Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಯಾರಾ ಶೂಟಿಂಗ್ ವಿಶ್ವಕಪ್‌: ವಿಶ್ವ ದಾಖಲೆ ಮಾಡಿದ ಭಾರತದ ಅವನಿ ಲೆಖರಾ

Avani Lekhara

ಫ್ರಾನ್ಸ್‌ನ ಚಟೇರೊದಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ಈವೆಂಟ್‌ನಲ್ಲಿ ಭಾರತದ ಅವನಿ ಲೆಖರಾ ವಿಶ್ವದಾಖಲೆ ಮಾಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ ಚಾಂಪಿಯನ್ ಅವನಿ ಲೆಖರಾ ಮಂಗಳವಾರ ನಡೆದ ಈವೆಂಟ್‌ನಲ್ಲಿ 250.6 ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಇವರ ಜೊತೆಗೆ ಶ್ರೀಹರ್ಷ ದೇವರೆಡ್ಡಿ ಕೂಡ ಚಿನ್ನದ ಪದಕವನ್ನೂ ತಮ್ಮದಾಗಿಸಿಕೊಂಡರು. ಇಬ್ಬರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದನೆ ಸಲ್ಲಿಸಿದ್ದಾರೆ.

2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಇಪ್ಪತ್ತು ವರ್ಷದ ಅವನಿ ತನ್ನದೇ ಆದ 249.6 ರ ವಿಶ್ವ ದಾಖಲೆಯನ್ನು ಮುರಿದರು. ಪೋಲೆಂಡ್‌ನ ಎಮಿಲಿಯಾ ಬಾಬ್ಸ್ಕಾ 247.6 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, 225.6 ಅಂಕ ಗಳಿಸಿದ ಸ್ವೀಡನ್‌ನ ಅನ್ನಾ ನಾರ್ಮನ್ ಕಂಚಿನ ಪದಕ ಪಡೆದರು.

ರೈಫಲ್ ಈವೆಂಟ್‌ಗಳ SH1 ವಿಭಾಗದಲ್ಲಿ, ವಿಕಲಚೇತನ ಹೊಂದಿರುವ ಶೂಟರ್‌ಗಳು ಭಾಗವಹಿಸುತ್ತಾರೆ. ಅವರ ಕೋಚ್ ಮತ್ತು ಸಹಾಯಕರಿಗೆ ಆರಂಭದಲ್ಲಿ ವೀಸಾ ನಿರಾಕರಿಸಿದ್ದರಿಂದ ಅವನಿ ಪಂದ್ಯಾವಳಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದರು. ಆದರೆ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯದ ಮಧ್ಯಪ್ರವೇಶದ ನಂತರ ಸಮಸ್ಯೆಯನ್ನು ಬಗೆಹರಿಸಲಾಯಿತು.

ಚಿನ್ನದ ಪದಕ ಗೆದ್ದಿರುವ ಅವನಿ ಲೇಖರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನೀವು ಯಾವಾಗಲೂ ಹೊಸ ಎತ್ತರಗಳನ್ನು ಮುಟ್ಟಲಿ ಮತ್ತು ಇತರರಿಗೆ ಸ್ಫೂರ್ತಿ ನೀಡುತ್ತಿರಲಿ ಎಂದು ಹಾರೈಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಚಿನ್ನ ಗೆದ್ದ ಉಭಯ ಆಟಗಾರರನ್ನು ಅಭಿನಂದಿಸಿದ್ದಾರೆ.

Story first published: Thursday, June 9, 2022, 9:40 [IST]
Other articles published on Jun 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+