For Quick Alerts
ALLOW NOTIFICATIONS  
For Daily Alerts

ಪ್ಯಾರಾ ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಕನ್ನಡತಿ ರಕ್ಷಿತಾ ರಾಜು

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕರ್ನಾಟಕದ ಮೂಡಿಗೆರೆಯ ಕ್ರೀಡಾಪಟು ರಕ್ಷಿತಾ ರಾಜು ಕೂಡ ಇದೀಗ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶವೇ ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ.

ಅಂಧ ಓಟಗಾರ್ತಿಯಾಗಿರುವ ರಕ್ಷಿತಾ ರಾಜು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬುಧವಾರ ನಡೆದ ಟಿ-11 ಸ್ಪರ್ಧೆಯಲ್ಲಿ 5 ನಿಮಿಷ 21.45 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದವರೇ ಆದ ಕಿಲ್ಲಕ ಲಲಿತಾ ಎರಡನೇ ಸ್ಥಾನವನ್ನು ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

Asian Para Games 2023: Rakshitha Raju Wins Gold Medal in in Womens 1500m-T11

ಇನ್ನು ರಕ್ಷಿತಾ ರಾಜು ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. "ಈ ಅಸಾಧಾರಣವಾದ ಪ್ರದರ್ಶನ ಮತ್ತು ಅಚಲವಾದ ಸಮರ್ಪಣೆ ಭಾರತದ ಹೃದಯಗಳನ್ನು ಸಂತೋಷ ಮತ್ತು ಮೆಚ್ಚುಗೆಯಿಂದ ತುಂಬುವಂತೆ ಮಾಡಿದೆ. ಇನ್ನಷ್ಟು ಅಮೋಘ ಸಾಧನೆಗಳನ್ನು ಮಾಡುತ್ತಾ ಮುನ್ನುಗ್ಗಲಿ" ಎಂದು ಹಾರೈಸಿದ್ದಾರೆ.

ಇನ್ನು ಇದಕ್ಕೂ ಮುನ್ನ ಪುರುಷರ ಜಾವೆಲಿನ್ ಎಫ್ 64 ವಿಭಾಗದಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತ ಅತ್ಯುತ್ತಮ ರೀತಿಯಲ್ಲಿ ಪ್ರಾರಂಭಿಸಿತು ಮತ್ತು ತನ್ನದೇ ಆದ ವಿಶ್ವ ದಾಖಲೆಯನ್ನು ಉತ್ತಮಗೊಳಿಸಿದೆ. ಮತ್ತೊಂದು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಹ್ಯಾನಿ ಚಿನ್ನ ಗೆದ್ದರು. ಭಾರತದ ಸ್ಪರ್ಧಿಗಳು ಇಲ್ಲಿಯವರೆಗೆ ಸ್ಪರ್ಧೆಯಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇನ್ನು ಮಂಗಳವಾರ ಮಹಿಳೆಯರ 400 ಮೀಟರ್-ಟಿ20 ಓಟದಲ್ಲಿ ದೀಪ್ತಿ ಜೀವನಜಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟರು . ಹೊಸ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಭಾರತದ ದೀಪ್ತಿ ಜೀವನಜಿ 56.69 ಸೆಕೆಂಡ್‌ಗಳ ದಾಖಲೆಯ ಸಮಯದೊಂದಿಗೆ, ಥಾಯ್ಲೆಂಡ್‌ನ ಒರಾವನ್ ಕೈಸಿಂಗ್ ಅವರಿಗಿಂತ ಮೊದಲು ಅಗ್ರ ಪೋಡಿಯಂ ಫಿನಿಶ್ ಮಾಡಿದರು. ಇದು ಭಾರತದ 8ನೇ ಚಿನ್ನದ ಪದಕವಾಗಿತ್ತು.
ಥಾಯ್ಲೆಂಡ್ ಸ್ಪರ್ಧಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು 59.00 ಸೆಕೆಂಡ್‌ಗಳನ್ನು ನೀಡಿದರು ಮತ್ತು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪುರುಷರ 400 ಮೀ-ಟಿ64 ಫೈನಲ್‌ನಲ್ಲಿ ಭಾರತದ ಅಜಯ್ ಕುಮಾರ್ 54.85ರ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕ ಗೆದ್ದರು.

ಭಾರತದ ಮತ್ತೊಬ್ಬ ಸ್ಪರ್ಧಿ ಶರತ್ ಮಾಕನಹಳ್ಳಿ ಶಂಕರಪ್ಪ ಪುರುಷರ 5000 ಮೀ-ಟಿ13 ವಿಭಾಗದಲ್ಲಿ ಸ್ವರ್ಣ ಗೆದ್ದು ಭಾರತದ ಚಿನ್ನದ ಪದಕಗಳನ್ನು ಒಂಬತ್ತಕ್ಕೆ ಏರಿಸಿದರು. ಇದೇ ವೇಳೆ ಭಾರತದ ನೀರಜ್ ಯಾದವ್, ಯೋಗೇಶ್ ಕಥುನಿಯಾ ಮತ್ತು ಮುತ್ತುರಾಜ ಅವರು ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56 ರಲ್ಲಿ ಪದಕದ ವೇದಿಕೆಯನ್ನು ಪಡೆದರು.

ಇನ್ನು ಒಟ್ಟಾರೆಯಾಗಿ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಈವರೆಗೆ 64 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ 15 ಚಿನ್ನ 20 ಬೆಳ್ಳಿ ಹಾಗೂ 29 ಕಂಚಿನ ಪದಕಗಳು ಒಳಗೊಂಡಿದೆ.

Story first published: Thursday, October 26, 2023, 9:51 [IST]
Other articles published on Oct 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+