಮಾರ್ 1.82 ಮೀ ದಾಖಲೆಯ ಜಿಗಿತದೊಂದಿಗೆ ಸ್ವರ್ಣ ಪದಕ ಪಡೆದರೆ, ಮರಿಯಪ್ಪನ್ ತಂಗವೇಲು 1.80 ಮೀ ಜಿಗಿತದೊಂದಿಗೆ ಬೆಳ್ಳಿಗೆ ಮುತ್ತಿಕ್ಕಿದರು.
1.78 ಮೀ ಜಿಗಿದ ಗೋವಿಂದಭಾಯಿ ರಾಮಸಿಂಗ್‌ಭಾಯ್ ಪಾಧಿಯಾರ್ ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿ (ಎಪಿಸಿ) ನಿಯಮಗಳ ಪ್ರಕಾರ ಕಂಚಿನ ಪದಕಕ್ಕೆ ಅರ್ಹತೆ ಪಡೆಯಲಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications